ಕೈಕಂಬ:ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಟ್ಯೆಲರಿಂಗ್ ತರಬೇತಿಯಂತಹ ಹಲವು ಯೋಜನೆಗಳು ಕೆಂದ್ರ ಸರಕಾರದಿಂದ ಪಾಲಿಟೆಕ್ನಿಕ್ ಗಳ ಸಮುದಾಯ ಅಭಿವೃದ್ದಿ ಯೋಜನೆಯು ಮಹಿಳೆಯರಿಗೆ ಸ್ವಉದ್ಯೋಗವನ್ನು ಮಾಡಲು ಪ್ರೇರಣೆ ನೀಡಿದೆ. ಹೆಣ್ಣು ಮಕ್ಕಳು ಮನೆಯಲ್ಲೆಕೂರದೆ ಇಂತಹ ತರಬೇತಿಯಲ್ಲಿ ಪಾಲ್ಗೋಂಡು ಸ್ವಂತ ದುಡಿಮೆಯಲ್ಲಿ ಹೆಚ್ಚು ಆದಾಯ ಗಳಿಸಲು ಟೈಲರಿಂಗ್ ತರಬೇತಿಯಂತಹ ಯೋಜನೆಯು ಅವಸ್ಯಕವಾಗಿದೆ ಎಂದು ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಹೇಳಿದರು.

ಅವರು ಸೆ.1ರಂದು ಮಂಗಳವಾರ ಬೊಂದೆಲ್ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಮಂಗಳೂರು ಇಲ್ಲಿಯ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಸಮುದಾಯ ಅಭಿವೃದ್ದಿ ಯೋಜನೆ ಹಾಗೂ ಶ್ರೀ ರಾಮಕೃಷ್ಣ ತಪೋವನದ ಜಂಟಿ ಆಶ್ರಯದಲ್ಲಿ ಶಾರದಾ ಮಾ ಹೊಲಿಗೆ ತರಬೇತಿ ಕೇಂದ್ರದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಇದರ ಉದ್ಘಾಟನೆಯನ್ನು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಬಿ.ಎನ್ ಕುಂಬಾರ್ ನೆರವೇರಿಸಿದ ಅವರು ಹೊಲಿಗೆ ತರಬೇತಿಯು ಸುಮಾರು ನಾಲ್ಕು ತಿಂಗಳ ಕೋರ್ಸ್ ಇದಾಗಿದ್ದು ಇದರ ಪ್ರಯೋಜನವನ್ನು ಆಸುಪಾಸಿನ ಹೆಣ್ಣುಮಕ್ಕಳು , ಮಹಿಳೆಯರು ಪಡೆದು ಸ್ವಂತ ದುಡಿಮೆಯಲ್ಲಿ ಹೆಚ್ಚು ಲಾಭಗಳಿಸಿ ಎಂದರು.
ಈ ಸಂದರ್ಭದಲ್ಲಿ ಸಿ.ಡಿ ಟಿ. ಯೋಜನೆಯ ಶಿವಪ್ರಸಾದ್ ರೈ,ಅನುಪಮಾ, ರಾಕೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ಹಾಗೂ ಹೊಲಿಗೆ ತರಬೇತಿ ಶಿಕ್ಷಕಿ ಗೀತಾ ಉಪಸ್ಥಿತರಿದ್ದರು. ಸಂಧ್ಯಾ ಸ್ವಾಗತಿಸಿ ಸರಸ್ವತಿ ವಂದಿಸಿ ಸುಮತಿ ಕಾರ್ಯಕ್ರಮ ನಿರೂಪಿಸಿದರು.











