ಬಂಟ್ವಾಳ :ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮ ಪಂಚಾಯತ್ ವತಿಯಿಂದ ಘನತ್ಯಾಜ್ಯ ನಿರ್ವಹಣೆ ಪೈಪ್ ಕಾಂಪೋಸ್ಟ್ ಕಾರ್ಯಕ್ರಮ ದ.ಕ.ಜಿ.ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರು ನಲ್ಲಿ ಜರಗಿತು.
ಗ್ರಾ.ಪಂ ಅಧ್ಯಕ್ಷರು ಶ್ರೀಮತಿ ಆಸ್ಯಮ್ಮ ಕಾರ್ಯಕ್ರಮ ಉಧ್ಘಾಟಿಸಿದರು. ಉಪಾಧ್ಯಕ್ಷರು ಶ್ರೀ ಚಂದ್ರಶೇಖರ ರೈ, ಎಸ್ ಡಿ ಎಮ್.ಸಿ ಅಧ್ಯಕ್ಷರು ಶ್ರೀ ಇಸ್ಮಾಯಿಲ್, ಗ್ರಾ.ಪಂ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಟ್ರೆಸ್ಸಿ ರೋಡ್ರಿಗಸ್ ಗ್ರಾಮ ಪಂಚಾಯತ್ ಸದಸ್ಯರು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
