ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿಂದು ಮಂಗಳೂರಿನ ಸಿ.ಓ.ಡಿ.ಪಿ. ಮತ್ತು ಮಾನೋಸ್ ಯೂನಿಡಾಸ್ ಇದರ ಸಹಯೋಗದೊಂದಿಗೆ ವಿದ್ಯಾರ್ಥಿ ಗಳಿಗೆ ಮಕ್ಕಳ ಹಕ್ಕುಗಳು ಮತ್ತು ರಂಜಾನ್ ಆಚರಣಾ ಮಾಹಿತಿ ಕಾರ್ಯಗಾರವು ಜರುಗಿತು.
ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಕಾವಳಪಡೂರು ಪಂಚಾಯತ್ ನ ಸದಸ್ಯರಾದ ಶ್ರೀ.ಪಿ.ಜಿನರಾಜ ಆರಿಗ ಇವರು ಅಧ್ಯಕ್ಷತೆ ವಹಿಸಿದ್ದರು. ಸಿ.ಓ.ಡಿ.ಪಿ. ಮಂಗಳೂರು ಇವರು ಶಾಂತಿ, ಸೌಹಾರ್ದತೆಯ ದೃಷ್ಠಿಕೋನದಿಂದ ವಿದ್ಯಾರ್ಥಿಗಳಿಗೆ ಎಲ್ಲಾ ಧರ್ಮಗಳ ಹಬ್ಬಗಳ ಆಚರಣಾ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶ ಹೊಂದಿದೆ ಎಂಬುದಾಗಿ ಸಿ.ಓ.ಡಿ.ಪಿ. ಕೋ-ಆಡ್ವರ್ನೇಟರ್ ಆದ ಶ್ರೀಮತಿ ರೀಟಾ ಡಿ’ಸೋಜಾ ಹೇಳಿದರು. ಸಂಸ್ಥೆಯಲ್ಲಿ ದೀಪಾವಳಿ ಹಾಗೂ ಕ್ರಿಸ್ಮಸ್ ಹಬ್ಬದ ಮಹತ್ವದ ಬಗ್ಗೆ ಮಾಹಿತಿಯನ್ನು ಕೂಡಾ ಸದ್ರಿ ಹಬ್ಬಗಳ ದಿನಗಳಂದು ನೀಡುವೆವು ಎಂದರು. ಮಕ್ಕಳ ಹಕ್ಕುಗಳ ಬಗ್ಗೆ ಪ್ರಶ್ನೆಗಳೊಂದಿಗೆ ಮಾಹಿತಿ ನೀಡಿದರು.
ರಂಜಾನ್ ಹಬ್ಬದ ಮಹತ್ವದ ಬಗ್ಗೆ ಸರಕಾರಿ ಪ್ರೌಢಶಾಲೆ ಸುಜೀರ್ ನ ಶಿಕ್ಷಕರಾದ ಬಿ.ಮಹಮ್ಮದ್ ತುಂಬೆ ಇವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಿ.ಓ.ಡಿ.ಪಿ. ಮಂಗಳೂರು ಇದರ ಕಾರ್ಯಕರ್ತರಾದ ವೀಣಾ ಡಿ’ಸೋಜಾ, ಶ್ರೀಮತಿ ರೇವತಿ, ಶಿಕ್ಷಕರಾದ ಪದ್ಮಲತಾ, ಸುಶೀಲಾ ಜಿ., ವೀರರಾಜೇ ಅರಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಫ್ರೆಡ್ರಿಕ್ ಡಿ’ಸೋಜಾ ನಿರೂಪಿಸಿದರು. ಮುಖ್ಯಶಿಕ್ಷಕ ಶೇಖ್ ಆದಂ ಸಾಹೇಬ್ ಸ್ವಾಗತಿಸಿ, ಶ್ರೀನಿವಾಸ ನಾಯ್ಕ ವಂದಿಸಿದರು
