ಮಂಗಳೂರು: ಶಿಕ್ಷಣ ಕೇವಲ ಪರೀಕ್ಷೆಗೆ ಮಾತ್ರ ಸಿಮೀತವಾಗದೆ ಪಠ್ಯೇತರಕ್ಕೂ ಪೂರಕವಾಗಿದ್ದಾಗ ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದು ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಹೇಳಿದ್ದಾರೆ.
ಮಂಗಳೂರು ವಿವಿ ಅವರಣದಲ್ಲಿರುವ ಪುರುಷರ ವಸತಿನಿಲಯದಲ್ಲಿ ನಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿಶ್ವವಿದ್ಯಾನಿಲಯ ಮಟ್ಟದ ನಾಯಕತ್ವ ಆಯ್ಕೆ ಶಿಬಿರ ಮತ್ತು ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ವಿದ್ಯಾಭ್ಯಾಸ ಮಕ್ಕಳ ವಿಕಾಸಕ್ಕೆ ಪೂರಕವಾಗಿರಬೇಕು ಎಂದು ಒತ್ತಿ ಹೇಳಿದ ಅವರು ಯಾವ ಶಿಕ್ಷಣ ಚಾರಿತ್ರ್ಯ, ಶೀಲ ನಿರ್ಮಿ ಸಬಹುದೋ ಅದು ನಿಜವಾದ ಶಿಕ್ಷಣ. ರಾಷ್ಟ್ರೀಯ ಸೇವಾ ಯೋಜನೆಯ ದ್ಯೇಯದಲ್ಲಿ ಇದನ್ನು ನಮಗಲ್ಲ ನಿನಗೆ ಎಂಬುದನ್ನು ಹೇಳಲಾಗಿದೆ.ನಾವು ನಿಸ್ವಾರ್ಥ ಸೇವೆ ಮಾಡುವ ಗುಣ ರೂಡಿಸಬೇಕು.ನಮಗಲ್ಲ ನಿನಗೆ ಎಂಬುದೆ ನಿಸ್ವಾರ್ಥಥೆ.ಅದೊಂದು ಅದ್ಬುತ ಶಕ್ತಿ ಎಂದವರು ಬಣ್ಣಿಸಿದರು.
ಕುಲಪತಿ ಪ್ರೊ.ಕೆ.ಬೈರಪ್ಪ ಅಧ್ಯಕ್ಷತೆಯಿಂದ ಮಾತನಾಡಿ ವಿವಿ ಹಳ್ಳಿಗಳ ಕೆಲವು ವಿಷಯಗಳನ್ನು ಅಧ್ಯಯನಮಾಡಲು ಕಾರ್ಯಕ್ರಮ ರೂಪಿಸಿದೆ. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸರಕಾರದ ಜಂಟಿ ಕಾರ್ಯದರ್ಶಿ ಕೋಶದ ಯುವಜನಾಕಾರಿ ಕಾರ್ತೆಕೇಯನ್, ವಿಜಯ ಗ್ರಾಮಾಭಿವೃದ್ದಿ ಪ್ರತಿಷ್ಠಾನದ ನಿದೇರ್ಶಕ ಪ್ರಸಾದ್ ರೈ , ದಕ್ಷಿಣ ಕನ್ನಡ ಜಿಲ್ಲಾ ಎಸ್ಡಿಎಂಸಿ ಒಕ್ಕೂಟದ ಅಧ್ಯಕ್ಷ ಅಚ್ಚುತಗಟ್ಟಿ ,ಮಂಗಳಸೇವಾ ಟ್ರಸ್ಟ್ನ ನಿರ್ದೇಶಕ ಅಬ್ದುಲ್ ಬಸಿರ್ ಕೆ.ಕೆ ,ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯೆ ಮುತ್ತುಶೆಟ್ಟಿ ಉಪಸ್ಥಿತರಿದ್ದರು.
ರಾಮಕೃಷ್ಣ ಕಾಲೇಜಿನ ಕನ್ನಡ ಉಪನ್ಯಾಸಕ ನಟೇಶ ಆಳ್ವ ಕಾರ್ಯಕ್ರಮ ನಿರೂಪಿಸಿದರು. ವಿವಿ ರಾಷ್ಟ್ರೀಯ ಸೇವಾ ಸಂಯೋಜನಾಕಾರಿ ಪ್ರೊ.ವಿನೀತಾ ರೈ ಸ್ವಾಗತಿಸಿದರು. ಮಿಫ್ಟ್ ಕಾಲೇಜಿನ ಸಂಪತ್ ಕುಮಾರ್ ವಂದಿಸಿದರು.
