ಬೆಂಗಳೂರು: ಚುನಾವಣೆ ಬಂತೆಂದರೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ನಡುವೆ ಮಾತಿನ ಸಮರ ಜೋರಾಗಿ ನಡೆಯುವುದು ಸಾಮಾನ್ಯ. ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ನಿರತರಾಗಿಬಿಡುತ್ತಾರೆ. ತಲೆಬುಡವಿಲ್ಲದ ಹೇಳಿಕೆಗಳನ್ನ ನೀಡುತ್ತಾರೆ. ಎದುರಾಳಿಗಳನ್ನ ತುಚ್ಛವಾಗಿ ನಿಂದಿಸುತ್ತಾರೆ. ಈ ಬಾರಿಯ ಚುನಾವಣೆಯ ವೇಳೆಯೂ ಬಂದಿರುವ ಹಲವಾರು ಚಿತ್ರವಿಚಿತ್ರ ಹೇಳಿಕೆಗಳ ವಿವರ ಇಲ್ಲಿದೆ…

poli

 

* ಮೋದಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಹುಶಃ ಅವರ ತಲೆ ಕೆಟ್ಟಿರಬೇಕು.
– ಶರದ್ ಪವಾರ್, ಎನ್‌ಸಿಪಿ ಮುಖಂಡ

* ನರೇಂದ್ರ ಮೋದಿ ಅವರೊಬ್ಬ ಸಾವಿನ ಸರದಾರ (ಮೌತ್‌ ಕಾ ಸೌದಾಘರ್).
– ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

* ರಕ್ಷಣಾ ಸಚಿವ ಎ.ಕೆ. ಆಂಟನಿ ಮತ್ತು ಕೇಜ್ರಿವಾಲ್ ಪಾಕಿಸ್ತಾನಿ ಏಜೆಂಟ್‌ಗಳು.
– ನರೇಂದ್ರ ಮೋದಿ, ಗುಜರಾತ್ ಸಿಎಂ

* ಸೋನಿಯಾ ಈ ದೇಶವನ್ನು ಲೂಟಿ ಮಾಡುವ ವಿದೇಶಿ ಸೊಸೆ.
– ಬಾಬಾ ರಾಮದೇವ್, ಯೋಗಗುರು

* ಮೋದಿ ಅವರೊಬ್ಬ ನಪುಂಸಕ.
– ಸಲ್ಮಾನ್ ಖುರ್ಷಿದ್, ವಿದೇಶಾಂಗ ಸಚಿವ

* ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ಬಟ್ಟೆ ಬಿಚ್ಚಿ ಇಟಲಿಗೆ ವಾಪಸ್ ಕಳುಹಿಸಬೇಕು.
– ಹೀರಾಲಾಲ್ ರೇಗಾರ್, ಬಿಜೆಪಿ ಶಾಸಕ

* ಮಾಯಾವತಿ ಅವರು ಮೋದಿಯ ತೊಡೆಯ ಮೇಲೆ ಕೂತಿದ್ದರು. ಆಕೆ ಮತ್ತೊಮ್ಮೆ ಇದೇ ರೀತಿ ಕೂರಲಿದ್ದಾಳೆ. ಯಾಕೆಂದರೆ ಇಬ್ಬರಿಗೂ ಮದುವೆಯಾಗಿಲ್ಲ.
– ನಹೀದ್ ಹಸನ್, ಎಸ್ಪಿ ಅಭ್ಯರ್ಥಿ

* ನಾವು ನರೇಂದ್ರ ಮೋದಿ ಅವರನ್ನು ಕತ್ತರಿಸಿ ಹಾಕುತ್ತೇವೆ.
– ಇಮ್ರಾನ್ ಮಸೂದ್, ಕಾಂಗ್ರೆಸ್ ಅಭ್ಯರ್ಥಿ

* ನಾನು ಅರುಣ್ ಜೇಟ್ಲಿ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಮುಖಕ್ಕೆ ಉಗಿಯ ಬಯಸುತ್ತೇನೆ.
– ಸೋಮನಾಥ್ ಭಾರ್ತಿ, ಆಪ್ ಮುಖಂಡ

* ಮೋದಿ ಅವರು ಆರೆಸ್ಸೆಸ್‌’ನ ಗೂಂಡಾ, ರಾಜನಾಥ್ ಸಿಂಗ್ ಅವರ ಗುಲಾಮ.
– ಬೇಣಿ ಪ್ರಸಾದ್ ವರ್ಮಾ, ಕಾಂಗ್ರೆಸ್ ಮುಖಂಡ

* ನಮಗೆ ನಿಮ್ಮ ಅನುಕಂಪದ ಅಗತ್ಯ ಇಲ್ಲ ಹಿರಿಯಣ್ಣ… ನಾಯಿ ಮರಿಯ ಹಿರಿಯಣ್ಣ ನರೇಂದ್ರ ಮೋದಿ ಅವರೇ…!!
– ಅಜಂಖಾನ್, ಎಸ್ಪಿ ಮುಖಂಡ

* ಜೆಡಿಎಸ್ ಅಧಿಕಾರಕ್ಕೆ ಬಾರದೆ ಇದ್ದರೆ ನಾನು ವಿಷ ತೆಗೆದುಕೊಂಡು ಸಾಯುತ್ತೇನೆ ಎಂದಿದ್ದರು. ಅವರ ಈ ಹೇಳಿಕೆ ಪ್ರತಿ ನನ್ನ ಬಳಿ ಈಗಲೂ ಇದೆ. ಅವರು ಯಾವಾಗ ವಿಷ ತೆಗೆದುಕೊಳ್ಳುತ್ತಾರೆ ಎಂದು ನಾನು ಕಾಯುತ್ತಿದ್ದೇನೆ.
– ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

* ದೇವೇಗೌಡನನ್ನು ಬೈಯ್ಯಲೇಬೇಕು, ಹೀಯಾಳಿಸಿ ಮಾತನಾಡಲೇಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪರಮೇಶ್ವರ್ ಅವರನ್ನು ನೇಮಿಸಿದ್ದರೆ ಅವರು ಹೀಗೆಲ್ಲ ಮಾತನಾಡಿ ತೃಪ್ತಿಪಟ್ಟುಕೊಳ್ಳಲಿ.
– ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

* ಕೋರ್ಟ್ ತೀರ್ಪು ಏನೇ ಇರಲಿ ಮೋದಿ ಒಬ್ಬ ನರಹಂತಕ. ಗೋದ್ರಾ ದುರ್ಘಟನೆಯಲ್ಲಿ ಮಡಿದವರೇ ಇದಕ್ಕೆ ಸಾಕ್ಷಿ. ಅವರು ಪ್ರಧಾನಿಯಾದರೆ ರಕ್ತಪಾತ ನಿಶ್ಚಿತ. ನಾನು ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

By suddi9

Leave a Reply

Your email address will not be published. Required fields are marked *