ಮೂಡುಬಿದರೆ: ಸಹಕಾರ ಸಂಘಗಳ ಪ್ರಗತಿಯಲ್ಲಿ ಸದಸ್ಯರ ಪಾತ್ರ ರಾಜ್ಯಮಟ್ಟದ ಕಾರ್ಯಗಾರವು ಎಂಸಿಎಸ್(ಮೂಡುಬಿದರೆ ಕೋ ಆಪರೇಟಿವ್ ಸರ್ವೆಸ್ ಬ್ಯಾಂಕ್) ಹಾಗೂ ಧವಲಾ ಕಾಲೇಜಿನ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಸಹಯೋಗದಲ್ಲಿ ಶನಿವಾರ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಸಹಕಾರಿ ಧುರೀಣ ಎನ್.ಎಸ್.ಗೋಖಲೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಾ, ಜಿಲ್ಲೆಯಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ನಾಲ್ಕುಸಾವಿರ ಕೋಟಿ ರೂಪಾಯಿ ಯಷ್ಟು ಠೇವಣಿಯಿದೆ. ಸಹಕಾರಿ ಸಂಸ್ಥೆಗಳು ಲಾಭದಾಯಕವಾಗಿ ನಡೆಯುತ್ತಿದ್ದು ಕೃಷಿಕರಿಗೆ ತ್ವರಿತಗತಿಯಲ್ಲಿ ಸಾಲಸೌಲಭ್ಯಗಳನ್ನು ನೀಡುತ್ತಿದೆ. ಹೀಗಾಗಿ ಈ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿಲ್ಲ ಎಂದರು.
mbd_aug22_2
ಎಂ.ಸಿ.ಎಸ್.ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಪ್ರಾಧ್ಯಾಪಕ ಯಶವಂತ ಡೋಂಗ್ರೆ ದಿಕ್ಸೂಚಿ ಭಾಷಣ ಮಾಡಿದರು. ದ.ಕ.ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ ಮುಖ್ಯ ಅತಿಥಿಯಾಗಿದ್ದರು.
ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಧಾ `ಸಹಕಾರ ಸಂಘಗಳಲ್ಲಿ ಸಾರ್ವಜನಿಕ ಸಂಪರ್ಕ’ ಧವಳಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಗೋಪಾಲ್ `ಸಹಕಾರಿ ಸಂಘಗಳಿಗೆ ಸಂಬಂಧಪಟ್ಟಂತೆ 97ನೇ ತಿದ್ದುಪಡಿ – ಆಶಯ ಮತ್ತು ಪರಿಣಾಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಮೂಡುಬಿದರೆ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮೆನೇಜ್ಮೆಂಟ್ ಪರೀಕ್ಷೆಯಲ್ಲಿ ಬ್ಯಾಂಕ್ಗಳಿಸಿದ ಮೂವರು ವಿದ್ಯಾರ್ಥಿಗಳು ಹಾಗೂ ಧವಲಾ ಕಾಲೇಜಿನ ಬಿಬಿಎಂ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು.
ಮೂಡುಬಿದರೆ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮೆನೇಜ್ಮೆಂಟ್ನ ಪ್ರಾಂಶುಪಾಲೆ ಶ್ಯಾಮಲಾ, ಬ್ಯಾಂಕಿನ ಉಪಾಧ್ಯಕ್ಷೆ ಜಾರ್ಜ್ ಮೋನಿಸ್, ನಿರ್ದೇಶಕ ಪದ್ಮನಾಭ ಉಪಸ್ಥಿತರಿದ್ದರು. ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *