ಬಂಟ್ವಾಳ: ಸಜೀಪ ನಡು ಗ್ರಾ.ಪಂ. ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪರಮೇಶ್ವರ ಐತಾಳ್ರವರ ಬೀಳ್ಕೋಡುಗೆ ಸಮಾರಂಭ ಬಿ.ಸಿರೋಡಿನ ಸ್ತ್ರೀಶಕ್ತಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷ ಯಶವಂತ ಡಿ. ವಹಿಸಿದ್ದರು. ಗ್ರಾಮದ ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾದದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಸಮಸ್ಯೆಗಳನ್ನು ತಿಳಿದುಕೊಂಡು ಸಮಾಜದ ಪೂರಕವಾಗಿ ಕೆಲಸ ಮಾಡಿದಾಗ ಅಂತಹ ಅಧಿಕಾರಿಗಳನ್ನು ನಿವೃತ್ತಿಯ ನಂತರವೂ ಜನ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿಪ್ರೀಯಂ ಮೀರಾಂದ, ತಾ.ಪಂ. ವ್ಯವಸ್ಥಾಪಕ ನಾಗೇಶ್, ಲೆಕ್ಕಾಧಿಕಾರಿ ದಯಾವತಿ, ಅಭಿವೃಧ್ದಿ ಅಧಿಕಾರಿಗಳ ಸಂಘದ ಅಧ್ಯಕ್ಷ ಗೋಕುಲ್ದಾಸ್ ಭಕ್ತ, ಮಂಜು ವಿಟ್ಲ, ಯಾದವ, ಅಶೋಕ ಉಪಸ್ಥಿತರಿದ್ದರು.
ಅಭಿವೃದ್ದಿ ಅಧಿಕಾರಿ ಶಿವಾನಂದ ಸ್ವಾಗತಿಸಿ, ಹರೀಶ್ ವಂದಿಸಿದರು. ಕರೀಂ ಕಾರ್ಯಕ್ರಮ ನಿರ್ವಹಿಸಿದರು.
