ವಾಮಾಂಜೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ 97ನೇ ನೂತನ ಶಾಖೆಯು ಸೋಮವಾರ ಬೆಳಿಗ್ಗೆ ತಿರುವೈಲು ಗ್ರಾಮದ ವಾಮಂಜೂರಿನ ಶ್ರೀ ಅಮೃತೇಶ್ವರ ಬೀಲ್ಡಿಂಗ್‍ನಲ್ಲಿ ಆರಂಭಗೊಂಡಿತು. ಇದರ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಮತ್ತು ದೀಪ ಬೆಳಗಿಸುವ ಮೂಲಕ ಮಂಗಳೂರು ಉತ್ತರ ಕ್ಷೇತ್ರದ ಬಿ.ಎ ಮೊಹಿಯಿದ್ದಿನ್ ಬಾವ ನೇರವೇರಿಸಿದರು. ನಂತರ ಗಣಕೀಕರಣ ಉದ್ಘಾಟನೆಯನ್ನು ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಶೆಟ್ಟಿ ನೇರವೇರಿಸಿದರು. ಬ್ಯಾಂಕಿನ ಭದ್ರತಾ ಕೋಶ ಉದ್ಘಾಟನೆಯನ್ನು ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್ ಸಾಲಿಯಾನ್ ನೇರವೇರಿಸಿದರು.
ಬ್ಯಾಂಕಿನ ಸಾಲ ಪಡೆದು ತೆಗೆದುಕೊಂಡ ಬೈಕ್ ಮಾಲಕರಿಗೆ ಕೀಯನ್ನು ಉತ್ತರ ಕ್ಷೇತ್ರದ ಬಿ.ಎ ಮೊಹಿಯಿದ್ದಿನ್ ಬಾವ ಅಸ್ತಾಂತರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಥಮ ಠೇವಣಿ ಪತ್ರವನ್ನು ರಾಜೇಶ್ ಅವರಿಗೆ ಶಾಸಕರು ನೀಡಿದರು. ಪ್ರಥಮ ಸಂಚಾಯಖಾತೆ(ಪಾಸ್ ಬುಕ್) ಆಶೋಕಶೆಟ್ಟಿ, ಅಪ್‍ನಾಸ್ ಪೆರ್ಮಂಕಿ ಪ್ರಥಮ ಸಾಲ ಪತ್ರ ಕೆ.ಸಂತೋಷ್, ಪೂರ್ಣಿಮ ಪಿ, ಕಿರಣ್ ಗಟ್ಟಿ,
ಪ್ರಥಮ ಲಾಕರ್ ಕೀ ಐತಪ್ಪ ಪೂಜಾರಿಯವರಿಗರ ಅಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಹರಿ, ಸಿಂಚನ, ಗಣಪ, ಸುಭ್ರಮಣ್ಯ ನಾಲ್ಕು ನವೋದಯ ಸ್ವ ಸಹಾಯ ಸಂಘವನ್ನು ಉದ್ಘಾಟಿಸಲಾಯಿತು.

ಸಂಚಾಯ ಖಾತೆ 2000 ಮೇಲ್ಪಟ್ಟು ಮತ್ತು ಠೇವಣಿದಾರರ ಲಕ್ಕಿಡಿಪ್ ಡ್ರಾವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಮಾಡಿದರು. ರಾಜೇಶ್ ಕೊಟ್ಟಾರಿ ಮತ್ತು ಕಿಶನ್ ದೊಡ್ಡಮನೆ ನಾಲ್ಕು ಗ್ರಾಂ ಚಿನ್ನ ಬಹುಮಾನವಾಗಿ ಪಡೆದರು. ಸಂಚಾಯ ಖಾತೆ 25000 ಮೇಲ್ಪಟ್ಟು ಮತ್ತು ಠೇವಣಿದಾರರ ಲಕ್ಕಿಡಿಪ್ ಡ್ರಾ. ಪ್ರಥಮ ಮತ್ತು ದ್ವೀತಿಯ ಲಕ್ಷ್ಮೀಶ್ರೀ ಗುರುಕೃಪಾ ಅವರು ನಾಲ್ಕು ಗ್ರಾಂ ಚಿನ್ನ ಬಹುಮಾನವಾಗಿ ಪಡೆದರು.
ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು ಪ್ರಬಲರಾಗಿದ್ದಾರೆ. ಮಹಿಳೆಯರು ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್‍ನ ಪ್ರಯೋಜನಗಳನ್ನು ಪಡೆಯಬೇಕು.ಬೇರೆ ಯಾವುದೇ ಬಡ್ಡಿ ಜಾಸ್ತಿ ಕೊಡುವ ನೆಪದಲ್ಲಿ ಪಂಗನಾಮ ಹಾಕುವ ಸಹಕಾರಿ ಬ್ಯಾಂಕ್‍ಗಳಿಗೆ ಮಾರು ಹೋಗಬಾರದು. ಈ ಸಹಕಾರಿ ಬ್ಯಾಂಕ್ ಬಡವರ ಅಭಿವೃದ್ಧಿ ಮಾಡುವ ಬ್ಯಾಂಕ್ ಜನರು ಇಂತಹ ಬ್ಯಾಂಕುಗಳ ಸದಸ್ಯರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಬ್ಯಾಂಕ್‍ನ ಅಧಿಕಾರಿಗಲು ಒಳ್ಳೆಯ ಕೆಲಸಗಳನ್ನು ಮಾಡಿ ಜನರಿಗೆ ಅತ್ಯಂತ ಸುಲಭ ರೂಪದಲ್ಲಿ ಬ್ಯಾಂಕ್‍ನ ಸದುಪಯೋಗ ಪಡೆಯುವಲ್ಲಿ ಸಹಕಾರಿಯಾಗಬೇಕು.
ಇದೇ ಸಂದರ್ಭದಲ್ಲಿ ಕಟ್ಟಡದ ಮಾಲೀಕರಾದ ವೀರಣ್ಣ ಪೂಜಾರಿ ಮತ್ತು ವಾಮಮಜೂರು ಶಾಖ ವ್ಯವಸ್ಥಾಪಕರಾದ ಪ್ರಶಾಂತ್ ನೆಲ್ಲಿಪಾಡಿ ಅವರನ್ನು ಸಮ್ಮಾನಿಸಲಾಯಿತು.
ಗಣಕೀಕರಣ ಉದ್ಘಾಟನೆಯನ್ನು ಮಾಡಿದ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾರ್ ಶೆಟ್ಟಿ ಮತಾನಾಡಿ ನಮ್ಮಕ್ಷೇತ್ರದಲ್ಲಿ ಅಡ್ಡೂರು ಮತ್ತು ಮೂಡುಶೆಡ್ಡೆಗಳಲ್ಲಿ ಹೊಸ ಶಾಖೆಯನ್ನು ಪ್ರಾರಂಭ ಮಾಡಬೇಕೆಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು ಮತ್ತು ನೂತನ ಶಾಖೆಗೆ ಶುಭ ಹಾರೈಸಿದರು.
ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್ ಮತನಾಡಿ ಈ ಪ್ರದೇಶಕ್ಕೆ ಸಹಕಾರಿ ಬ್ಯಾಂಕಿನ ಅವಶ್ಯಕತೆ ಇತ್ತು. ಜನರು ಇದರಲ್ಲಿ ಸಿಗುವ ಸದುಪಯೋಗವನ್ನು ಪಡೆಉಕೊಳ್ಳಬೇಕು ಮತ್ತು ಬ್ಯಾಂಕ್ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಯಶವಂತಿ ಆಳ್ವ ಮಾತನಾಡಿ ಸಹಕಾರಿ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡ ಮಹಿಳೆಯರು ತನ್ನ ಸ್ವಂತ ಉದ್ಯೋಗ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ.
100ನೇ ವರ್ಷ ತುಂಬುವ ಸಮಯದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಸಹಕಾರಿಗಲಿಗೆ ಒಂದು ವಿಶೇಷವಾದ ಕೊಡುಗೆಯನ್ನು ಕೊಡಬೇಕು ಸುಮಾರು 20ವರ್ಷಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ದಾಖಲೆಯನ್ನು ನಿರ್ಮಿಸಿದ ನಮ್ಮ ಜಿಲ್ಲೆಯ ರೈತರಿಗೆ ವಿಶೇಷವಾದ ಯೋಜನೆಯನ್ನು ರೂಪಿಸುವ ಚಿಂತನೆಯಲ್ಲಿದ್ದೇವೆ. ನಮ್ಮ 97ನೇ ಶಾಖೆ ಆರಂಭಗೊಂಡಿದೆ. ವಾಮಂಜೂರು ಎಂಬ ಪ್ರದೇಶದಲ್ಲಿ ಮದ್ಯಮ ವರ್ಗದ ಜನರು ಇಲ್ಲಿ ನೆಲೆಸಿದ್ದಾರೆ. ಇಲ್ಲಿ 7 ವರೆ ಕೋಟಿ ಠೇವಣಿ ಇಟ್ಟಿದ್ದಾರೆ. ಮತ್ತು 850 ಖಾತೆ ತೆರೆದಿದ್ದಾರೆ. ಮೇ.2ರಂದು ಹೆಬ್ರಿಯಲ್ಲಿ 98 ನೇ ಶಾಖೆ -, ಮೇ.4 ಕೋಟೆಕಾರ್‍ನಲ್ಲಿ 99ನೇ ಶಾಖೆ ಆರಂಭಗೊಳ್ಳಲಿದೆ. 100 ನೇ ಶಾಖೆ ಬರುವ ತಿಂಗಳ ಅಂತ್ಯದಲ್ಲಿ ಆರಂಭಗೊಳ್ಳಲಿದೆ. ಜನರು ಬ್ಯಾಂಕಿನ ಸೇವೆಗೋಸ್ಕರ ಅರ್ಥಿಕ ಸೌಲಭ್ಯ ಪಡೆಯುವಗೋಸ್ಕರ ಅಥವಾ ಠೇವಣಿ ಇಡುವ ಗೋಸ್ಕರ ಪಟ್ಟಣ ಪ್ರದೇಶಕ್ಕೆ ಬರಬಾರದು ಗ್ರಾಮೀಣ ಪ್ರದೇಶದಲ್ಲಿ ಕೂಡ ಬ್ಯಾಂಕಿನ ಸೇವೆ ಅವರಿಗೆ ಸಿಗಬೇಕೆಂಬ ದೃಷ್ಟಿಕೋನದಿಂದ ನಾವು ಗ್ರಾಮಂತರ ಪ್ರದೇಶಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಇವತ್ತು ನಗದು ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುವ ಕೆಂದ್ರಸರಕಾರದ ಧೋರಣೆ ಕೂಡ ಇದೇ ಆಗಿದೆ.
ಅದಕ್ಕೆ ನಾವು ಗ್ರಾಮಂತರ ಮಟ್ಟದ ಎಲ್ಲಾ ಜನರು ಬ್ಯಾಂಕಿಗ್ ಸೇವೆ ಪಡೆದುಕೊಳ್ಳಬೇಕು ಅವರು ಅದರಿಂದ ಅರ್ಥಿಕ ಸ್ವಾವಲಂಬಿ ಆಗಬೇಕು ಎಂಬ ಚಿಂತನೆಯಿಂದ ಹೆಚ್ಚು ಹೆಚ್ಚು ಶಾಖೆಗಳನ್ನು ಮಾಡುತ್ತಾ ಇದ್ದೇವೆ. ಕಳೆದ ವರ್ಷ ನಾವು ಅರ್ಥಿಕ ವರ್ಷದಲ್ಲಿ 25 ಶಾಖೆಗಳನ್ನು ಮಾಡಿ ಕೂಡ ಮತ್ತು ಒಂದು ಹೊಸ ಕಟ್ಟವನ್ನು ನಿರ್ಮಿಸಿ ಕೂಡ ಸೂಮಾರು 22.75 ಕೋಟಿ ಲಾಭ ಮಾಡಿದೆ. ಅದರಲ್ಲಿ ಕೂಡ ಕೃಷಿ ಸಾಲದಲ್ಲಿ ನಮಗೆ ಲಾಭಂಶವಿಲ್ಲ ಸುಮಾರು 800 ಕೋಟಿ ಕೃಷಿ ಸಾಲಕ್ಕೆ ಹೋಗುತ್ತದೆ. ಅದರೂ ಕೂಡ ಕೃಷಿ ಸಾಲದಲ್ಲಿ ಲಾಭಾಂಶ ಇಟ್ಟುಕೊಂಡಿಲ್ಲ. ಸದ್ರಿಯ ಅರ್ಥಿಕ ವರ್ಷದಲ್ಲಿ ನಾವು ಇನ್ನು ಹೆಚ್ಚು ಜನರಿಗೆ ಅರ್ಥಿಕ ಸೌಲಭ್ಯ ಒದಗಿಸಬೇಕು. ಮತ್ತು 100 ವರ್ಷ ತುಂಬಿದಾಗ ಇದು ಜನರ ಬ್ಯಾಂಕಾಗಬೇಕು. ಮನೆ ಸಾಲಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ವ್ಯವಸ್ಥೆಯನ್ನು ಎ.30ರಂದು ಘೋಷಣೆ ಮಾಡುತ್ತೇವೆ. ರೈತರಿಗೆ ವಿಶೇಷವಾದ ಯೋಜನೆ ಎ.30ರಂದು ಪ್ರಕಟವಾಗಲಿದೆ. ಈ ಬ್ಯಾಂಕ್ ರೈತರ ಮತ್ತು ಜನರ ಬ್ಯಾಂಕ್. ಪರಿವರ್ತನೆಯ ಕಾಳಜಿ ಮಾಡುತ್ತವೆ. ರೈತರಿಗೆ ಸಾಲ 3ಲಕ್ಷದವರೆಗೆ ಬಡ್ಡಿ ಇಲ್ಲ 10ಲಕ್ಷದವರೆಗೆ 3% ಬಡ್ಡಿ ಸಾಲ ಕೊಡುತ್ತದೆ. ಹಣವೆಂಬುದು ನಿತ್ಯ ಚಲಾವಣೆಯಾದಾಗ ಮಾತ್ರ ಅದಕ್ಕೆ ಮಹತ್ವ ಬರುತ್ತದೆ. ನಮ್ಮ ಆಸ್ತಿಯೇ ಗ್ರಾಹಕರು ಎಂದರು.
ವಾಮಂಜೂರು ಶಾಖೆಯ ಒಟ್ಟು ಡೆಪೋಸಿಟ್ 7,26,85,160, ವಯಕ್ತಿಕ ಡೆಪೋಸಿಟ್ 93,80,660, ಒಟ್ಟು ಖಾತೆಗಳ ಸಂಖ್ಯೆ 822.
ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ದ.ಕ.ಸಹಕಾರಿ ಬ್ಯಾಂಕ್‍ನ ಉಪಾದ್ಯಕ್ಷ ವಿನಯ್ ಕುಮಾರ್ ಸೊರಿಂಜೆ, ಮುಖ್ಯ ಪ್ರಭಾರ ಕಾರ್ಯನಿರ್ವಾಣಾಧಿಕಾರಿ ಜಿ.ಬಾಬು ಬಿಲ್ಲವ, ಮಂಗಳೂರು ಎ.ಪಿ.ಎಮ್.ಸಿ.ಅಧ್ಯಕ್ಷ ಮೊನಪ್ಪ ಶೆಟ್ಟಿ ಎಕ್ಕಾರು, ನಿರ್ದೇಶಕರಾದ ಭಾಸ್ಕರ್ ಎಸ್ ಕೋಟ್ಯಾನ್, ಕಟ್ಟಡ ಮಾಲಿಕ ವೀರಣ್ಣ ಪೂಜಾರಿ ಉಪಸ್ಥಿತರಿದ್ದರು. ಕುಮಾರಿ ಗಾನಶ್ರೀ ಪ್ರಾರ್ಥಿಸಿದರು. ನಿರ್ದೇಶಕರಾದ ಭಾಸ್ಕರ್ ಎಸ್ ಕೋಟ್ಯಾನ್ ಸ್ವಾಗತಿಸಿದರು. ನರೇಂದ್ರ ಕರೆಕಾಡು ನಿರೂಪಿಸಿದರು. ಜಿ.ಬಾಬು ಬಿಲ್ಲವ ವಂದಿಸಿದರು
