ಭಾರತ ರಾಷ್ಟ್ರದ ಧರ್ಮ ಮಾರ್ಮಿಕವಾದದ್ದು: ಒಡಿಯೂರು ಸ್ವಾಮೀಜಿ
ಮುಂಬಯಿ: ಜಗತ್ತಿಗೆ ಭಾರತದ ಮಹತ್ವ ಯಾಕೆ ಅಂದರೆ ರಾಷ್ಟ್ರದ ಧರ್ಮ ಸೂತ್ರವೇ ಇದಕ್ಕೆ ಕಾರಣ. ಇಲ್ಲಿನ ಧರ್ಮ ಮಾರ್ಮಿಕವಾಗಿದ್ದು, ಧರ್ಮದ ಮರ್ಮವೂ ಅಷ್ಟೇ ಸೂಕ್ಷ್ಮವಾದದ್ದು. ಇಲ್ಲಿನ ಸತ್ಯ, ಧರ್ಮ, ಸ್ವಅಧ್ಯಯಗಳ ಮೂರು ಸೂತ್ರಗಳಿಂದ ಬದುಕು ಸಫಲಗುವುದು ಎಂದು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ ಕ್ಷೇತ್ರ ಒಡಿಯೂರುನ ಗುರುದೇವಾನಂದಸ್ವಾಮೀಜಿ ತಿಳಿಸಿದರು. ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ನೆರವೇರಿಸಲ್ಪಟ್ಟ ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ 16ನೇ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಭಕ್ತಾಧಿಗಳನ್ನು ಆಶೀರ್ವದಿಸಿ ಮಾತನಾಡಿ ನಮ್ಮಲ್ಲಿನ ಸ್ವಾರ್ಥದ ಸ್ವಾತಂತ್ರ್ಯ ದುರದೃಷ್ಟಕರ. ಇದು ಮಿತ್ರತ್ವದಲ್ಲೂ ಸ್ವಾರ್ಥ ಸಾಧಿಸುತ್ತಿದೆ. ಮಿತ್ರತ್ವಹೇಗಿರಬೇಕು ಎಂದರೆ ಅದು ಪರಿಶುದ್ಧತ್ವದಿಂದ ಕೂಡಿರಬೇಕು. ಎರಡು ಜೀವಗಳೊಳಗಿನ ಪರಿಶುದ್ಧವಾದ ಸಂಬಂಧವೇ ನಿಜವಾದ ಮಿತ್ರತ್ವ. ಕಲುಶಿತ ವಿಲ್ಲದಿರುವುದೇ ಮಿತ್ರತ್ವ. ಧರ್ಮವೇ ನಿಜವಾದ ಮಿತ್ರ. ಮಾನವನು ನಿಜವಾದ ಬದುಕನ್ನು ಪ್ರೀತಿಯ ಮೂಲಕ ಗಳಿಸಲು ಸಾಧ್ಯ. ಪ್ರೀತಿಯಿಂದಲೇ ಯಶಸ್ಸು ಸಂಪತ್ತು ಗಳಿಕೆ ಸಾಧ್ಯ. ಆದುದರಿಂದ ಬದುಕಿನ ಆರಂಭ ಅಂತ್ಯದ ಅರಿವು ನಮಗಿರಲಿ. ಜೊತೆಗೆ ಅಧ್ಯಾತ್ಮಿಕತೆಯ ಸೂಕ್ಷ್ಮತೆಯೂ ಇರಲಿ. ಹೊರಗಿನ ಸ್ಪರ್ಶಕ್ಕಿಂತ ಒಳಗಿನ ಸ್ಪರ್ಶವನ್ನು ತಿಳಿದು ಪರಸ್ಪರ ಪ್ರೀತಿ ಬೆಳೆಸಿ ಬಾಳಿದಾಗಲೇ ಸಮಾಜದ ನಡುವಳಿಕೆ ಹಸನಾಗುವುದು ಎಂದೂ ಗುರುದೇವಾನಂದರು ನುಡಿದರು. ಸಮಾರಂಭದಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿ, ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮಾಜಿ ಅಧ್ಯಕ್ಷ ಮೆರ್ಕಳ ತ್ಯಾಂಪಣ್ಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಬಂಟ್ಸ್ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಬಂಟ್ಸ್ ನ್ಯಾಯ ಮಂಡಳಿ ಅಧ್ಯಕ್ಷಪದ್ಮನಾಭ ಎಸ್.ಪಯ್ಯಡೆ, ಶ್ರೀ ಮೂಕಾಂಬಿಕಾ ಮಂದಿರಘನ್ಸೋಲಿ ಇದರ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ಹಿರಿಯ ಹೊಟೇಲು ಉದ್ಯಮಿ ಅಣ್ಣಾವರ ಶಂಕರ್ ಶೆಟ್ಟಿ ವಾಶಿ ಅತಿಥಿಗಳಾಗಿ ವೇದಿಕೆಯಲ್ಲಿ ಆಸೀನರಾಗಿದ್ದರು. ಜ್ಞಾನದ ಅನುಭವಿಗಳೂ ಹಿರಿಯರೂ ಆದ ಭಕ್ತರ ಉಪಸ್ಥಿತಿ ಬಳಗದ ಮಹಾರಾಷ್ಟ್ರ ಘಟಕದ ವಾರ್ಷಿಕೋತ್ಸವ ಸಡಗರಕ್ಕೆ ಕಳೆ ನೀಡಿದೆ. ಪ್ರಜ್ಞೆ, ಆಸಕ್ತಿಮತ್ತುಪ್ರೀತಿಯಿಂದ ಗುರು ಬಂಧುಗಳ ವಿಶ್ವಾಸದಿಂದ ಈ ಸಂಸ್ಥೆ ಬೆಳೆದಿರುವುದು ಅಭಿನಂದನೀಯ. ಶ್ರೀಗಳು ಆಯಸ್ಕಾಂತ ಆಕರ್ಷಣೆಯಿಂದ ಕ್ಷೇತ್ರವನ್ನು ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬೆಳೆಸಿ ಅವಶ್ಯಕರ ಪಾಲಿಗೆ ಧೀಶಕ್ತಿಯಾಗಿ ಸಮಸ್ಯೆಗಳ ನಿವಾರಕರಾಗಿ ಭಕ್ತರ ಹೃದಯ ಗೆದ್ದವರು. ಇಂತಹ ಪೂಜ್ಯನೀಯರ ಸೇವೆಗೆ ಬಳಗದ ಮಹಾರಾಷ್ಟ್ರ ಘಟಕವು ಮತ್ತಷ್ಟು ಸೇವೆಯನ್ನೊದಗಿಸಲಿ. ಸಮಾಜ ಧೀಶಕ್ತಿಯಿಂದ ಮುನ್ನಡೆಯಲಿ ಎಂದು ಮಾತಾನಂದಮಯಿ ಆಶಯ ವ್ಯಕ್ತಪಡಿಸಿದರು. ಸುಮಾರು 18 ವರ್ಷ ಮೊದಲು ಉಪನಗರ ವಸಾಯಿಯಲ್ಲಿ ಸಾವಿರಾರು ಭಕ್ತರನ್ನು ಒಗ್ಗೂಡಿಸಿ ಬೆಳ್ಳಿರಥದಲ್ಲಿ ಕುಳಿರಿಸಿ ಭವ್ಯಸಡಗರದಲ್ಲಿಒಡಿಯೂರುಶ್ರೀಗಳನ್ನು ಗೌರವಿಸಿದ್ದೇವೆ. ನಾನು ಒಡಿಯೂರು ಕ್ಷೇತ್ರಕ್ಕೆ21 ವರ್ಷಗಳಿಂದ ನಿರಂತರ ಭೇಟಿ ನೀಡುತ್ತಿದ್ದು ನನ್ನ ಸ್ಥಾನಮಾನ ಜೀವನದ ಪ್ರಗತಿಗೆ ಶ್ರೀಗಳ ಅನುಗ್ರಹವೂ ಮಹತ್ವದ್ದಾಗಿದೆ. ಶ್ರೀಗಳನ್ನು ನಂಬಿದವರು ಸದಾ ಉನ್ನತಿ ಸಾಧಿಸಿದ್ದಾರೆ. ಒಡಿಯೂರು ಕ್ಷೇತ್ರದಿಂದ ವಿಟ್ಲ ಗ್ರಾಮವೇ ವಿಕಾಸಗೊಂಡಿದೆ ಎಂದು ಕರ್ನಿರೆ ವಿಶ್ವನಾಥ ಶೆಟ್ಟಿತಿಳಿಸಿದರು. ದೇವರ ಸೃಷ್ಟಿ ದೃಷ್ಟಿಯಲ್ಲಿ ಮನುಷ್ಯ ನೆಮ್ಮದಿಯನ್ನೇ ಬಯಸುತ್ತಾನೆ. ಮಾನವ ಭಯವನ್ನು ನಿವಾರಿಸುವಲ್ಲಿ ದೇವರೂಪ ಗುರುಗಳ ಅನುಗ್ರಹ ಮಾರ್ಗದರ್ಶನ ಲಭಿಸಿದಲ್ಲಿ ಜೀವನ ಪಾವನವಾಗುವುದು ಎಂದು ಅಣ್ಣಿ ಶೆಟ್ಟಿ ನುಡಿದರು. ತ್ಯಾಂಪಣ್ಣ ಶೆಟ್ಟಿಮಾತನಾಡಿ ಮನುಜರಲ್ಲಿ ಸೇವಾ ಭಾವನೆ ಅಗತ್ಯವಿರಬೇಕು. ಜೀವನದಲ್ಲಿನ ಕಷ್ಟ ನಷ್ಟಗಳನ್ನು ತಾವಾಗಿಯೇ ಕರಗಿಸಿಕೊಳ್ಳಬೇಕು. ಸಾಮಾಜಿಕ ಸೇವಕರು ಕೊಡುವಂತಹ ಕೆಲಸ ಮಾಡಬೇಕೆ ಹೊರತುಪಡಕೊಳ್ಳುವ ಕಾಯಕ ಬೆಳೆಸಿಕೊಳ್ಳಬಾರದು. ಬದುಕು ಹಸನಾಗಿಸಲು ಸಾಧುಸಂತರ ಕೃಪೆ, ಮಾರ್ಗದರ್ಶನಕ್ಕೆ ಮೊರೆಹೋದಲ್ಲಿ ಸೂಕ್ತ ಪರಿಹಾರ ದೊರಕುವುದು.ಇಂದು ಒಡಿಯೂರು ಶ್ರೇಷ್ಠ ಭಕ್ತಿ ಕ್ಷೇತ್ರವಾಗಿ ಮಾರ್ಪಡಿರುವುದು ಸಂತಸ ತಂದಿದೆಎಂದರು. ಗುರು ಎಂದರೆ ಕತ್ತಲೆ ದೂರ ಮಾಡುವವರು ಎಂದರ್ಥ. ಹಿಂದೂ ಧರ್ಮದಲ್ಲಿ ಗುರುವಿನ ಸ್ಥಾನ ಅತ್ಯಂತ ಪವಿತ್ರವಾದದ್ದು, ಗುರು ವರ್ಯರಿಂದಲೇ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಪೋಷಣೆ ಸಾಧ್ಯ. ಒಡಿಯೂರು ಶ್ರೀಗಳು ಅದಕ್ಕೆ ಬದ್ಧರಾಗಿ ನಮ್ಮೆಲ್ಲರಿಗೂ ಜೀವನ ಮುನ್ನಡೆಸಲು ಮಾರ್ಗದರ್ಶನ ನೀಡಿದ ಶ್ರೇಷ್ಠರು. ಕುಗ್ರಾಮವನ್ನು ಪ್ರಗತಿಯ ಸಂಗ್ರಮವನ್ನಾಗಿಸಲು ಶ್ರೀಗಳ ಧೀಮಂತ ಶಕ್ತಿಯೇ ಕಾರಣ. ಆದುದರಿಂದಲೇ ಭಕ್ತರ ಸಮಾಧಾನದ ಭಾವನಾ ಕೇಂದ್ರವಾಗಿ ಒಡಿಯೂರು ಮಾರ್ಪಟ್ಟಿದೆ ಎಂದು ಲತಾ ಜೆ.ಶೆಟ್ಟಿಅಭಿಪ್ರಾಯ ಪಟ್ಟರು. ನನಗೆ ಒಡಿಯೂರು ಸ್ವಾಮಿಗಳ ಮೇಲಿನ ವಿಶ್ವಾಸ ಅಪಾರವಾದದ್ದು. ಶ್ರೀಗಳ ಅನುಗ್ರಹದಿಂದ ನಾನೂ ಧಣ್ಯನೆನಿಸಿದ್ದೇನೆ. ಅವರೊಂದಿಗೆ ವೇದಿಕೆಯನ್ನಲಂಕರಿಸುವುದೂ ನನ್ನ ಭಾಗ್ಯ. ಶ್ರೀ ಗುರುದೇವಾನಂದರು ಒಡಿಯೂರುನ ಒಡೆಯರು ಎನ್ನುವ ಮನತೃಪ್ತಿ ನನಗಿದೆಎಂದು ಶ್ಯಾಮ ಶೆಟ್ಟಿಅಭಿಪ್ರಾಯ ವ್ಯಕ್ತ ಪಡಿಸಿದರು. ಪದ್ಮನಾಭ ಪಯ್ಯಡೆ ಮಾತನಾಡಿ ಶ್ರೀಗಳು ಬರೇ ಒಡಿಯೂರುವನ್ನು ಮಾತ್ರವಲ್ಲ ಮುಂಬಯಿಯನ್ನೇ ದತ್ತು ಸ್ವೀಕಾರ ಮಾಡಿದ್ದಾರೆ. ಶ್ರೀಗಳ ತುಳು ಭಾಷಾ ಅಭಿಮಾನ, ಸೇವಾರ್ಪಣಾ ಸದ್ಗುಣಗಳು ಶ್ರೇಷ್ಠವಾದದ್ದು. ನಾವು ಅವರಲ್ಲಿನ ಆಧ್ಯಾತ್ಮಿಕತೆಯ ಕಂಪನದ ಮಾನಸಿಕ ಚಿಂತನೆ ನಡೆಸಿ ಆಶೀರ್ವಾದ ಪಡೆದು ಧನ್ಯರಾಗಬೇಕು. ಒಡಿಯೂರುನ ಕಾಡಿನ ಮಧ್ಯೆ ನಾಡು ಬೆಳೆಸಿದ ಶ್ರೀಗಳು ಸರ್ವ ಶ್ರೇಷ್ಠರು ಎಂದರು. ಸನ್ಮಾನಕ್ಕೆ ಉತ್ತರಿಸಿದ ಸತೀಶ್ ಪಟ್ಲ ಇದು ನನಗೊಳಿದ ಮನೆ ಸನ್ಮಾನ ಎಂದು ಭಾವಿಸಿದ್ದೇನೆ. ನನ್ನ ಪ್ರೀತಿಯ ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಮನ್ನಿಸಿ ಗೌರವಿಸಿರುವುದು ಅಭಿಮಾನಾವೆಣಿಸಿದೆ. ಒಡಿಯೂರುಶ್ರೀಗಳು ನನ್ನ ಪರಮಗುರುಗಳಾಗಿದ್ದು ಅವರ ಕರೆಯನ್ನು ಮನ್ನಿಸಿ ಈ ಗೌರವವನ್ನು ಸ್ವೀಕರಿಸುತ್ತಿದ್ದೇನೆಎನ್ನುತ್ತಾ ಸ್ತುತಿ ಪದ್ಯ ಹಾಡಿನೊಂದಿಗೆ ವಿರಮಿಸಿದರು.


ಮನುಷ್ಯನಾದವನು ಜೀವನದಲ್ಲಿ ತ್ಯಾಗಮಾಡಬೇಕು ಆಮೂಲಕದ ಸೇವೆಯಿಂದ ತೃಪ್ತನಾಗಬೇಕು. ನನಗೆ ಸುಭಾಶ್ಚಂದ್ರ ಭೋಸ್ ಅವರ ಬದುಕು ಮಾರ್ಗದರ್ಶನವಾಗಿದ್ದು ಅವರ ಹಿಂಬಾಲಕನಾಗಿ ಶಿಸ್ತುಬದ್ಧ ಬದುಕು ರೂಪಿಸಿಕೊಂಡಿದ್ದೇನೆ. ದೇವಸ್ಥಾನ, ಸಂಸ್ಥೆಗಳ ಕಾರ್ಯಕ್ರಮಕ್ಕೆ ಹೋದರೆ ಅಲ್ಲಿ ಪುಕ್ಸಟ್ಟೆ ತಿನ್ನಬಾರದು. ನಿನ್ನೆಯವರ ಕೊಡುಗೆಯಿಂದ ನಾವು ಇಂದು ತಿನ್ನುತ್ತಿದ್ದು, ನಾಳಿನವರಿಗಾಗಿ ನಾವು ಇಂದು ವಂತಿಗೆ ನೀಡುವ ಗುಣ ಬೆಳೆಸಿ ಮಕ್ಕಳಲ್ಲೂ ಇದನ್ನು ಮೈಗೂಡಿಸಿರಿ. ನಮಗೆ ದೇವರ ದರ್ಶನದಲ್ಲೂ ಸ್ವಾರ್ಥ ಬೇಡ. ಒಡಿಯೂರುಶ್ರೀ ನಿತ್ಯಾನಂದರ ಅವತಾರವೇ ಸರಿ. ಅವರಲ್ಲಿ ವಿಶ್ವಾಸವಿರಿಸಿ ಬಾಳುತ್ತಾ ನಾಲ್ಕು ದಿನದಬದುಕು ಶುದ್ಧವಾಗಿ ಬಾಳಿರಿ ಎಂದು 95ರ ಕುಕ್ಯಾನ್ ನಿರರ್ಗಳವಾಗಿ ಮಾತನಾಡಿ ಸಭಿಕರಲ್ಲಿ ಅಚ್ಚರಿ ಮೂಡಿಸಿದರು. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಟಗಾರರೂ, ಶ್ರೀ ಅಂಬಿಕಾ ದೇವಸ್ಥಾನಮಲಾಡ್ ಪೂರ್ವ ಇದರ ಮುಂದಾಳು ನಾರಾಯಣ ಟಿ.ಕುಕ್ಯಾನ್ ಮತ್ತು ಹೆಸರಾಂತ ಭಾಗವತ ಸತೀಶ್ ಶೆಟ್ಟಿ ಪಟ್ಲಮತ್ತು ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಸ್ಥಾಪಕ ಹಾಗೂ ಪ್ರಸಕ್ತ ಅಧ್ಯಕ್ಷರಾಗಿ ಸೇವಾನಿರತರಾಗಿದ್ದು, ಇತ್ತೀಚೆಗೆ ಮಹಾರಾಷ್ಟ್ರ ಸರಕಾರದಿಂದ ರಾಷ್ಟ್ರೀಯ ತನಿಖಾ ಕರ್ತೃತ್ವ ಸಂಸ್ಥೆಗೆ ವಿಶೇಷ ವ್ಯಾಜ್ಯದಾರರಾಗಿ ನೇಮಕಗೊಂಡ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿಮತ್ತು ಕಿಶೋರಿ ಪ್ರಕಾಶ್ ಶೆಟ್ಟಿದಂಪತಿಯನ್ನು ಶ್ರೀಗಳು ಫಲಪುಷ್ಪ-ಮಂತ್ರಾಕ್ಷತೆಯನ್ನಿತ್ತು ಹಾಗೂ ಅತಿಥಿಗಳು ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರವನ್ನಿತ್ತು ಸನ್ಮಾನಿಸಿದರು. ಎಸ್‍ಎಸ್‍ಸಿ ಮತ್ತು ಹೆಚ್‍ಎಸ್‍ಸಿ ಪ್ರತಿಭಾವಂತ ವಿದ್ಯಾಥಿರ್sಗಳಿಗೆ ಬಹುಮಾನ ವಿತರಿಸಿ ಶ್ರೀಗಳು ಅಭಿನಂದಿಸಿದರು. ಸಾಧ್ವಿ ಶ್ರೀ ಮಾತಾನಂದಮಯಿ ಅವರ ಪ್ರಾರ್ಥನೆಯೊಂದಿಗೆ ಆದಿಗೊಂಡ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿಬಳಗದ ಅಧ್ಯಕ್ಷ ನ್ಯಾ| ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಇದು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದಹದಿನಾರನೇ ವಾರ್ಷಿಕ ಆಚರಣೆ ಆಗಿದ್ದರೂ ಮಹಾನಗರದಲ್ಲಿನ 18ನೇ ಸೇವಾ ವರ್ಷವಾಗಿದೆ. ವಿಶೇಷವಾಗಿ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಸಕ್ರೀಯವಾಗಿದೆ ಎನ್ನಲು ಸಂತೋಷ ಆಗುತ್ತದೆ. ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಸೇವೆ ವಿದ್ಯಾದಾನದ ಸೇವೆಗಳು ನಿತ್ಯನಿರಂತರವಾಗಿ ನಡೆಯುತ್ತಿದ್ದು, ಆರಾಧ್ಯ ಗೋಮಾತೆಯ ಆಶ್ರಯವೂ ನಡೆಸುತ್ತಿದು ಅಭಿಮಾನವೆಣಿಸುತ್ತಿದೆ. ಮಾತೃ ಭಾಷೆ ತುಳುವಿನ ಪೋಷಣೆಯಲ್ಲಿ ಶ್ರೀಕ್ಷೇತ್ರವೇ ಮುನ್ನಡೆಯಲ್ಲಿದ್ದು, ಮಧ್ಯ ವ್ಯಸನಿಗಳಿಗೆ ಪುನಃರ್ ಜೀವನ ನೀಡುವಲ್ಲೂ ಸಕ್ರೀಯವಾಗಿದೆ. ಕ್ಷೇತ್ರದ ಸೇವಾ ಭಾವನೆಸ್ತುತ್ಯರ್ಹ. ಒಡಿಯೂರು ತುಳುವರ ಆಸ್ತಿ ಆಗಿದ್ದಾರೆಎಂದರು. ಕರ್ನಿರೆ ವಿಶ್ವನಾಥ ಶೆಟ್ಟಿಮತ್ತು ಶ್ರೀಮತಿ ಲತಾ ವಿಶ್ವನಾಥ ಶೆಟ್ಟಿದಂಪತಿ ಶ್ರೀಪಾದರ ಪಾದಪೂಜೆ ನೆರವೇರಿಸಿದರು. ಬಳಗದ ಉಪಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ, ಕೋಶಾಧಿಕಾರಿ ಬೋಜ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ದಿವಾಕರ್ ಬಿ.ಶೆಟ್ಟಿಮತ್ತು ದಾಮೋದರ ಶೆಟ್ಟಿ, ಸದಸ್ಯರುಗಳಾದ ವಾಮಯ್ಯ ಶೆಟ್ಟಿ, ಗುಣಪಾಲ ಶೆಟ್ಟಿ, ಸಚಿನ್ ಶೆಟ್ಟಿ ಹಾಗೂ ವಜ್ರಮಾತ ಮಹಿಳಾ ಘಟಕದ ಕಾರ್ಯದರ್ಶಿ ಚಿತ್ರಾ ಆರ್.ಶೆಟ್ಟಿ, ಮಾಜಿ ಅಧ್ಯಕ್ಷೆ ಸುಹಾಸಿನಿ ಶೆಟ್ಟಿ ಮತ್ತಿತರರು ಅತಿಥಿವರ್ಯರಿಗೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಗೌ| ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ಸನ್ಮಾನಪತ್ರ ವಾಚಿಸಿದರು. ಪ್ರಕಾಶ್ ಹೆಗ್ಡೆ ಕುಂಠಿನಿ ಪುರಸ್ಕೃತ ವಿದ್ಯಾರ್ಥಿಗಳ ಯಾದಿ ವಾಚಿಸಿ ಧನ್ಯವದಿಸಿದರು. ಗಣೇಶ್ ಎರ್ಮಾಳ್ ಮತ್ತು ಬಳಗವು ಭಕ್ತಿರಸಮಂಜರಿ ಗಾನವೈಭವ ಪ್ರಸ್ತುತ ಪಡಿಸಿತು. ಬಳಿಕ ಗುರುದೇವ ಕ್ಯಾಟರರ್ಸ್ ಮತ್ತು ಸಂತೋಷ್ ಕ್ಯಾಟರರ್ಸ್ ಪ್ರಾಯೋಜಕತ್ವದಲ್ಲಿಪ್ರಸಾದರೂಪವಾಗಿ ಅನ್ನ ಸಂತರ್ಪಣೆ ನಡೆಸಲ್ಪಟ್ಟಿತು.



















