ಸುದ್ದಿ 9 ಬಂಟ್ವಾಳ: ಧರ್ಮದ ಚೌಕಟ್ಟಿನಲ್ಲಿ ಜೀವನ ನಡೆಸಿದಾಗ ಸುಖ ಹಾಗೂ ಸಾರ್ಥಕತೆ ದೊರೆಯುತ್ತದೆ. ನೈತಿಕ ಮೌಲ್ಯ ತುಂಬಿದ ನೀತಿ ಸಂಹಿತೆ ನಮ್ಮ ಬದುಕಿನಲ್ಲಿರಬೇಕು. ಆಧುನಿಕ ಸಂಸ್ಕೃತಿಯೊಂದಿಗೆ ಆಧ್ಯಾತ್ಮ ತುಂಬಿದ ಸನಾತನ ಸಂಸ್ಕೃತಿಯನ್ನು ಮರೆಯಬಾರದು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕು ತೆಂಕಕಜೆಕಾರು ಗ್ರಾಮದ ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ಪ್ರಯುಕ್ತ ಬುಧವಾರ ಜರಗಿದ ಧಾಮರ್ಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಚಿತ್ರ: ಶ್ರೀ ರಾಮ್ ಸ್ಟುಡಿಯೋ
ದೇಶದ ಮಹತ್ವವೇ ಮಾತೃ ಸ್ಥಾನವಾಗಿದ್ದು ತಾಯಿಗೆ ಶ್ರೇಷ್ಠ ಸ್ಥಾನ ನೀಡಲಾಗಿದೆ. ಮಕ್ಕಳಲ್ಲಿ ನೈತಿಕತೆ ತುಂಬುವ ಜತೆಗೆ ಕುಟುಂಬವನ್ನು ಬೆಳಗುವ ಜವಾಬ್ದಾರಿ ತಾಯಿಗಿದೆ. ಧಾಮರ್ಿಕ ಚಿಂತನೆಗಳ ಮೂಲಕ ನಮ್ಮ ಧರ್ಮ-ಸಂಸ್ಕೃತಿಯನ್ನು ತಿಳಿಯಬಹುದು. ದೇವಳದ ಜೀಣರ್ೋದ್ಧಾರ, ಜಾತ್ರೆ ಉತ್ಸವಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ನಮ್ಮಲ್ಲಿರುವ ಸಂಪತ್ತಿನಲ್ಲಿ ಕಿಂಚಿತ್ತನ್ನು ದೇವರಿಗೆ ನೀಡಿದಾಗ ಬದುಕು ಹಸನಾಗುತ್ತದೆ ಎಂದು ಅವರು ನುಡಿದರು.
ಕಕ್ಯಪದವು ಶ್ರೀ ಪಂಚದುಗರ್ಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಉಳಿ ದಾಮೋದರ ನಾಯಕ್ ಅವರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ತಾರಾನಾಥ ಕೊಟ್ಟಾರಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಂಟ್ವಾಳ ಯೋಜನಾಕಾರಿ ದಯಾವತಿ ಎಸ್., ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣಪ್ಪ ಬಂಗೇರ, ಉದ್ಯಮಿಗಳಾದ ಜಗನ್ನಾಥ ಶೆಟ್ಟಿ , ಹೇಮಂತ ಕುಮಾರ್, ಬೆಳ್ತಂಗಡಿ ನ್ಯಾಯವಾದಿ ಮನೋಹರ್ ಕುಮಾರ್, ಕಿಟ್ಟೆಲ್ ಮೆಮೋರಿಯಲ್ ಕಾಲೇಜ್ ಪ್ರಾಂಶುಪಾಲ ವಿಠಲ ಎ. ಅಬುರ, ಆಡಳಿತ ಮೊಕ್ತೇಸರ ಯಶೋಧರ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ರೋಹಿನಾಥ್ ಪಾದೆ, ಅಧ್ಯಕ್ಷ ಕೆ. ಸತೀಶ್ಚಂದ್ರ ಹೊಸಮನೆ, ಕೋಶಾಕಾರಿ ಯಂ.ಮೋನಪ್ಪ ಪೂಜಾರಿ ಕಂಡೆಂತ್ಯಾರು, ಜೀಣರ್ೋದ್ಧಾರ ಸಮಿತಿ ಉಪಾಧ್ಯಕ್ಷ ಪ್ರವೀಣ ಅಬುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತ ಮಂಡಳಿ, ಬ್ರಹ್ಮಕಲಶ ಸಮಿತಿ, ಸ್ವಾಗತ ಸಮಿತಿ, ಜೀಣರ್ೋದ್ಧಾರ ಸಮಿತಿ, ಭಜನಾ ಮಂಡಳಿ ಸಮಿತಿ, ಮಹಿಳಾ ಮಂಡಳಿ ಸಮಿತಿಗಳ ಸದಸ್ಯರು ಭಾಗವಹಿಸಿದ್ದರು.
ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಕೆ. ಹರೀಶ್ಚಂದ್ರ ಪೂಜಾರಿ ಅವರು ಸ್ವಾಗತಿಸಿ ಪ್ರಸ್ತಾವಿಸಿ ಮಾತನಾಡಿ 17 ವರ್ಷಗಳ ಬಳಿಕ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು 30 ಲ. ರೂ. ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತಾಗಳು ತನು-ಮನ-ಧನಗಳಿಂದ ಸಹಕರಿಸಬೇಕು ಎಂದು ಹೇಳಿದರು. ಲಕ್ಷ್ಮಣ ಕಲ್ಲಮಾಂತೆ ವಂದಿಸಿದರು. ಪ್ರಕಾಶ ಕರ್ಲ ಕಾರ್ಯಕ್ರಮ ನಿರೂಪಿಸಿದರು.

