ಬಂಟ್ವಾಳ :ಬಂಟ್ವಾಳ ತಾಲೂಕು ನಯನಾಡು ಸಂತ ಫ್ರಾನ್ಸಿಸ್ ಅಸ್ಸಿಸಿ ನೂತನ ಚರ್ಚ್ ಕಟ್ಟಡದ ಪ್ರಥಮ ವಾರ್ಷಿಕೋತ್ಸವ ಹಾಗೂ ನೂತನ ಚರ್ಚ್ ನಿವಾಸದ ಶಂಕುಸ್ಥಾಪನಾ ಕಾರ್ಯಕ್ರಮ ಮೇ 8ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಜರಗಲಿದೆ.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಅಲೋಶಿಯಸ್ ಪಾವ್ಲ್ ಅವರು ಬಲಿಪೂಜೆ ನಡೆಸಲಿರುವರು. ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ , ಬೆಳ್ತಂಗಡಿ ಚರ್ಚ್ ಧರ್ಮಗುರು ಫಾ|ಬೊನವೆಂಚರ್ ನಜರತ್, ಬಂಟ್ವಾಳ ಪುರಸಭೆ ಪ್ರಾ„ಕಾರ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಚರ್ಚ್ ಧರ್ಮಗುರು ಫಾ| ಫ್ರೆಡ್ರಿಕ್ ಮೊಂತೆರೋ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *