ಸುದ್ದಿ9ಬಂಟ್ವಾಳ;ಎ.10. ಪೂಂಜಾಲಕಟ್ಟೆಯಿಂದ ಮಂಗಳೂರಿಗೆ ಸರ್ಕಾರಿ ಬಸಲ್ಲಿ ಸಂಚರಿಸುತ್ತಿದ್ದ ಗೃಹಿಣಿಯೊಬ್ಬರ ವ್ಯಾನಿಟಿ ಬ್ಯಾಗ್ ನಿಂದ ಚಿನ್ನಾಭರಣವಿದ್ದ ಪರ್ಸ್ ಅನ್ನು ಎಗರಿಸಿದ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರುದಾಖಲಾಗಿದೆ.ಪಿಲಾತಬೆಟ್ಟು ಗ್ರಾಮದ ಅತ್ತಾಜೆ ನಿವಾಸಿ ಶ್ರೀನಿವಾಸ ಎಂಬವರ ಪತ್ನಿ ಯಶೋಧಾ ಎಂಬವರು ತನ್ನ ಇಬ್ಬರು ಮಕ್ಕಳೊಂದಿಗೆ ಮಂಗಳವಾರ ಸಂಜೆ 4.30 ರ ಹೊತ್ತಿಗೆ ಪೂಂಜಾಲಕಟ್ಟೆಯಿಂದ ಸಕರ್ಾರಿ ಬಸ್ನಲ್ಲಿ ಮಂಗಳೂರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರ ಪಕ್ಕದಲ್ಲೇ ಇಬ್ಬರು ಅಪರಿಚಿತ ಮಹಿಳೆಯರು ಆಸೀನರಾಗಿದ್ದರು.
ಬಿ.ಸಿ.ರೋಡಿಗೆ ಸಮೀಪದ ಗಾಣದ ಪಡ್ಪುಬಳಿ ಮಗುವಿಗೆ ಬಿಸ್ಕೆಟ್ ತೆಗೆದುಕೊಡಲು ವ್ಯಾನಿಟಿ ಬ್ಯಾಗ್ ಚಿನ್ನಾಭರಣ ತುಂಬಿದ ಪರ್ಸ್ ಯಥಾಸ್ಥಿತಿಯಲ್ಲಿತ್ತು. ಬಸ್ ಬಿ.ಸಿ.ರೋಡು ಬಸ್ ತಂಗುದಾಣಕ್ಕೆ ತಲುಪಿದ ಬಳಿಕ ಮಗುವಿಗೆ ನೀರು ಬಾಟ್ಲಿಯನ್ನು ತೆಗೆಯಲೆಂದು ವ್ಯಾನಿಟಿ ಬ್ಯಾಗ್ ಗೆ ಕೈ ಹಾಕಿದಾಗ ಬ್ಯಾಗ್ ನ ಜಿಪ್ ತೆರೆದಿದ್ದು, ಚಿನ್ನಾಭರಣ ತುಂಬಿದ ಪರ್ಸ್ ಕಳವಾಗಿತ್ತು ಎನ್ನಲಾಗಿದೆ. ಈ ಹಂತದಲ್ಲಿ ಪಕ್ಕದಲ್ಲಿದ್ದ ಮಹಿಳೆಯರಿಬ್ಬರು ಬಿ.ಸಿ.ರೋಡಿನಲ್ಲೇ ಇಳಿದು ಹೋಗಿದ್ದರು. ಇದರಿಂದ ಕಕ್ಕಾಬಿಕ್ಕಿಯಾದ ಯಶೋಧಾ ರವರು ಪತಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಪಸರ್್ ನಲ್ಲಿದ್ದ ಸುಮಾರು 13.5 ಪವನ್ ಚಿನ್ನಾಭರಣ ಕಳವಾಗಿದ್ದು, ಇದರಲ್ಲಿ ಬಳೆ , ಬೆಂಡೊಲೆ ಚೈನ್ ,ಬ್ಸಾಸ್ಲೈಟ್, ಉಂಗುರ ಸೇರಿದ್ದು, ಇದರ ಒಟ್ಟು ಮೌಲ್ಯ 3.25 ಲಕ್ಷ ರೂ ಎಂದು ಅಂದಾಜಿಸಲಾಗಿದೆ. ಬುಧವಾರ ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಯಶೋಧಾ ಅವರು ದೂರು ದಾಖಲಿಸಿದ್ದಾರೆ.
