ಮಂಗಳೂರು: ತವರಿನಲ್ಲಿ ನಡೆದ ಫೆಡರೇಶನ್‌ ಕಪ್‌ ಆ್ಯತ್ಲೆಟಿಕ್‌ ಕೂಟದಲ್ಲಿ ನನ್ನ ನಿರ್ವಹಣೆಯಿಂದ ಸಂತೋಷವಾಗಿದೆ ಮತ್ತು ಅಷ್ಟೇ ನಿರಾಸೆಯೂ ಆಗಿದೆ ಎಂದು ಹೈಜಂಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸಹನಾ ಕುಮಾರಿ ಹೇಳಿದ್ದಾರೆ.
0105mlr21-sahana_0

ತವರಿನಲ್ಲಿ ಚಿನ್ನ ಗೆದ್ದಿರುವುದು ಸಂತೋಷವಾಗಿದೆ. ಆದರೆ ಏಶ್ಯನ್‌ ಕೂಟದ ಅರ್ಹತಾ ಮಟ್ಟ ತಲುಪಲು ಸಾಧ್ಯವಾಗದ ಕಾರಣ ನಿರಾಶೆಯಾಗಿದೆ. ಅರ್ಹತಾ ಮಟ್ಟ ತಲುಪಲು 1.88 ಮೀ. ಎತ್ತರ ಹಾರಬೇಕಿತ್ತು. ಆದರೆ ನನ್ನಿಂದ 1.76 ಮೀ. ಹಾರಲು ಮಾತ್ರ ಸಾಧ್ಯವಾಯಿತು. ಜೂನ್‌ನಲ್ಲಿ ಏಶ್ಯನ್‌ ಕೂಟ ನಡೆಯಲಿದೆ. ಸಮಯ ಬಹಳ ಕಡಿಮೆಯಿದೆ.

ಕಳೆದ ಎರಡು ವರ್ಷಗಳಿಂದ ಸಮರ್ಥ ಕೋಚ್‌ ಇಲ್ಲದಿರುವುದು ಹಿನ್ನಡೆಗೆ ಕಾರಣವಾಗಿದೆ. ಒಳ್ಳೆಯ ಕೋಚ್‌ ಸಿಕ್ಕಿದರೆ ಇನ್ನಷ್ಟು ಉತ್ತಮ ಸಾಧನೆ ಮಾಡಬಹುದಿತ್ತು ಎಂದವರು ನುಡಿದರು.

ಸಹನಾ ಕುಮಾರಿ ಕಳೆದ ಒಂದು ತಿಂಗಳಿಂದ ಮಂಗಳಾ ಕ್ರೀಡಾಂಗಣದಲ್ಲಿಯೇ ತರಬೇತಿ ಪಡೆಯುತ್ತಿದ್ದರು. ಅವರ ತರಬೇತಿಗಾಗಿ ಬೇಕಾದ ಎಲ್ಲ ಸೌಕರ್ಯಗಳನ್ನು ಕ್ರೀಡಾ ಸಚಿವರಾದ ಅಭಯಚಂದ್ರ ಜೈನ್‌ ವ್ಯವಸ್ಥೆ ಕಲ್ಪಿಸಿದ್ದರು. ಇದರಿಂದ ಸಹನಾ ಈ ಸಾಧನೆ ಮಾಡುವಂತಾಯಿತು.

By suddi9

Leave a Reply

Your email address will not be published. Required fields are marked *