ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮೇ 1ರಿಂದ ಗಲ್ಫ್ ವಿಮಾನ ಸೇವಾ ವಿಭಾಗ ಸಹಿತ ಎಲ್ಲ ವಿಭಾಗಗಳಲ್ಲಿ 24 ಗಂಟೆಗಳ ಕಾರ್ಯನಿರ್ವಹಣೆಯನ್ನು ಪುನರಾರಂಭಿಸಲಿದೆ.

ಕೊಳಂಬೆ ಪ್ರದೇಶದಲ್ಲಿ ಓವರ್‌ ರನ್‌ವೇ ನಿರ್ಮಾಣ ಕಾಮಗಾರಿಯನ್ನು 6 ತಿಂಗಳ ಹಿಂದೆ ಕೈಗೆತ್ತಿಕೊಂಡಿದ್ದು, ಇದೀಗ ಎಲ್ಲ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
airport

ವೇಳಾ ಪಟ್ಟಿ ಬದಲಾವಣೆ

ಇದೇ ವೇಳೆ ಗಲ್ಫ್ ವಿಮಾನ ಸೇವಾ ವಿಭಾಗದ ದಮಾಂ, ದುಬಾೖ, ಮಸ್ಕತ್‌ ವಿಮಾನ ಯಾನದ ವೇಳಾ ಪಟ್ಟಿಯಲ್ಲಿ ಕೆಲವು ಬದಲಾವಣೆಗಳಾಗಿವೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಐಎಕ್ಸ್‌ 886 ಮಂಗಳೂರು- ದಮಾಂ- ಮಂಗಳೂರು, ಐಎಕ್ಸ್‌ 814 ಮಂಗಳೂರು- ದುಬಾೖ- ಮಂಗಳೂರು ಮತ್ತು ಐಎಕ್ಸ್‌ 817 ಮಂಗಳೂರು- ಮಸ್ಕತ್‌- ಮಂಗಳೂರು ವಿಮಾನಗಳ ವೇಳಾ ಪಟ್ಟಿ ಬದಲಾಗಿದೆ.

ಜೆಟ್‌ ಏರ್‌ವೆಸ್‌ ವಿಮಾನಗಳ ಗಲ್ಫ್ ವಿಮಾನ ಸೇವಾ ವಿಭಾಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣನ್‌ ತಿಳಿಸಿದ್ದಾರೆ. .

By suddi9

Leave a Reply

Your email address will not be published. Required fields are marked *