ಕನ್ನಡ-ಮರಾಠಿಗರನ್ನು ಬೆಸೆಯುವ ಕೃತಿ: ಡಾ|ಜಿ.ಎಂ ಹೆಗಡೆ
ಮುಂಬಯಿ: ಮುಂಬಯಿ ವಿವಿ ಕನ್ನಡ ವಿಭಾಗವು ಡಾ| ಮೇಧಾ ಕುಲಕರ್ಣಿ ಅವರ `ಕರ್ನಾಟಕ ಮಹಾರಾಷ್ಟ್ರ ದೇವಾನುದೇವತೆಗಳು’ ಶೋಧ ಕೃತಿಯನ್ನು ತನ್ನ 52ನೇ ಕೃತಿಯಾಗಿ ಬಿಡುಗಡೆಗೊಳಿಸಿತು. ಇಂದಿಲ್ಲಿ ಗುರುವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ಡಬ್ಲ್ಯೂಆರ್‍ಐಸಿ ಭವನದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಅಧ್ಯಕ್ಷತೆಯಲ್ಲಿ ವಿಭಾಗವು ಆಯೋಜಿಸಿದ್ದ `ಕೃತಿ ಬಿಡುಗಡೆ’ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಲೇಖಕ, ಧಾರವಾಡದಲ್ಲಿನ ವಿಮರ್ಶಕ ಡಾ| ಜಿ.ಎಂ.ಹೆಗಡೆ ಕೃತಿಯನ್ನು ಅನಾವರಣಗೊಳಿಸಿದರು. ಡಾ| ಮೇಧಾ ಕುಲಕರ್ಣಿ ಅವರು ಅಲಕ್ಷಿತಗೊಳಗಾದ ದೇವಾನುದೇವತೆಗಳ ಬಗ್ಗೆ ಅಧ್ಯಾಯನ ನಡೆಸಿ ಒಂದು ಸವಾಲಾಗಿ ಎದುರಿಸಿದ್ದಾರೆ. ಸಂಸ್ಕೃತಿ ಹಾಗೂ ಧಾರ್ಮಿಕ ನೆಲೆಗಟ್ಟಿನಲ್ಲಿ ಅಧ್ಯಾಯನ ನಡೆಸಿ ಕನ್ನಡ-ಮರಾಠಿಗರ ಸಂಸ್ಕೃತಿ ಬೆಸೆಯುವ ಸಾಧನೆಯನ್ನೂ ಮಾಡಿದ್ದಾರೆ ಎಂದು ಡಾ| ಹೆಗಡೆ ಕೃತಿಕರ್ತೆಯ ಸಾಧನೆಯನ್ನು ಪ್ರಶಂಸಿಸಿ ಮಾತನಾಡಿದರು.ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಸ್ವಾಗತಿ ಪ್ರಸ್ತಾವಿಕ ನುಡಿಗಳನ್ನಾಡಿ ಡಾ|ಮೇಧಾ ಕುಲಕರ್ಣಿ ಅವರ ಸಾಹಿತಿಕ ಚಿಂತನೆ ಮತ್ತು ಕೃತಿಯ ಬಗ್ಗೆ ಮೇಧಾ ಅವರನ್ನು ಅಭಿನಂದಿಸಿದರು.
Kannada Dept. July-16- Book Release-1

Kannada Dept. July-16- Book Release-2

Kannada Dept. July-16- Book Release-3

Kannada Dept. July-16- Book Release-A

Kannada Dept. July-16- Book Release-B

Kannada Dept. July-16- Book Release-C

Kannada Dept Programme-1 Kannada Dept Programme-3 Kannada Dept Programme-A1 Kannada Dept Programme-B3 Kannada Dept Programme-B5

ವ್ಯಾಪಕವಾದ ಕ್ಷೇತ್ರಕಾರ್ಯ ಹಾಗೂ ಅಧ್ಯಾಯನದಿಂದ ಕೂಡಿದ ಈ ಕೃತಿ ಸರ್ವೋತ್ತಮ ಕೃತಿಯಾಗಿ ಮೂಡಿ ಬಂದಿದೆಎಂದು ಪ್ರಶಂಸಿಸಿದರು. ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ರಂಗಕಲಾವಿದೆ ಅಹಲ್ಯಾ ಬಲ್ಲಾಳ ಕೃತಿ ಪರಿಚಯಗೈದು ದೇವತೆಗಳ ನಡುವಿನ ಪರಸ್ಪರ ಸಂಬಂಧಗಳು ಈ ಕೃತಿಯಲ್ಲಿಬಿಂಬಿತವಾಗಿದೆ. ಸ್ಥಳ ಪುರಾಣ ಇತ್ಯಾದಿ ಕ್ಷೇತ್ರಗಳು ಹೇರಳ ಮಾಹಿತಿ ಕೃತಿ ಹೊಂದಿದ ಪುಸ್ತಿಕೆ ಇದಾಗಿದೆ ಎಂದರು. ಮನೋಹರ್ ಕುಲ್ಕರ್ಣಿ ವೇದಿಕೆಯಲ್ಲಿ ಆಸೀನರಾಗಿದ್ದು, ಡಾ| ಪೂರ್ಣಿಮಾ ಎಸ್.ಶೆಟ್ಟಿ ಸುಖಾಗಮನ ಬಯಸಿದರು. ಡಾ| ಜ್ಯೋತಿ ಸತೀಶ್ ಕಾರ್ಯಕ್ರಮದ ಸಂಚಾಲನೆ ಗೈದರು. ಶಿವರಾಜ್ ಎಂ.ಜಿ ಧನ್ಯವಾದ ಸಮರ್ಪಿಸಿದರು.

By suddi9

Leave a Reply

Your email address will not be published. Required fields are marked *