ಮುಂಬೈ: ಬಾಲಿವುಡ್ ಗಲ್ಲಿಯಲ್ಲಿ ಹರಡುವ ಎಲ್ಲಾ ಸುದ್ದಿಗಳು ನಂಬಲರ್ಹವಲ್ಲ. ಈ ಸುದ್ದಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಬರೀ ಸುಳ್ಳು ಸುದ್ದಿಗಳೇ ಆಗಿರುತ್ತದೆ. ಸದ್ಯ ಬಿಟೌನ್ ಗಲ್ಲಿಯಿಂದ ಬಂದಿರುವ ಸ್ಫೋಟಕ ಮಾಹಿತಿಯೇನೆಂದರೆ ರಣ್ ಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ವಿವಾಹವಾಗುತ್ತಿದ್ದಾರೆ ಎಂಬುದು. ನ್ಯೂಯಾರ್ಕ್ ಬೀಚ್ ನಲ್ಲಿ ಟೂ ಪೀಸ್ ಧರಿಸಿ ಸುತ್ತಾಡುತ್ತಿದ್ದ ಬೀರ್-ಕ್ಯಾಟ್ ಜೋಡಿಯ ಫೋಟೊಗಳು ಇಂಟರ್ನೆಟ್ ನಲ್ಲಿ ಬಿತ್ತರವಾಗಿ ಎರಡು ಮೇರು ನಟರ ಅಭಿಮಾನಿಗಳ ಹೃದಯಕ್ಕೆ ಕೊಳ್ಳಿಯಿಟ್ಟಂತಾಗಿತ್ತು.

ranbir-katrina-new
ಈ ಬಗ್ಗೆ ರಣ್ ಬೀರ್ ಹೆತ್ತವರಾದ ರಿಷಿ ಕಪೂರ್ ಮತ್ತು ನೀತೂ ಕತ್ರೀನಾ ಜೊತೆಗಿನ ಪ್ರೇಮಸಲ್ಲಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ರಣ್ ಬೀರ್ ಕ್ಯಾಟ್ ಸಂಗ ಬಿಡಲಿಲ್ಲ. ಸದ್ಯ ಈ ಪ್ರೇಮ ಪಕ್ಷಿಗಳು ಸ್ವಚ್ಛಂದವಾಗಿ ಹಾರಾಡುತ್ತಿದ್ದು 2015ರಲ್ಲಿ ಮದುವೆಯ ಬಂಧನಕ್ಕೆ ಒಳಗಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಮಾಹಿತಿಯ ಸತ್ಯಾಸತ್ಯತೆ ಮಾತ್ರ ಇನ್ನೂ ಧೃಢಪಟ್ಟಿಲ್ಲ.

By suddi9

Leave a Reply

Your email address will not be published. Required fields are marked *