ಮುಂಬಯಿ (ಮಂಗಳೂರು), ಜು.24: ರಾಜ್ಯದ ವಿವಿಧ ಅಕಾಡಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಗರದ ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಶುಕ್ರವಾರ ನಡೆದ ಸಂಗಮ ಸಂಭ್ರಮದಲ್ಲಿ ತುಳು, ಬ್ಯಾರಿ, ಕೊಂಕಣಿ ಭಾಷೆಗಳ ಕಲರವ ಕೇಳಿ ಬಂತು. ತ್ರಿ ಭಾಷೆಗಳ ನೂರಾರು ಕಲಾವಿದರು ಎಸ್. ಯು. ಪಣಿಯಾಡಿ ವೇದಿಕೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮನರಂಜಿಸಿದರು. ಕಿರಿಯರಿಂದ ಹಿಡಿದು ಹಿರಿಯರು ತಮ್ಮ ಪ್ರತಿಭೆಗಳನ್ನು ಪ್ರದಶರ್ಿಸಿದರು.
ಕನರ್ಾಟಕ ತುಳು ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ ?ತುಳು ಐಸಿರಿ? ಕಾರ್ಯಕ್ರಮವನ್ನು ಮೈಮ್ ರಾಮದಾಸ್ ಮತ್ತು ತಂಡ ತುಳು ಹಾಡುಗಳನ್ನು ಹಾಡಿ, ಪ್ರಹಸನ ನಡೆಸಿಕೊಟ್ಟಿತು. ಬೇಬಿ ಸಾನ್ವಿ ನೃತ್ಯ ಎಲ್ಲರ ಮನ ಸೂರೆಗೊಂಡಿತು. ತುಳು ಅಕಾಡೆಮಿ ಅಧ್ಯಕ್ಷೆ ಎಂ ಜಾನಕಿ ಬ್ರಹ್ಮಾವರ ಸ್ವಾಗತಿಸಿ, ತುಳು ಅಕಾಡೆಮಿ ಸದಸ್ಯೆ ರೂಪಕಲಾ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.
ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ ?ಕೊಂಕ್ಣಿ ಸಂಭ್ರಮ್? ಕಾರ್ಯಕ್ರಮದಲ್ಲಿ ರೊಜಾರಿಯೊ, ಪಾದುವಾ, ಸಂತ ಎಲೋಶಿಯಸ್ ಕಾಲೇಜಿನ ಕೊಂಕಣಿ ಕ್ಲಬ್ಗಳ ವಿದ್ಯಾಥರ್ಿಗಳು ವಿವಿಧ ಕೊಂಕಣಿ ಹಾಡುಗಳನ್ನು, ನೃತ್ಯಗಳನ್ನು, ಹಾಸ್ಯ ಪ್ರಹಸನಗಳನ್ನು ನಡೆಸಿಕೊಟ್ಟರು. ಅನಿಲ್ ಪಿಂಟೊ ಮತ್ತು ಪ್ರೀವಲ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಮೊದಲು ಶಿಕ್ಷಕ ರಾಮನಾಥ ಮೇಸ್ತ ರಚಿಸಿರುವ ಕೊಂಕಣಿ ಅಕಾಡಮಿ ಪ್ರಕಟಿಸಿದ 30ನೆ ಕೃತಿ ?ಮೇಸ್ತ?ವನ್ನು ವಂ. ಮಾಕರ್್ ವಾಲ್ಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಅಕಾಡಮಿಯ ತ್ರೈಮಾಸಿಕ ಸುದ್ದಿ ಸಂಚಿಕೆ ?ಕೊಂಕಣಿ ಸಿರಿಸಂಪದ?ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದರ್ೇಶಕ ಕೆ.ಎ.ದಯಾನಂದ ಬಿಡುಗಡೆ ಗೊಳಿಸಿದರು. ಅಕಾಡಮಿ ಅಧ್ಯಕ್ಷ ರೊಯ್ ಕ್ಯಾಸ್ಟಲಿನೊ ಸ್ವಾಗತಿಸಿದರು.
ನಂತರ ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸಂಯೋಜನೆಯಲ್ಲಿ ?ಪೆನರ್ಾಲ್ ಸಂದೋಲ? ಕಾರ್ಯಕ್ರಮ ನಡೆಯಿತು. ಬ್ಯಾರಿ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ?ಮಾನವ ಸಮುದಾಯ ಮತ್ತು ಸ್ವಸ್ಥ ಸಮಾಜ? ಎಂಬ ವಿಷಯದಲ್ಲಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದರ್ೇಶಕ ಕೆ.ಎ. ದಯಾನಂದ ?ಪೆನರ್ಾಲ್ ಸಂದೋಲ? ವಿಡಿಯೊ ಆಲ್ಬಂ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ, ಜಿಲ್ಲಾ ವಾತರ್ಾಧಿಕಾರಿ ಬಿ.ಎ.ಖಾದರ್ ಷಾ, ಹಿರಿಯ ವಿದ್ವಾಂಸ ಪ್ರೊ. ಎ.ವಿ. ನಾವಡ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾಧಿಕಾರಿ ಉಸ್ಮಾನ್ ಎ., ಅಬುದಾಬಿ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಭಾಗವಹಿಸಿದ್ದರು. ಕೊಂಕಣಿ ಅಕಾಡಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ತುಳು ಅಕಾಡಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ, ಲಲಿತಾ ಕಲಾ ಅಕಾಡಮಿಯ ಅಧ್ಯಕ್ಷ ಎಂ.ಎಸ್.ಮೂತರ್ಿ, ಕೊಂಕಣಿ ಅಕಾಡಮಿಯ ರಿಜಿಸ್ಟ್ರಾರ್ ಡಾ. ಬಿ. ದೇವದಾಸ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯ ಅಬ್ಬಾಸ್ ಕಿರುಗುಂದ ಸ್ವಾಗತಿಸಿದರು. ರಿಜಿಸ್ಟ್ರಾರ್ ಉಮರಬ್ಬ ಪ್ರಾಸ್ತಾವಿಸಿದರು. ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಆಡಿಯೋ ಹಾಡುಗಳನ್ನು ಶೌಕತ್ ಪಡುಬಿದ್ರಿ, ಶಮೀರ್ ಮೂಲ್ಕಿ, ಬಶೀರ್ ಅಹ್ಮದ್ ಕಿನ್ಯ, ಮುಹಮ್ಮದ್ ಇಕ್ಬಾಲ್ ಕಾಟಿಪಳ್ಳ, ಅಶ್ರಫ್ ಅಪೋಲೊ, ರಿಯಾಝ್ ಕಲ್ಲಡ್ಕ, ಶರೀಫ್ ಬೊಳಂತೂರು ಹಾಡಿದರು. ಇದೇ ವೇಳೆ ದಫ್ ಪ್ರದರ್ಶನ ನಡೆಯಿತು.
ಕನಕದಾಸ ಕುರಿತ ನಾಲ್ಕು ಅನುವಾದಿತ ಕೃತಿಗಳ ಬಿಡುಗಡೆ
ಸಂತ ಎಂಬುದು ಯಾವುದೇ ಧರ್ಮದ ಅಸ್ಮಿತೆಯಲ್ಲ. ಅದು ಧರ್ಮದಾಚೆಯ ಪ್ರತೀಕವಾಗಿದೆ. ಸಾಮಾಜಿಕವಾಗಿ ಬೆರೆತು ಸಂವಹನ ಕಲ್ಪಿಸುವ ಶಿಲ್ಪಿಗಳು. ಇಂತಹ ಶಿಲ್ಪಿಗಳಂತಿರುವ ಸಂತಕವಿ ಕನಕದಾಸರ ಕುರಿತ ಕೃತಿಗಳನ್ನು ಇತರ ಭಾಷೆಗಳಿಗೆ ಅನುವಾದಿಸಿರುವುದು ಶ್ಲಾಘನಾರ್ಹ ಎಂದು ಹಿರಿಯ ವಿದ್ವಾಂಸ ಡಾ. ಬಿ.ಎ. ವಿವೇಕ ರೈ ಹೇಳಿದರು.
ರಾಜ್ಯದ ವಿವಿಧ ಅಕಾಡಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಗರದ ಹೊರವಲಯದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಶುಕ್ರವಾರ ನಡೆದ ?ಸಂಗಮ ಸಂಭ್ರಮ 2015? ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಕುರಿತ ಡಾ. ಚಿಕ್ಕಮಗಳೂರು ಗಣೇಶ ಕನ್ನಡದಲ್ಲಿ ರಚಿಸಿರುವ ಕೃತಿಯನ್ನು ಅತ್ರಾಡಿ ಅಮೃತಾ ಶೆಟ್ಟಿ (ತುಳು), ಬಿ.ಎಂ.ಹನೀಫ್ (ಬ್ಯಾರಿ), ಡಾ.ಗೀತಾ ಶೆಣೈ (ಕೊಂಕಣಿ), ಮುಹೇರ್ ಮನ್ಸೂರ್ (ಉದರ್ು) ಭಾಷೆಯಲ್ಲಿ ಅನುವಾದಿಸಿದ ನಾಲ್ಕು ಕೃತಿಗಳನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಕನಕದಾಸರ ಜೀವನ ಕ್ರಮ, ಆಲೋಚನಾ ಶಕ್ತಿಯನ್ನು ಕನ್ನಡ ಮಾತ್ರವಲ್ಲ, ಇತರ ಭಾಷೆಯಲ್ಲೂ ಪ್ರಕಟಗೊಳ್ಳುವ ಮೂಲಕ ಕನಕದಾಸರ ಚಿಂತನೆಯ ಲೋಕ ವಿಸ್ತೃತಗೊಳ್ಳಲಿದೆ. ಕರಾವಳಿಯ ತುಳು, ಕೊಂಕಣಿ, ಬ್ಯಾರಿ ಭಾಷಿಗರೂ ಕನಕದಾಸರ ಕುರಿತು ತಿಳಿದುಕೊಳ್ಳಲು ಸಾಧ್ಯವಾಯಿತು. ಇಂತಹ ಪ್ರಕ್ರಿಯೆ ನರಂತರವಾಗಿ ನಡೆದಾಗ ಸ್ಥಳೀಯ ಭಾಷೆಗಳ ಸಾಹಿತ್ಯ ಲೋಕ ಶ್ರೀಮಂತಗೊಳ್ಳಲಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಕನಕದಾಸರ ಕುರಿತು ಕಮ್ಮಟಗಳನ್ನು ನಡೆಸುವ ಅಗತ್ಯವಿದೆ ಎಂದು ಪ್ರೊ.ಬಿ.ಎ. ವಿವೇಕ ರೈ ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದರ್ೇಶಕ ಕೆ.ಎ. ದಯಾನಂದ ವಹಿಸಿದ್ದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಪ್ರ್ರಸ್ತಾವಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸ ಪ್ರೊ. ಎ.ವಿ.ನಾವಡ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್, ತುಳು ಅಕಾಡಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ, ಕೊಂಕಣಿ ಅಕಾಡಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಬ್ಯಾರಿ ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ರಿಜಿಸ್ಟ್ರಾರ್ಗಳಾದ ಚಂದ್ರಹಾಸ ರೈ, ಡಾ. ಬಿ.ದೇವದಾಸ ಪೈ, ಉಮರಬ್ಬ ಉಪಸ್ಥಿತರಿದ್ದರು. ದಯಾನಂದ ಕತ್ತಲ್ಸಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಕೊಂಕಣಿ, ಬ್ಯಾರಿ, ಉದರ್ು ಮತ್ತು ತುಳು ಅನುವಾದಿತ ಪುಸ್ತಕಗಳಿಂದ ಎಚ್ ರಾಘವೇಂದ್ರ ರಾವ್ ಮತ್ತು ತಂಡ ಆಯ್ದ ಕೀರ್ತನೆಗಳನ್ನು ಹಾಡಿತು.





















