ಮೂಡುಬಿದಿರೆ: ಡೆಂಗ್ಯೂ ಹಾಗೂ ಮಲೇರಿಯಾ ವಿರೋಧಿ ಮಾಸಾಚರಣೆಯ ಪ್ರಯುಕ್ತ ಶಿರ್ತಾಡಿಯಲ್ಲಿ ಆರೋಗ್ಯ ಜಾಥವನ್ನು ಹಮ್ಮಿಕೊಳ್ಳಲಾಯಿತು.
ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ, ಶಿರ್ತಾಡಿ ಹಾಗೂ ವಾಲ್ಪಾಡಿ ಗ್ರಾ.ಪಂನ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮಕ್ಕೆ ಶಿರ್ತಾಡಿ ಮಕ್ಕಿಯ ಜವಾಹರಲಾಲ್ ಪ್ರೌಢಶಾಲೆಯಲ್ಲಿ ವೈದ್ಯಾಧಿಕಾರಿ ಡಾ.ಪ್ರಕಾಶ್ ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ನಾಗರಿಕರ ಸಹಕಾರ ಅಗತ್ಯ. ಜನರಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಜಾಥವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಶಿರ್ತಾಡಿ ಮಕ್ಕಿ ಶಾಲೆಯಿಂದ ಹೊರಟ ಆರೋಗ್ಯ ಜಾಥ ಶಿರ್ತಾಡಿ ಪೇಟೆಯಾಗಿ ವಾಲ್ಪಾಡಿ ಶಾಲೆಯಲ್ಲಿ ಅಂತ್ಯಗೊಂಡಿತು. ಶಿರ್ತಾಡಿ ಜವಾಹರ್ಲಾಲ್ ಪ್ರೌಢಶಾಲೆ, ಮೌಂಟ್ ಕಾರ್ಮಲ್, ವಾಲ್ಪಾಡಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿದರು.
