ಮೂಡುಬಿದಿರೆ: ಮಹಿಳೆಯ ಮಾನಭಂಗಕ್ಕೆ ಯತ್ನ, ಯುವಕನಿಗೆ ಹಲ್ಲೆ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದ ಕೋಟೆಬಾಗಿಲಿನ ಸುಭಾಸ್ನಗರದ ನಿವಾಸಿ ರವಿ ದೇವಾಡಿಗನನ್ನು ಶುಕ್ರವಾರ ಪೊಲೀಸರು ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಬಂಧಿಸಿದ್ದಾರೆ.

ಆರೋಪಿ ರವಿ ದೇವಾಡಿಗನ ವಿರುದ್ಧ ಕೋಟೆಬಾಗಿಲಿನಲ್ಲಿ ಮಹಿಳೆಯೊಬ್ಬರ ಸೀರೆ ಎಳೆದು ಮಾನಭಂಗಕ್ಕೆ ಯತ್ನಿಸಿದ್ದ, ಆಕೆಯ ಮಗ ಮಹಂತೇಶ್ಗೆ ಕಬ್ಬಿಣದ ಗೇಟಿನಿಂದ ಹಲ್ಲೆ ನಡೆಸಿದ್ದು ಹಾಗೂ ಈತನ ದುರ್ನಡತೆಯನ್ನು ಪ್ರಶ್ನಿಸಲು ಬಂದ ಸ್ಥಳೀಯ ಕೆಲವರಿಗೆ ಬೆದರಿಕೆಯೊಡ್ಡಿದ ದೂರು ಮೂಡುಬಿದಿರೆ ಪೊಲೀಸ್ಠಾಣೆಯಲ್ಲಿ ದಾಖಲಾಗಿತ್ತು. ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಆರೋಪಿಯನ್ನು ಈಚೆಗೆ ಬಂಧಿಸಲು ಆತನ ಮನೆಗೆ ಹೋದ ಪೊಲೀಸರತ್ತ ಸೀಮೆ ಎಣ್ಣೆ ಕ್ಯಾನ್ ಎಸೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಎನ್ನಲಾಗಿದೆ.
ಪೊಲೀಸರು ನನಗೆ ಹಾಗೂ ನನ್ನ ಮೂವರು ಹೆಣ್ಮಕ್ಕಳ ವಿರುದ್ಧ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ರವಿ ಮತ್ತು ಆತನ ಹೆಣ್ಮಕ್ಕಳು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ರವಿಗೆ ಯಾವುದೇ ತೊಂದರೆ ಇಲ್ಲ ಆಸ್ಪತ್ರೆಯಿಂದ ಡಿಸ್ಚಾಜರ್್ ಆಗಬಹುದು ಎಂದು ವೈದ್ಯರು ತಿಳಿಸಿದ್ದರೂ ಆತ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲು ನಿರಾಕರಿಸಿದ್ದ ಎನ್ನಲಾಗಿದೆ. ಶನಿವಾರ ಆಸ್ಪತ್ರೆ ಆವರಣದಿಂದ ಮೂಡುಬಿದಿರೆ ಪೊಲೀಸರು ಬಂಧಿಸಿ, ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತನಿಗೆ ಜೂನ್ 26ರವರೆಗ ನ್ಯಾಯಾಂಗ ಬಂಧನ ವಿಧಿಸಿದೆ.
