ಸುದ್ದಿ 9ಬಂಟ್ವಾಳ : ಎಸ್ಸಿ/ಎಸ್ಟಿ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಖಾಸಗಿ ವ್ಯಕ್ತಿಯ ವಿರುದ್ದ ಪೊಲೀಸ್ ದೂರು ನೀಡಿದರೂ ಇನ್ನೂ ಸೂಕ್ತ ಕ್ರಮ ಕೈಗೊಳ್ಳದ ಪೊಲೀಸರು ಹಾಗೂ ವಿದ್ಯಾರ್ಥಿಗಳ ಹಿತಕ್ಕೆ ಸ್ಪಂದಿಸದ ಇಲಾಖಾ ತಾಲೂಕು ವಿಸ್ತರಣಾಧಿಕಾರಿಯ ವಿಳಂಬ ನೀತಿಯಿಂದ ನಿಲಯದ ವಿದ್ಯಾರ್ಥಿಗಳು ನಿತ್ಯ ಬವಣೆ ಪಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ನಿಲಯದ ವಿದ್ಯಾರ್ಥಿಗಳು ನೀರು ತುಂಬುತ್ತಿರುವ ದೃಶ್ಯ

s c s t vidhyarthi nilaya
s c s t vidhyarthi nilaya

 

ವಿದ್ಯಾರ್ಥಿಗಳ ದಾರಿಗೆ ಅಡ್ಡಿಪಡಿಸಿ ಹಾಕಿರುವ ಕಲ್ಲುಗಳು03bntph1

 


03bntph3

ತಾಲೂಕಿನ ಪಾಣೆಮಂಗಳೂರು ಬಂಗ್ಲೆಗುಡ್ಡೆ ಎಂಬಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯಗಳ ಸರಕಾರಿ ಜಾಗವನ್ನು ತನ್ನ ಕುಮ್ಕಿ ಜಾಗವೆಂದು ವಾದಿಸುತ್ತಿರುವ ಸ್ಥಳೀಯ ವ್ಯಕ್ತಿ ನಾರಾಯಣ ಮಯ್ಯ ಎಂಬವರು ಇತ್ತೀಚೆಗೆ 2013-14ನೇ ಸಾಲಿನ 1 ಲಕ್ಷ ರೂಪಾಯಿ ಅನುದಾನದಲ್ಲಿ ಮಂಜೂರಾದ ಕೊಳವೆ ಬಾವಿ ತೋಡಲು ಗುತ್ತಿಗೆದಾರರು ಬೋರ್ವೆಲ್ ವಾಹನದೊಂದಿಗೆ ನಿಲಯದ ಆವರಣದೊಳಗೆ ಆಗಮಿಸಿದ ವೇಳೆ ಬೋರ್ವೆಲ್ ನಿರ್ಮಾನಕ್ಕೆ ಅಡ್ಡಿಪಡಿಸಿದ್ದಲ್ಲದೆ ವಾಹನವನ್ನು ಹಿಂದಕ್ಕೆ ಕಳುಹಿಸಿರುತ್ತಾರೆ. ಈ ಬಗ್ಗೆ ಈಗಾಗಲೇ ಇಲಾಖಾಧಿಕಾರಿಗಳು ಹಾಗೂ ನಿಲಯ ಮೇಲ್ವಿಚಾರಕರು ಬಂಟ್ವಾಳ ನಗರ ಪೊಲೀಸರಿಗೆ ಲಿಖಿತವಾಗಿ ದೂರಿಕೊಂಡಿದ್ದರು.
ನಿಲಯದ ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಬವಣೆ ಪಡುತ್ತಿರುವ ಬಗ್ಗೆ ಮನಗಂಡ ಇಲ್ಲಿನ ಸಾರ್ವಜನಿಕರ ಒತ್ತಡದ ಮೇರೆಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಒಂದೆರಡು ದಿನಗಳಲ್ಲಿ ಮತ್ತೆ ಕೊಳವೆ ಬಾವಿ ತೋಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಅಲ್ಲದೆ ಮತ್ತೆ ಮಾ 19 ರಂದು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಯವರು ಇಲಾಖಾ ಪತ್ರ ಸಂಖ್ಯೆ ಬಿಸಿಎಂ:ವಿನಿಬಿ:ಸಿಆರ್-72/2013-14 ರಂತೆ ಬಂಟ್ವಾಳ ನಗರ ಠಾಣೆಗೆ ನಿಲಯದ ವಿದ್ಯಾಥರ್ಿಗಳಿಗೆ ಕಿರುಕುಳ ನೀಡುತ್ತಿರುವ ನಾರಾಯಣ ಮಯ್ಯ ಹಾಗೂ ಅವರ ಮಕ್ಕಳ ವಿರುದ್ದ ಲಿಖಿತ ಫಿಯರ್ಾದಿ ಸಲ್ಲಿಸಿದ್ದರು. ನಿಲಯದ ಸರಕಾರಿ ಜಾಗಕ್ಕೆ ಸಂಬಂಧಿಸಿ ಮಯ್ಯ ಅವರು ಬಂಟ್ವಾಳ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವ್ಯಾಜ್ಯವನ್ನು ನ್ಯಾಯಾಲಯ ವಜಾಗೊಳಿಸಿದೆ ಎಂಬ ಅಂಶವನ್ನೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ದೂರಿನ ಪ್ರತಿಯನ್ನು ಜಿ ಪಂ ಸಿಇಒ ಹಾಗೂ ಜಿಲ್ಲಾ ಎಸ್ಪಿಗೂ ನೀಡಲಾಗಿದೆ.
ಹೀಗಿದ್ದೂ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಜಯಣ್ಣ ಅವರೂ ಕೂಡಾ ಇಲ್ಲಿನ ವಿದ್ಯಾರ್ಥಿಗಳು ನಿತ್ಯ ನೀರಿಗಾಗಿ ಬವಣೆ ಪಡುತ್ತಿರುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ವಿದ್ಯಾರ್ಥಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು ಈಗಾಗಲೇ ಖಾಸಗಿ ವ್ಯಕ್ತಿ ನಿಲಯದ ದಾರಿ ಹಾಗೂ ಅಂಗಳದಲ್ಲಿ ಅಡ್ಡಿಪಡಿಸಿ ಹಾಕಿದ ಕಲ್ಲುಗಳನ್ನೂ ತೆರವುಗೊಳಿಸಲಾಗಿಲ್ಲ. ಎಳೆಯ ವಿದ್ಯಾರ್ಥಿಗಳು ನಿತ್ಯ ನೀರನ್ನು ಸ್ವತಃ ತುಂಬುವ ಮೂಲಕ ಸವೋಚ್ಛ ನ್ಯಾಯಾಲಯದ ಆದೇಶದ ಉಲ್ಲಂಘನೆಯೂ ಇಲ್ಲಿ ಕಂಡು ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯ ಸಾರ್ವಜನಿಕರು ಈಗಾಗಲೇ ಹಲವು ಬಾರಿ ಇಲಾಖಾಧಿಕಾರಿಗಳ ಗಮನ ಸೆಳೆದಿದ್ದು, ಮಾ 22 ರಂದು ಎಸ್ಎಫ್ಐ ಆಶ್ರಯದಲ್ಲಿ ನಿಲಯದ ಮುಂಭಾಗ ಖಾಲಿ ಕೊಡಪಾನ ಹಿಡಿದು ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಆದರೂ ಇಲ್ಲಿನ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ ಎಂದಿರುವ ಸಾರ್ವಜನಿಕರು ಮುಂದಿನ ಏಳು ದಿನಗಳೊಳಗೆ ಸಂಬಂಧಪಟ್ಟವರು ಇಲ್ಲಿನ ವಿದ್ಯಾರ್ಥಿಗಳ ಬವಣೆಗೆ ಸ್ಪಂದಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

By suddi9

Leave a Reply

Your email address will not be published. Required fields are marked *