billava
ಸುದ್ದಿ9 ಬಂಟ್ವಾಳ(ಜ.17): ಯುವವಾಹಿನಿ ಬಂಟ್ವಾಳ ಘಟಕದ ರಜತ ಸಂಭ್ರಮ ಶ್ರೀನಾರಾಯಣ ಗುರು ಸಂದೇಶ ಯಾತ್ರೆ ಹಾಗೂ ಯುವ ಬಿಲ್ಲವ ಸಮಾವೇಶ ಜ.19 ಭಾನುವಾರ ಬಿ.ಸಿ.ರೋಡ್ ಗಾಣದಪಡ್ಪು ಶ್ರೀನಾರಾಯಣಗುರು ನಗರದಲ್ಲಿ ನಡೆಯಲಿದೆ ಎಂದು ಯುವ ವಾಹಿನಿ ಅಧ್ಯಕ್ಷ ಭುವನೇಶ್ ಪಚಿನಡ್ಕ ತಿಳಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು ಸಮಾವೇಶಕ್ಕಾಗಿ ಕಾಂತಬಾರೆ ಬೂದಬಾರೆ ಹೆಸರಿನ ವಿಶಾಲವಾದ ಸಭಾಂಗಣ, ಕೋಟಿಚೆನ್ನಯ ಹೆಸರಿನ ಆಕರ್ಷಣೀಯ ವೇದಿಕೆ ಸಿದ್ಧಗೊಳ್ಳುತ್ತಿದೆ. ಸಮಾವೇಶದಲ್ಲಿ 25ಸಾವಿರಗಳಿಗಿಂತಲು ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಬೆಳಗ್ಗೆ 9.30ಕ್ಕೆ ಸಪ್ತಮ ದಿಕ್ಕುಗಳಿಂದ ಶ್ರೀ ನಾರಾಯಣ ಗುರು ಸಂದೇಶ ಯಾತ್ರೆ ಬಂದು ಬಿ.ಸಿ.ರೋಡು ಕೈಕಂಬ ಪೊಳಲಿ ದ್ವಾರ ಬಳಿ ಸಮಾವೇಶಗೊಳ್ಳಲಿದ್ದು, ಅಲ್ಲಿಂದ ವಿವಿಧ ಟ್ಯಾಬ್ಲೋ ವಾಧ್ಯಗೋಷ್ಟಿಗಳೊಂದಿಗೆ ರಾಜ ರಸ್ಥೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ನಾರಾಯಣಗುರು ನಗರಕ್ಕೆ ತಲಪಲಿದೆ. ಬೆಳಗ್ಗೆ 11 ಗಂಟೆಗೆ ನಡೆಯುವ ರಜತ ಸಂಭ್ರಮ ಹಾಗೂ ಯುವ ಬಿಲ್ಲವ ಸಮಾವೇಶದಲ್ಲಿ ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಆಶರ್ೀವಚನ ನೀಡಲಿದ್ದಾರೆ. ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಸಮಾವೇಶವನ್ನು ಉದ್ಘಾಟಿಸುವರು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪ್ರ್ರಧಾನ ಭಾಷಣ ಮಾಡುವರು.
ಕನರ್ಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾರಾಯಣ ಸ್ವಾಮಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಚಿವ ವಿನಯ ಕುಮಾರ್ ಸೊರಕೆ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ವಸಂತ ಬಂಗೇರ, ಮಧು ಭಂಗಾರಪ್ಪ, ಮಾಜಿ ಸಚಿವ ರುಕ್ಮಯ ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಉದ್ಯಮಿಗಳಾದ ರಮೇಶ್ ಕುಮಾರ್, ಧೀರಜ್ ಅಮೀನ್, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರವಿಚಂದ್ರ ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ ಮಂಗಳೂರು ಗಾನ ನೃತ್ಯ ಆಕಾಡೆಮಿಯವರಿಂದ ನೃತ್ಯ ರೂಪಕ, ಫ್ರೆಂಡ್ಸ್ ಮಂಗಳೂರು ತಂಡದಿಂದ `ತೆಲಿಕೆ ಬಾಯಿ ನಿಲಿಕೆ’, ಅಶೋಕ್ ಪೊಳಲಿ ಅವರಿಂದ ವಿಭಿನ್ನ ಶೈಲಿಯ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಭುವನೇಶ್ ವಿವರಿಸಿದರು. ಸಂಚಾಲಕ ಜಿತೇಂದ್ರ ಜೆ. ಸುವರ್ಣ ಉಪಾಧ್ಯಕ್ಷ ರಾಜೇಶ್ ಸುವರ್ಣ ಬಿ.ಸಿ.ರೋಡು, ಪದಾಧಿಕಾರಿಗಳಾದ ತಾರಾನಾಥ ಕೆ, ಪ್ರಕಾಶ್ ಅಂಚನ್, ಪ್ರೇಮ್ನಾಥ ಕೆ, ಹರೀಶ್ ಕೋಟ್ಯಾನ್, ವಿವೇಕಾನಂದ ಪೂಜಾರಿ, ಗಣೇಶ ಪೂಂಜೆರೆಕೋಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *