ಬಂಟ್ವಾಳ: ಹಿಂದು ಸಂಘಟನೆಯ ಕಾರ್ಯಕರ್ತ ರಾಜೇಶ್ ಪೂಜಾರಿ ಹತ್ಯಾ ಪ್ರಕರಣದಲ್ಲಿ ಬಂಧಿತರಾದವರನ್ನು ನಿರಾಪರಾಧಿಗಳೆಂದು ಹೇಳುತ್ತಿರುವುದು ಸರಿಯಲ್ಲ. ಅವರೇ ನಿಜವಾದ ಆರೋಪಿಗಳು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳನ್ನು ಸಂಗ್ರಹಿಸಿಯೇ ಪೋಲೀಸರು ಅವರನ್ನು ಬಂಧಿಸಿದ್ದಾರೆ. ವೃದ್ಧ ತಾಯಿ, ಪತ್ನಿ ಹಾಗೂ ಪುಟ್ಟ ಮಕ್ಕಳು ಅನಾಥರಾಗುವಂತೆ ಮಾಡಿದ ಆ ಕೊಲೆಪಾತಕಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬಂಟ್ವಾಳ ವಿಶ್ವಹಿಂದು ಪರಿಷತ್ತು ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಆಗ್ರಹಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಲೆ ನಡೆದ ಜಾಗದಲ್ಲಿ ಕತ್ತಿಯ ತುಂಡು ಸಿಕ್ಕಿದೆ. ಮತ್ತೊಂದು ತುಂಡು ಸಹಿತ ಕೃತ್ಯಕ್ಕೆ ಬಳಸಲಾದ ಇತರ ಸೊತ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಇವರಾಗಿಯೇ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಈ ಕೊಲೆ ಸಹಿತ ಜಿಲ್ಲೆಯಲ್ಲಿ ನಡೆದ ಇತರ ಕೃತ್ಯಗಳ ಹಿಂದೆ ಕಾಣದ ಕೈಗಳ ಶಕ್ತಿ ಇದೆ. ಅದನ್ನು ಪೋಲೀಸರು ಶೀರ್ಘ ಭೇದಿಸಿ ಬಹಿರಂಗ ಪಡಿಸಬೇಕು. ಜಿಲ್ಲೆಯಲ್ಲಿ ಅಶಾಂತಿ, ಭಯದ ವಾತಾವರಣ ನಿಮರ್ಿಸುವ ದುಷ್ಟಶಕ್ತಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜೇಶ್ ಹತ್ಯಾ ಪ್ರಕರಣದಲ್ಲಿ ಪೋಲೀಸರು ಶೀರ್ಘ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ಧಾರೆ. ಈ ಹಿಂದೆಯೂ ರಾಜೇಶನ ಮೇಲೆ ಕೊಲೆ ಯತ್ನ ನಡೆದಾಗಲೂ ನಾವು ದೂರು ನೀಡಿದ್ದೇವು. ಇದೀಗ ಹಾಡಹಗಲೇ ಕೊಲೆ ನಡೆದಿರುವುದನ್ನು ಕಂಡಾಗ ಇದರ ಹಿಂದೆ ದೊಡ್ಡಶಕ್ತಿಯೊಂದು ಕಾರ್ಯಾಚರಿಸುತ್ತಿರಬಹುದೆಂದು ನಮಗೆ ಸಂಶಯವಿದೆ. ಈ ಹಿಂದೆ ನಡೆದ ಕೊಲೆ ಪ್ರಕರಣವೊಂದರಲ್ಲಿ ರಾಜೇಶ್ ಆರೋಪಿ ಎಂದು ಹೇಳಲಾಗಿದ್ದರೂ ಆತನನ್ನು ನಿರಾಪಾರಾಧಿಯೆಂದು ನ್ಯಾಯಾಲಯ ಬಿಡುಗಡೆ ಮಾಡಿತ್ತು. ನಂತರ ರಾಜೇಶ್ ಯಾವುದೇ ಪ್ರಕರಣಗಳಲ್ಲಿ ಗುರುತಿಸಿಕೊಳ್ಳದೆ ಬಡ ಸಂಸಾರದೊಂದಿಗೆ ಜೀವನ ನಡೆಸುತ್ತಿದ್ದ. ಇದೀಗ ರಾಜೇಶನ ಕುಟುಂಬ ಕಂಗಾಲಾಗಿದೆ ಎಂದು ಅವರು ಹೇಳಿದರು.
ಸರಕಾರ ಸ್ಪಂದಿಸಲಿ:
ಬಿಜೆಪಿ ಮತ್ತು ಹಿಂದು ಸಂಘಟನೆಗಳು ಹೊರತು ಪಡಿಸಿದರೆ ಯಾರೂ ರಾಜೇಶನ ಕುಟುಂಬದ ನೋವಿಗೆ ಸ್ಪಂದಿಸಿಲ್ಲ. ಬಿಲ್ಲವ ನಾಯಕರೆನಿಸಿಕೊಂಡವರೂ, ಸರಕಾರದ ಮಂತ್ರಿಮಾಗಧರು, ಜನನಾಯಕರೆನಿಸಿಕೊಂಡವರು ಅತ್ತ ಮುಖ ಮಾಡಿಲ್ಲ ಎಂದು ಆರೋಪಿಸಿದ ಸರಪಾಡಿ ಅಶೋಕ ಶೆಟ್ಟಿ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಪ್ರಮುಖರಾದ ಸುರೇಶ್ ಬೆಂಜನಪದವು, ಗುರುರಾಜ್ ಬಂಟ್ವಾಳ, ವಿಜೇತ್ ತುಂಬೆ, ಭರತ್ ಬಿ.ಸಿ.ರೋಡು, ರಾಜೇಶ್ ಪತ್ನಿ ಪಲ್ಲವಿ ಮತ್ತು ಮಕ್ಕಳು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *