ಜಗತ್ತಿನಾದ್ಯಂತ ಐವತ್ತು ಲಕ್ಷ ತುಳುವವರಿದ್ದಾರೆ : ಪ್ರೋ| ಶ್ರೀಪಾದ ಭಟ್
ಮುಂಬಯಿ : ಮುಂಬಯಿ ಬದುಕು ನಿತ್ಯದ ಜಾತ್ರೆ. ಇಲ್ಲಿನನ್ನ ಮಾತೃಭಾಷೆಯಲ್ಲಿ ಇದೇ ಮೊದಲಾಗಿ ಮಾತನಾಡುತ್ತಿರುವುದು ನನ್ನ ಭಾಗ್ಯ. ಪ್ರಸಕ್ತ ಜನತೆಯಲ್ಲಿನ ಮಾತೃಭಾಷೆ ಅರಿಯುವ ಪ್ರಯತ್ನ
ದುರಂತಮಯವಾಗಿದೆ. ತುಳು ಕಥೆಯಲ್ಲ ವ್ಯಥೆಯಾಗಿದೆ. ಜಗತ್ತಿನಾದ್ಯಂತ 50 ಲಕ್ಷ ತುಳುವವರಿದ್ದಾರೆ. ಅದರಲ್ಲೂ ಮುಂಬಯಿಯಲ್ಲೇ ಲಕ್ಷಾಂತ ತುಳುವರು ನೆಲೆದು ಜಾಗತಿಕವಾಗಿ ಮೆರೆಯುತ್ತಿದ್ದಾರೆ ಎನ್ನುವುದು ಅಭಿಮಾನದ ವಿಚಾರ. ತುಳು ಭಾಷೆಗೆ ತನ್ನದೇ ಆದ ಗರಿಮೆಯಿದೆ. ತುಳು ಉಪಭಾಷೆಯಲ್ಲ, ಸ್ವಾತಂತ್ರ್ಯ ಭಾಷೆ ಆಗಿದೆ ಎನ್ನುವುದು ಗಮನಾರ್ಹ. ಇದರಲ್ಲಿನ ಮೌಕಿಕ ಪರಂಪರೆ, ಸ್ವಂತಿಕೆಯ ಸಂಸ್ಕೃತಿ, ಚರಿತ್ರೆ ಬೇರೆ ಭಾಷೆಗಳಿಗಿಂತಲೂ ಭಿನ್ನವಾಗಿದೆ. ಅಂದಿನ ಬಜಿಲ್, ಬನ್ನಗಾಯ್, ಬೆಲ್ಲದ ಕಾಲವನ್ನು ಮರೆಯದೆ ಮಕ್ಕಳಲ್ಲೂ ಇವೆಲವನ್ನೂ ಮೈಗೂಡಿಸಿದರೆ ತುಳು ಕೂಡಾ ಸ್ವಂತಿಕೆಯ ಸ್ಥಾನಮಾನ ಪಡೆದು ವಿಶ್ವದಾದ್ಯಂತ ರಾಜಾಜಿಸಲಿದೆಎಂದು ತುಳು ಭಾಷಾ ವಿಜ್ಞಾನಿ, ಗೋವಾ ವಿಶ್ವ ವಿದ್ಯಾಲಯದ ಇಂಗ್ಲೀಷ್ ವಿಭಾಗದ ಪ್ರೋ| ಶ್ರೀಪಾದ ಭಟ್ ತಿಳಿಸಿದರು. ಇಂದಿಲ್ಲಿ ಶನಿವಾರ ಕಲೀನಾದ ಮುಂಬಯಿ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಮತ್ತು ಕನ್ನಡ ವಿಭಾಗಮುಂಬಯಿ ವಿಶ್ವವಿದ್ಯಾಲಯ ಇವುಗಳ ಜಂಟಿ ಆಶ್ರಯದಲ್ಲಿ ನಡೆಸಲ್ಪಟ್ಟ `ಪರಿಚ್ಚೇದಕ್ಕೆ ತುಳು ಭಾಷೆ-ಸಾಧ್ಯತೆ ಮತ್ತು ಸವಾಲು’ ವಿಚಾರಿತ ವಿಶೇಷ ಉಪನ್ಯಾಸ ಮಾಲಿಕೆ-7ರಲ್ಲಿ ವಿಶೇಷ ಉಪನ್ಯಾಸವನ್ನಿತ್ತು ಶ್ರೀಪಾದ ಭಟ್ ಮಾತನಾಡಿದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ| ಜಿ.ಎನ್.ಉಪಾಧ್ಯ ಅವರ ಸಭಾಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ತುಳು ಸಂಘ ಬರೋಡಾ ಇದರ ಗೌರವಾಧ್ಯಕ್ಷ ದಯಾನಂದ ಬೊಂಟ್ರಾಉಪಸ್ಥಿತರಿದ್ದು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪ್ರೋ ತುಕಾರಾಂ ಪೂಜಾರಿ ಅವರು ಪ್ರಸ್ತಾವನೆ ಭಾಷಣಗೈದರು. ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಹೆಚ್.ಬಿ.ಎಲ್ ರಾವ್, ಅಕ್ಷಯ ಮಾಸಿಕದ ಗೌರವ ಪ್ರಧಾನ ಸಂಪಾದಕ ಎಂ.ಬಿ ಕುಕ್ಯಾನ್, ಖಾಲ್ಸಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ, ಹಿರಿಯ ಸಾಹಿತಿ ಪ್ರೋ| ಸುನೀತಾ ಎಂ.ಶೆಟ್ಟಿ, ಗುರುತು ಮಾಸಿಕದ ಸಂಪಾದಕ ಬಾಬು ಶಿವ ಪೂಜಾರಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷಚಂದ್ರಶೇಖರ ಪಾಲೆತ್ತಾಡಿ ಸಂವಾದದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಸೂಚಿಸಿದರು. ದಯಾನಂದ ಬೊಂಟ್ರಾಮಾತನಾಡಿ ಇಲ್ಲಿ ಗತಿಮಿತಿ ಮೀರಿದ ವಿಷಯ ನನ್ನ ಮುಂದಿದ್ದು ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ನಾನು ಬಾಲ್ಯವಸ್ಥೆಯಲ್ಲಿದ್ದಾಗಮನೆ, ಸುತ್ತಮುತ್ತ, ದೈವಸ್ಥಾನ ಇತ್ಯಾದಿಗಳಲ್ಲಿಬಳಸುತ್ತಿದ್ದ ಪ್ರಾಚೀನ ಕಾಲದ ವಸ್ತುಗಳನ್ನು ನನಗೆ ಮತ್ತೆ ಮೆಲುಕಿಸಿದವರು ಪ್ರೋ| ತುಕರಾಮ್ ಪೂಜಾರಿ ದಂಪತಿ. ಅವರ ತುಳುವಿನ ದೂರದೃಷ್ಟಿ ಅತ್ಯದ್ಭುತ ಮತ್ತು ಅನನ್ಯವಾದದ್ದು. ತುಳುಭಾಷೆಗೆ 8ನೇ ಪರಿಚ್ಛಯದಲ್ಲಿ ಸ್ಥಾನ ಪ್ರಾಪ್ತಿಸಿಕೊಳ್ಳುವುದು ಸದ್ಯ ಲಘು ವಿಚಾರವಲ್ಲ. ತುಳು ಮಾತೃಭಾಷಾ ಅಭಿಮಾನ, ಪ್ರೀತಿ ಇದ್ದರೆ ಆ ಪ್ರಕ್ರಿಯೆ ಸಲೀಸಾಗಬಹುದು. ಸ್ಥಾನ ಗಿಟ್ಟಿಸಿಕೊಳ್ಳುವ ಕಾಯಕದ ಹಿಂದೆ ಅವಿರತ ನೀಡಬೇಕು. ವಿದ್ವಾಂಸರು ಮತ್ತು ರಾಜಕಾರಣಿಗಳ ಸಹಯೋಗ, ತುಳುವರ ಚಳುವಳಿ ತೀವ್ರರೂಪ ಪಡೆದರೆ ಭಾಷೆ ಪರಿಚ್ಛೇಯ ಸೇರಲಿದೆಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪಂಚದ್ರಾವಿಡ ಭಾಷೆಯಲ್ಲಿನ ಇತರೇ 4 ಭಾಷೆಗಳು ಸ್ಥಾನ ಗಿಟ್ಟಿಸಿದೆಎಂದಾದರೆ ತುಳು ಭಾಷೆಮಾತ್ರ ಯಾಕೆ ಸೇರ್ಪಡೆ ಗೊಂಡಿಲ್ಲ? ಇದು ಪ್ರೆಶ್ನಾತೀತ ವಿಚಾರ. ಇದಕ್ಕಾಗಿ ದಕ್ಷಿಣ ಭಾರತೀಯರ ಒಗ್ಗಟ್ಟಿನ ಅಗತ್ಯವಿದೆಎಂದರು. ಆತ್ಮವಿಮರ್ಶೆ ಮಾಡಿದರೆ ತುಳುಭಾಷೆಯ ನೈಜ್ಯತೆ ತಿಳಿಯುವುದು. ತುಳುನಾಡು ಪ್ರಕೃತಿ ಸಂಪನ್ನ ಬೀಡುವಾಗಿದ್ದು, ಈ ಹಿಂದಿನ ತುಳು ಪಾಚೀನತೆಯ ಪ್ರಜ್ಞೆ ಬೆಳೆಯ ಬೇಕಾಗಿದೆ. ರಾಣಿ ಅಬ್ಬಕ್ಕರ ಜೀವನಶೈಲಿ, ತುಳುನಾಡಿನ ಕೊಡುಗೆ ತುಳುವರಿಗೆಅಭಿಮಾನ ಹುಟ್ಟಿಸುವಂತಾಗಿದೆ. ಆದರೆ ನಮ್ಮ ಸೀಮಿತ ಪರಿಧಿಯ ವ್ಯವಸ್ಥೆ ಸಲ್ಲದು. ಯುವ ಪೀಳಿಗೆತುಳುಭಾಷಾಸಕ್ತಿ ಮೂಡಿಸಬೇಕು. ಪ್ರಾಚೀನ ಜನತೆಯ ಬದುಕು ಪ್ರಕೃತಿಗೆ ಸನ್ನಿಹಿತ, ಸಾಮೀಪ್ಯವಾಗಿತ್ತು. ಪ್ರಸಕ್ತ ಬದುಕು ಪ್ರಕೃತಿ ದೂರವಾಗಿದೆ. ಹಿರಿಯರ ಬದುಕಿನ ಚಿಂತನೆ ಸೂಕ್ಷ್ಮದಾಯಕವಾಗಿದ್ದು, ಅವುಗಳೆಲ್ಲವುಗಳ ನಿರಂತರತೆ ಇಲ್ಲದ ಬದುಕು ಫಲಿಸದು ಎನ್ನುತ್ತಾ ಪ್ರೋ| ತುಕಾರಾಂ ಅವರು ತುಳು ಅಧ್ಯಯನ ಕೇಂದ್ರ ಉದ್ದೇಶವನ್ನೂ ಭಿತ್ತಿರಿಸಿದರು. ಪಾಲೆತ್ತಾಡಿ ಮಾತನಾಡಿ ತುಳು ಕಾರ್ಯಕ್ರಮಗಳು ಸ್ವಯಂ ಜಾತ್ರೆಯಾಗುತ್ತಿದ್ದು, ನೈತಿಕತೆ ಮತ್ತು ಭಾಷಾಭಿಮಾನ ಮರೆಯುತ್ತಿವೆ. ತುಳು ಕಾರ್ಯಕ್ರಮಗಳು ಸ್ವಂತಿಕೆಯ ಸ್ವಾರ್ಥಕ್ಕಾಗಿನ ವೇದಿಕೆಗಳು ಆಗುತ್ತಿರುವುದು ಖೇದಕರ. ಸಾಧ್ಯವಾದರೆ ಲೋಕಸಭೆ ವಿಧಾನಸಭೆಗಳನ್ನು ಅಲ್ಲಾಡಿಸುವ ತಾಕತ್ತಿದ್ದರೆ ತುಳುಭಾಷೆಗೆ 8ನೇ ಪರಿಚ್ಛಯದಲ್ಲಿ ತನ್ನಿಂತಾನೇ ಸ್ಥಾನ ಸಿಗುವುದರಲ್ಲಿ ಸಂಶಯವಿಲ್ಲಎಂದರು. ಕರ್ನಾಟಕ ಸರಕಾರವು ಮೊದಲಾಗಿ ತುಳುವನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ಪ್ರಾಚೀನ ಭಾಷೆ ಎಂದು ತಿಳಿದಿದ್ದೂ ಪಂಚದ್ರಾವಿಡ ಭಾಷೆಯಲ್ಲೊಂದಾದ ತುಳುವಿನ ಸ್ಥಾನಮಾನದ ತಾರತಮ್ಯ ಸಲ್ಲದು ಎಂದು ಡಾ| ಸುನೀತಾ ಶೆಟ್ಟಿ ದನಿಗೂಡಿಸಿದರು. ತುಳುವನ್ನು ಮುನ್ನಡೆಸಲು ಕಷ್ಟವಿದೆಯಾದರೂ ಮುನ್ನಡೆಸುವ ವಿಚಾರ ಸ್ವಷ್ಟವಾಗಿದ್ದಲ್ಲಿ ಸುಲಭಸಾಧ್ಯವಾಗಬಲ್ಲದು. ಇದನ್ನು ಮುನ್ನಡೆಸಲು ದೂರದೃಷ್ಟಿತ್ವದ ವಿದ್ವಾಂಸರ ಕೂಟವೂ ಅಗತ್ಯವಿದ್ದು, ಸಮಗ್ರ ತುಳುವರ ಸಹಯೋಗವೂ ಅವಶ್ಯವಾಗಿದೆ ಎಂದು ಧರ್ಮಪಾಲ ದೇವಾಡಿಗ ತಿಳಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಪ್ರೋ| ತುಕಾರಾಂ ಪೂಜಾರಿ ದಂಪತಿ ತುಳುವರ ಹಿರಿಮೆಯ ಸುಪುತ್ರರಾಗಿದ್ದು ಬಲಿಷ್ಠತುಳುವಿನ ಶಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 8ನೇ ಪರಿಚ್ಛಯದಲ್ಲಿತುಳುಭಾಷೆಯ ಸೇರ್ಪಡೆಗೆ ಗಂಭೀರವಾದ ಚರ್ಚೆ ನಡೆಯಬೇಕು. ಕೇವಲ ಚರ್ಚೆಮಾತ್ರವಲ್ಲದೆ ಸರ್ವರೂ ಒಗ್ಗಟ್ಟಿನಿಂದ ತೀವ್ರ ಪೈಪೋಟಿ ನಡೆಸಿ ಸವಿಂಧಾನಿಕ ಸ್ಥಾನ ಪಡೆಯುವಂತಾಗಲಿ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಪ್ರೋ| ಜಿ.ಎನ್.ಉಪಾಧ್ಯ ತಿಳಿಸಿದರು. ತುಳುವಿನ ಕವಿವರ್ಯರುಗಳಾದ ಬಿ.ಎಸ್.ಕುರ್ಕಾಲ್, ಚಂದ್ರಹಾಸ ಸುವರ್ಣ ಶಿಮಂತೂರು, ಕೋಡು ಬೋಜ ಶೆಟ್ಟಿ, ಡಾ| ಕರುಣಾಕರ ಶೆಟ್ಟಿ, ಜಯಕರ ಡಿ.ಪೂಜಾರಿ, ಚಿತ್ರಾಪು ಕೆ.ಎಂ.ಕೋಟ್ಯಾನ್, ಜಿ.ಟಿ ಆಚಾರ್ಯ, ಹರೀಶ್ ಜಿ. ಪೂಜಾರಿ, ಹೇಮಾ ಅಮೀನ್, ತೋನ್ಸೆ ಸಂಜೀವ ಪೂಜಾರಿ, ರವಿ ಜಿ.ಮೆಂಡನ್ ಕುರ್ಕಾಲ್ ಸೇರಿದಂತೆ ಅನೇಕ ತುಳುವ ಮುಂದಾಳುಗಳು ಉಪಸ್ಥಿತರಿದ್ದು, ರಾಣಿ ಅಬ್ಬಕ್ಕ ಕೇಂದ್ರದಕಾರ್ಯದರ್ಶಿ ಡಾ| ಆಶಾಲತಾ ಎಸ್.ಸುವರ್ಣ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ|ಪೂರ್ಣಿಮಾ ಎಸ್.ಶೆಟ್ಟಿಪ್ರಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ದಯಾಸಾಗರ್ ಚೌಟ ಕಾರ್ಯಕ್ರಮ ನಿರ್ವಹಿಸಿ ಧನ್ಯವದಿಸಿದರು.








