ಮೂಡಬಿದ್ರೆ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಮಂಗಳೂರಿನ ಮೂಡುಬಿದರೆ ಉಪಸಮಿತಿಯ 2014-15ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂಘದ ನೂತನ ಕಚೇರಿ ಉದ್ಘಾಟನೆ ಶುಕ್ರವಾರ ನಡೆಯಿತು.
ಜ್ಯೋತಿನಗರ ಶಾಲೆಯ ಎದುರು ಮದೀನ ಕಾಂಪ್ಲೆಕ್ಸ್ನಲ್ಲಿ ಸಂಘದ ನೂತನ ಕಚೇರಿಯನ್ನು ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡಿದಾಗ ಮಾತ್ರ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ತಾಲೂಕಿನ ಸ್ಥಳೀಯ ಗುತ್ತಿಗೆದಾರರೇ ಮುಂದುವರಿದಾಗ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯ. ಸರ್ಕಾರದ ಮಟ್ಟದಲ್ಲಿ ಸ್ಥಳೀಯ ವಿದ್ಯುತ್ದಾರರಿಗೆ ಪೂರಕ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತೇನೆ. ಗುತ್ತಿಗೆದಾರರಿಗೆ ನ್ಯಾಯ, ಜನರಿಗೆ ಸವಲತ್ತು ಸಿಗುವಂತಾಗಬೇಕು ಎಂದರು.
ವಿದ್ಯುತ್ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಅಶ್ವೀನ್ ಜೊಸ್ಸಿ ಪಿರೇರಾ ಅವರನ್ನು ಸನ್ಮಾನಿಸಲಾಯಿತು.

ಕಚೇರಿ ನಿರ್ಮಾಣಕ್ಕೆ 50 ಸಾವಿರ ರೂ.ಗಳನ್ನು ದೇಣಿಗೆ ನೀಡಿದ ಉದ್ಯಮಿ ಅಶ್ವೀನ್ ಜೊಸ್ಸಿ ಪಿರೇರಾ ಅವರನ್ನು ಸನ್ಮಾನಿಸಲಾಯಿತು. ಕಚೇರಿಗೆ ಧನಸಹಾಯ ಮಾಡಿದವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಜಿಲ್ಲಾ ಘಟಕ ಗೌರವಾಧ್ಯಕ್ಷ ಉರ್ಭನ್ ಪಿಂಟೋ ಮುಖ್ಯ ಅತಿಥಿಯಾಗಿ ಮಾತನಾಡಿ, ಜಿಲ್ಲೆಯ 9ರಲ್ಲಿ 7 ಉಪಸಮಿತಿಗಳು ಸ್ವಂತ ಕಚೇರಿಗಳನ್ನು ಹೊಂದಿವೆ. ಸಂಘಟನಾತ್ಮಕ ಕೆಲಸದಿಂದಲೇ ಇದು .ಸಾಧ್ಯವಾಗಿದೆ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿರುವ ಉಪಸಮಿತಿ ಎಂಬ ಹೆಗ್ಗಳಿಕೆ ಮೂಡುಬಿದರೆ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಇದೆ. ಪ್ರಭಾವಶಾಲಿ ಗುತ್ತಿಗೆದಾರ ಪ್ರಭಾವದಿಂದ ಸ್ಥಳೀಯ ಗುತ್ತಿಗೆದಾರರು ಬೀದಿಗಿಳಿಯುವಂತಾಗಿದೆ. ಅಪಾಯಕಾರಿ ಕೆಲಸಗಳನ್ನು ಸ್ಥಳೀಯ ಸಣ್ಣ ಗುತ್ತಿಗೆದಾರರಿಂದ ಮಾಡಿಸಿ, ಗೊಡ್ಡ ಮಟ್ಟದ ಗುತ್ತಿಗೆಗಳನ್ನು ಪ್ರಭಾವಿ ಗುತ್ತಿಗೆದಾರರು ಪಡೆಯಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದರು.
ಮೂಡುಬಿದರೆ ಉಪಸಮಿತಿ ಅಧ್ಯಕ್ಷ ರವಿಪ್ರಸಾದ್ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾಜಮಂದಿರದಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.
ಪುರಸಭಾ ನಿರ್ಗಮನ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಉದ್ಯಮಿ ಅಶ್ವೀನ್ ಜೊಸ್ಸಿ ಪಿರೇರಾ, ಮೂಡುಬಿದರೆ ಮೆಸ್ಕಾಂ ಸಹಾಯಕ ಅಭಿಯಂತರ ಸತೀಶ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು.
ಜೊತೆ ಕಾರ್ಯದರ್ಶಿ ಕುಮಾರ್ ಸ್ವಾಗತಿಸಿದರು. ರೋಹನ್ ಅತಿಕಾರಿಬೆಟ್ಟು ಕಾರ್ಯಕ್ರಮ ನಿರೂಪಸಿದರು. ಗೌರವ ಕಾರ್ಯದರ್ಶಿ ವೈ.ವಿ ಸತ್ಯಪ್ರಕಾಶ್ ವಂದಿಸಿದರು.
