ಬಂಟ್ವಾಳ: ದಿನ ಪೂರ್ತಿ ಟ್ರಾಫಿಕ್ ಜಾಮ್ ಸಮಸ್ಯೆಗೆ ರೈಲ್ವೆ ಮೇಲ್ಸೆತುವೆ ಕಾಮಗಾರಿಯವರ ಬೇಜವಬ್ದಾರಿ ಕೆಲಸ ಎಂದು ಸ್ಥಳೀಯರ ಆರೋಪ. ಇಲ್ಲಿನ ರೈಲ್ವೆ ಮೇಲ್ಸೆತುವೆ ಕಾಮಗಾರಿಯ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅರ್ದ ಕಬಳಿಸಿರುವುದು ವಾಹನ ಸಂಚಾರಕ್ಕೆ ಅಡಚನೆಯುಂಟಾಗುತ್ತಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾರೆ. ಕುಂಟುತ್ತಾ ಸಾಗುತ್ತಿರುವ ಈ ರೈಲ್ವೆಯವರ ಕಾಮಗಾರಿಯಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕಾಮಗಾರಿಯನ್ನು ನಡೆಸುವ ಸಲುವಾಗಿ ಇಲ್ಲಿನ ಹೆದ್ದಾರಿಯನ್ನು ಕಡಿದು ಅದರೆ ಮೇಲೆ ಮಣ್ಣು ತುಂಬಿಸಿದ್ದಾರೆ ಜೊತೆಗೆ ರಸ್ತೆಯಲ್ಲಿ ಸಂಚಾರ ಮಾಡದಷ್ಟು ಸಪೂರ ಮಾಡಿರುವುದೇ ಟ್ರಾಫಿಕ್ ಜಾಂ ಸಮಸ್ಯೆಗೆ ಮುಖ್ಯ ಕಾರಣವಾಗುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.
DSC_5803

DSC_5811
ರಸ್ತೆಯ ಬದಿಯಲ್ಲಿ ಮಣ್ಣು ಹಾಕಲಾಗಿದೆ. ರಸ್ತೆಯ ತುಂಬ ಮಣ್ಣು ಇದ್ದು ವಾಹನ ಸಂಚಾರ ಮಾಡುವರಿಗೆ ದೂಳಿನಿಂದ ಸಂಚಾರ ಮಾಡಲು ಅಸಾಧ್ಯ ವಾಗುತ್ತಿದೆ . ರಸ್ತೆಗೆ ಹಾಕಲಾಗಿದ ಮಣ್ಣು ದಿಬ್ಬದಾಕರದಲ್ಲಿದ್ದು ವಾಹನಗಳು ಡ್ಯಾನ್ಸ್ ಮಾಡುತ್ತಾ ಹೊಗಬೇಕಾದ ಪರಿಸ್ಥಿತಿ. ರಸ್ತೆಯ ಬದಿಯ ತಡೆಗೋಡೆ ಕೂಡಾ ಸರಿಯಾಗಿ ಮಾಡದೇ ಇರುವುದರಿಂದ ಮಳೆ ಆರಂಭವಾದರೆ ಇಲ್ಲಿನ ಹೆದ್ದಾರಿಯ ಸಂಚಾರ ಕಡಿತ ಆಗುವ ಸಂಭವ ಕೂಡಾ ಇದೆ. ಹಾಗಾಗಿ ಶೀಘ್ರವಾಗಿ ಕಾಮಗಾರಿಯನ್ನು ಮುಗಿಸುಂತೆ ಸಾರ್ವಜನಿಕರು ಒತ್ತಾಯಿಸುತ್ತಿದಾರೆ.

By suddi9

Leave a Reply

Your email address will not be published. Required fields are marked *