ಬಂಟ್ವಾಳ: ತಾಲೂಕಿನ ಮೂಡುನಡುಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ವಿಶ್ವ ಯೋಗ ದಿನಾಚರಣೆಯನ್ನು ನಮ್ಮ ಆದ್ಯತೆ- ನಮ್ಮ ಸ್ವಚ್ಚತೆ ಎನ್ನುವ ಕಾರ್ಯಕ್ರಮದ ಮೂಲಕ ಅಮ್ಟಾಡಿ ಗ್ರಾಮದ ನಲ್ಕೆಮಾರ್ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟವಾಗಿ ಆಚರಿಸಿದೆ. ಸಂಘದ ಸದಸ್ಯರು ಯೋಗದೊಂದಿಗೆ ಕಾರ್ಯಕ್ರವನ್ನು ಆರಂಭಿಸಿ ಬಳಿಕ ನಲ್ಕೆಮಾರ್ ಶಾಲೆಯ ಆವರಣವನ್ನು ಸ್ವಚ್ಚಗೊಳಿಸಿ, ತರಕಾರಿ ಗಿಡಗಳ ನಾಟಿ ನಡೆಸಿ, ಶಾಲೆಯ ಇನ್ನಿತರ ದುರಸ್ತಿ ಕಾರ್ಯಗಳನ್ನು ನಿರ್ವಹಿಸಿದರು.

ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಕಾರ್ಯಕ್ರಮವನನು ಉದ್ಘಾಟಿಸಿ ಮಾತನಾಡಿ ವಿಶ್ವಯೋಗ ದಿನಾಚರಣೆಯಂದು ಸ್ವಚ್ಛತ ಕಾರ್ಯಕ್ರಮನ್ನು ನಡೆಸುತ್ತಿರುವ ಶ್ರೀ ದುರ್ಗಾ ಫ್ರೆಂಡ್ಸ್ ಸರ್ಕಲ್‍ನ ಕಾರ್ಯ ಶ್ಲಾಘನೀಯ. ಮೂಡನಡುಗೋಡು ಗ್ರಾಮದ ಈ ಸಂಘಟನೆ ನೆರೆಯ ಅಮ್ಟಾಡಿ ಗ್ರಾಮಕ್ಕೆ ಆಗಮಿಸಿ ಇಲ್ಲಿನ ಶಾಲಾ ಪರಿಸರ ಸ್ವಚ್ಛತೆಗೊಳಿಸಿ, ದುರಸ್ತಿ ಕಾರ್ಯ ನಡೆಸಿರುವುದು ನಿಜಕ್ಕೂ ಅಭಿನಂದನೀಯ. ಸಂಘದ ಕಾರ್ಯಕ್ರಮ ಇತರ ಸಂಘ ಸಂಸ್ಥೆಗಳಿಗೂ ಮಾದರಿ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿ.ಕೆ.ಭಟ್ ಯೋಗ ಕಲಿಸಿಕೊಟ್ಟರು. ಬಳಿಕ ಅಡಿಕೆ ಗಿಡವನ್ನು ಸಂಘದ ಅಧ್ಯಕ್ಷ ಪ್ರಕಾಶ್ ಅಂಚನ್‍ಗೆ ಹಸ್ತಾಂತರಿಸುವ ಮೂಲಕ ಸ್ವಚ್ಚತೆ ಹಾಗೂ ತರಕಾರಿ ಕೃಷಿಗೆ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಚಾಲನೆ ನೀಡಿದರು.

BTW_JUNE22_2
ಸಂಜೆ ನಡೆದ ಸಮರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ಮಾತನಾಡಿದರು. ಅಮ್ಟಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಬಿತಾ ಕೋಟ್ಯಾನ್, ಸದಸ್ಯ ಶೇಖರ ಶೆಟ್ಟಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸ್ಥಳದಾನಿ ಭೋಜಪೂಜಾರಿ , ಕರೆಂಕಿ ಶ್ರಿ ದುರ್ಗಾ ಪರಮೆಶ್ವರೀ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ರಾಮಚಂದ್ರ, ಉಪಾಧ್ಯಕ್ಷ ಪೂವಪ್ಪ ಮೆಂಡನ್, ಯುವಕ ಸಂಘ ಅಮ್ಟಾಡಿಯ ಅಧ್ಯಕ್ಷ ಕೇಶವ, ಕಾರ್ಯದರ್ಶಿ ದಾಮೋದರ ಮಾಸ್ತರ್ ಏರ್ಯ, ಉಪಾದ್ಯಕ್ಷ ಜಯಾನಮದ ಕೋಟ್ಯಾನ್ ಭಾಗವಹಿಸಿದ್ದರು. ನವೀನ್ ಸೇಸಗುರಿ, ಬಾಲಕೃಷ್ಣ ಗೌಡ, ವಿನೋದ್ ಕುಮಾರ್ ಉಪಸ್ಥಿತರಿದ್ದರು. ಪುರುಷೋತ್ತಮ ಅಂಚನ್ ಸ್ವಾಗತಿಸಿ, ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಅಪೋಲಿನ್ ಪಿಂಟೋ ವಂದಿಸಿದರು.

By suddi9

Leave a Reply

Your email address will not be published. Required fields are marked *