ಮುಂಬಯಿ (ಕೃಷ್ಣರಾಜಪೇಟೆ), ಜು.18: ಕೇಂದ್ರದ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕೀಯ ಮುತ್ಸದ್ಧಿಗಳಾದ ಅವರು ಕಾಂಗ್ರೆಸ್ ಮುಖಂಡರ ದಂಡಿನೊಂದಿಗೆ ಇಂದು ತಾಲೂಕಿಗೆ ನಾಗಮಂಗಲ ತಾಲೂಕಿನ ಮೂಲಕ ಆಗಮಿಸಿ ಸಾಲಬಾಧೆಯಿಂದ ಮೃತರಾದ ರೈತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯವನ್ನು ತುಂಬಿದರು.
ತಾಲೂಕಿನ ದೊಡ್ಡಕ್ಯಾತನಹಳ್ಳಿಯ ಸುರೇಶ್(52), ದೊಡ್ಡತಾರಹಳ್ಳಿಯ ಪ್ರದೀಪ (40), ಹಿರಿಕಳಲೆಯ ಶಂಕರೇಗೌಡ (45), ಕೆಂಪಿಕೊಪ್ಪಲಿನ ಚಿನ್ನಸ್ವಾಮಿ (42), ಮೂಡನಹಳ್ಳಿಯ ಲೋಕೇಶ್ (45) ಮತ್ತು ಐಪನಹಳ್ಳಿಯ ರೈತ ರಾಮಕೃಷ್ಣ (35) ಅವರ ಮನೆಗಳಿಗೆ ಭೇಟಿ ನೀಡಿ ಸಾಲಬಾಧೆಯಿಂದ ಸಂತ್ರಸ್ತ ರೈತಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ವಯಕ್ತಿಕವಾಗಿ ಪ್ರತೀ ಕುಟುಂಬಗಳಿಗೆ ತಲಾ 50ಸಾವಿರ ರೂ ಸಹಾಯ ಧನವನ್ನು ನೀಡಿದರು.
ಎಸ್.ಎಂ.ಕೃಷ್ಣ ಅವರೊಂದಿಗೆ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ನಾಗಮಂಗಲದ ಸುರೇಶ್ ಗೌಡ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಲ್ಲಾಜಮ್ಮ, ಮನ್ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ವಿ.ಡಿ.ಹರೀಶ್, ಜಿ.ಪಂ ಮಾಜಿಸದಸ್ಯ ಹೆಚ್.ಎನ್.ಮಂಜುನಾಥ, ಅಘಲಯ ಮಂಜುನಾಥ, ಕಾಂಗ್ರೆಸ್ ಮುಖಂಡ ರವೀಂದ್ರಶ್ರೀಕಂಠಯ್ಯ, ನರಸಪ್ಪಹೆಗ್ಗಡೆ ಸೇರಿದಂತೆ 40ಕ್ಕೂ ಹೆಚ್ಚು ಕಾರುಗಳಲ್ಲಿ ಆಗಮಿಸಿದ್ದ ಕೃಷ್ಣ ಅವರ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.
ಸಾಲಬಾಧೆಯಿಂದ ನೊಂದಿರುವ ರೈತರು ಸ್ವಾಭಿಮಾನಿಗಳು, ಸಾಲಕೊಟ್ಟವರು ಮಾನಸಿಕ ಕಿರುಕುಳ ಕೊಟ್ಟಿದ್ದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸಿ ಆತ್ಮಹತ್ಯೆಯೊಂದೇ ಮಾರ್ಗವೆಂದು ವಿಷಕುಡಿದು, ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ರೈತರ ಆಥರ್ಿಕ ಪರಿಸ್ಥಿಯನ್ನು ನೋಡಿದರೆ ಸಂಕಟವಾಗುತ್ತದೆ. ರಾಜ್ಯ ಸಕರ್ಾರವು ಈವರೆಗೆ ಸಾಲದ ಬಾಧೆಯಿಂದ ನೊಂದಿರುವ ರೈತರ ಮನೆಗಳಿಗೆ ತೆರಳಿ ಮಾನಸಿಕವಾಗಿ ಧೈರ್ಯ ತುಂಬದಿರುವುದನ್ನು ಕಂಡು ಸಹಜವಾಗಿಯೇ ಬೇಸರವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಲೀ ಸಕರ್ಾರದ ಪ್ರತಿನಿಧಿಗಳಾಗಲೀ ರೈತರ ನೋವುಗಳನ್ನು ಹತ್ತಿರದಿಂದ ಕಂಡವರಲ್ಲ, ಸಾಲಬಾಧೆಯಿಂದ ನೊಂದು ಆತ್ಮಹತ್ಯೆಗೆ ಶರಣಾದ ರೈತ ಕುಟುಂಬಗಳಿಗೆ ರಾಜ್ಯ ಸಕರ್ಾರಕ್ಕೆ ತಡವಾಗಿಯಾದರೂ ಜ್ಞಾನೋಧಯವಾಗಿ ಪರಿಹಾರವನ್ನು ಕೊಡಬೇಕೆಂಬ ಮನಸ್ಸಾಯಿತಲ್ಲ ಅಷ್ಟು ಸಾಕು ಬಿಡಿ ಎಂದು ಪತ್ರಕರ್ತರ ಪ್ರಶ್ನೆಗೆ ಹುಸಿ ನಗೆ ಬೀರಿದ ಕೃಷ್ಣ ತಾಲೂಕಿನಲ್ಲಿ ಆರು ಜನ ರೈತರು ಸಾಲಬಾಧೆಯಿಂದ ಮೃತರಾಗಿದ್ದಾರೆ. ಈ ವಿಚಾರವು ಮನಸ್ಸಿಗೆ ನೋವುಂಟು ಮಾಡಿದೆ ಎಂದು ಹೇಳಿದರು.
ಕೃಷ್ಣರನ್ನು ಸ್ವಾಗತಿಸಿದ ಶಾಸಕ: ರಾಜ್ಯರ ಮಾಜಿಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕರಾದ ಎಸ್.ಎಂ ಕೃಷ್ಣ ಅವರು ತಾಲೂಕಿನ ಸಂತ್ರಸ್ತ ರೈತ ಕುಟುಂಬಗಳನ್ನು ಭೇಟಿ ನೀಡಲು ಆಗಮಿಸುತ್ತಿರುವ ವಿಚಾರ ತಿಳಿದ ಶಾಸಕ ನಾರಾಯಣಗೌಡ ನಾಗಮಂಗಲ-ಕೆ.ಆರ್.ಪೇಟೆ ತಾಲೂಕಿನ ಗಡಿಗ್ರಾಮ ಗಿಡದಬೊಪ್ಪನಹಳ್ಳಿ ಕ್ರಾಸ್ ಬಳಿ ಕೃಷ್ಣ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಶಾಲು ಹೊದಿಸಿ ಏಲಕ್ಕಿ ಹಾರವನ್ನು ಹಾಕಿ ತಾಲೂಕಿಗೆ ಬರಮಾಡಿಕೊಂಡರಲ್ಲದೇ ರಾಜ್ಯ ಸಕರ್ಾರವು ಮಾಡದಿರುವ ಕೆಲಸವನ್ನು ಒಬ್ಬ ರೈತ ನಾಯಕನಾಗಿ ರೈತರ ಸಂಕಷ್ಠವನ್ನು ಅರಿತು ನೊಂದ ರೈತರ ಕಣ್ಣೀರನ್ನು ಒರೆಸಲು ರೈತರ ಮನೆ ಬಾಗಿಲಿಗೆ ಬಂದಿರುವ ನಿಮಗೆ ಧನ್ಯವಾದಗಳು ಸಾರ್ ಎಂದು ಕೃಷ್ಣ ಅವರ ಕಾಲಿಗೆರಗಿದರು.
ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರಿಗೆ ಹಳ್ಳಿಗಳಿಗೆ ಬರಲು ಆರೋಗ್ಯ ಚೆನ್ನಾಗಿಲ್ಲ. ಆದರೆ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಚೆನ್ನೈ, ಹೈದರಾಬಾದ್, ಮುಂಬೈ ಮಹಾನಗರಗಳಿಗೆ ಹೋಗಲು ಮಾತ್ರ ಹಿಂದೆಬಿದ್ದಿಲ್ಲ. ರೈತನ ಮಗನಾದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ರೈತರ ಸಂಕಷ್ಠಗಳ ಬಗ್ಗೆ ಸಾಮಾನ್ಯ ಜ್ಞಾನವಿಲ್ಲ. ಸಾಲಬಾಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಿ ಪರಿಹಾರವನ್ನು ಸಕರ್ಾರದಿಂದ ನೀಡಿ ದೊಡ್ಡವರಾಗಬಹುದಿತ್ತು. ಆದರೆ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸದೇ ಸಣ್ಣತನ ತೋರಿದ ಸಿದ್ಧರಾಮಯ್ಯ ಮಣ್ಣಿನ ಮಗ, ರೈತನಾಯಕನೆನ್ನಲು ಬೇಸರವಾಗುತ್ತದೆ ಎಂದು ಶಾಸಕ ನಾರಾಯಣಗೌಡ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಮಿಂಚಿನ ಸಂಚಾರ ನಡೆಸಿ ರೈತರ ನೋವು ನಲಿವುಗಳಿಗೆ ಸ್ಪಂದಿಸಿದ ಎಸ್.ಎಂ.ಕೃಷ್ಣ ಅವರು ಮಾರ್ಗಮಧ್ಯದಲ್ಲಿ ನಾಯಕನಹಳ್ಳಿಯ ಕಾಂಗ್ರೆಸ್ ನಾಯಕ ಬಿ.ನಂಜಪ್ಪ ಅವರ ಬಿಕ್ಕಸಂದ್ರ ತೋಟದಲ್ಲಿ ಇತ್ತಿಚೆಗೆ ಅಪಘಾತದಲ್ಲಿ ಮೃತನಾದ ಅವರ ಮೊಮ್ಮಗ ದರ್ಶನ್ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೂ ತಮ್ಮ ರಾಜಕೀಯದ ಒಡನಾಡಿ ಇತ್ತೀಚೆಗೆ ಅನಾರೋಗ್ಯದಿಂದ ಮೃತರಾದ ತಾಲೂಕಿನ ಹಿರಿಯ ಕಾಂಗ್ರೆಸ್ ನಾಯಕ ಎ.ಬಿ.ಜವರಪ್ಪ ಅವರ ಮನೆಗೆ ತೆರಳಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಈ ಸಂದರ್ಭದಲ್ಲಿ ಜವರಪ್ಪ ಅವರ ಪುತ್ರ ಎ.ಜೆ.ದಿವಾಕರ್, ಜಿ.ಪಂ ಮಾಜಿಸದಸ್ಯ ಬಿ.ನಾಗೇಂದ್ರಕುಮಾರ್, ತಾಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂತರ್ಿ, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಟಿ.ತಿಮ್ಮೇಗೌಡ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಕೆ.ಬಿ.ರವಿ, ಎಪಿಎಂಸಿ ಅಧ್ಯಕ್ಷ ಶಂಕರೇಗೌಡ, ತಹಶೀಲ್ದಾರ್ ಶಿವಕುಮಾರ್, ವೃತ್ತನಿರೀಕ್ಷಕ ಡಿ.ಯೋಗೇಶ್, ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಟಿ.ಎಂ.ಪುನೀತ್, ಪಟ್ಟಣ ಠಾಣೆಯ ಎಸ್.ಐ ವಿನಯ್ ಮತ್ತಿತರರು ಉಪಸ್ಥಿತರಿದ್ದರು.


