ಸುದ್ದಿ9ಸಜಿಪ:ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದ ನೇತಾಜಿ ಯುವಕ ಸಂಘದ 15ನೇ ವರ್ಷದ ವಾರ್ಷಿಕೋತ್ಸವವು ಎ. 26 ಭಾನುವಾರ ಜರಗಲಿದೆ. ಬೆಳಗ್ಗೆ ಗುಳಿಗ ದೈವಕ್ಕೆ ಗಣಹೋಮ,ಶುದ್ಧಕಲಶಾಭಿಷೇಕ,ಮಹಾಪೂಜೆ ಕಲ್ಪೋಕ್ಷ ಪೂಜೆ ನಡೆದ ಬಳಿಕ ಬೆಳಗ್ಗೆ 9 ಗಂಟೆಯಿಂದ ಆಹ್ವಾನಿತ ಭಜನಾ ಮಂಡಳಿಗಳಿಂದ “ಭಜನಾ ಸ್ಪರ್ಧೆ ” ಸಾಯಂಕಾಲ 3 ರಿಂದ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ, ಸಾಯಂಕಾಲ 7 ಗಂಟೆಯಿಂದ ಗುಳಿಗ ದೈವಕ್ಕೆ ಕೋಲೋತ್ಸವ ನಡೆಯಲಿದೆ. ರಾತ್ರಿ 8 30 ಕ್ಕೆ ಧಾರ್ಮಿಕ ಸಭೆ ಹಾಗೂ ಅಭಿನಂದನಾ ಸಮಾರಂಭ ಸಜಿಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಮುಳ್ಳಂಜ ವೆಂಕಟೇಶ್ವರ ಭಟ್ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ವಿ.ಹಂ.ಪ ಕಾರ್ಯಧ್ಯಕ್ಷ ಜಿತೇಂದ್ರ ಕೊಟ್ಟಾರಿ ವಹಿಸಲಿದ್ದಾರೆ. ದಿವ್ಯ ಉಪಸ್ಥಿತಿ ನಾಲ್ಕೈತ್ತಾಯ ದೈವಸ್ಥಾನದ ಪರಿಚಾಲಕ ಶಂಕರ ಯಾನೆ ಕೋಚ ಪೂಜಾರಿ ಅವರ ವಿದ್ಯಾರ್ಥಿ ವೇತನ ಜಿನರಾಜ್ ಪೂಜಾರಿ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಉಳಿಪಾಡಿ ಗುತ್ತು ರಾಜೇಶ್ ನಾಕ್, ಜಿ.ಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಜಿ,ಪಂ ಸದಸ್ಯ ಸಂತೋಷ್ ಕುಮಾರ್ರೈ, ತಾ. ಪಂ ಅಧ್ಯಕ್ಷ ಯಶವಂತ ಡಿ. ದೇರಾಜೆ,ಟೋಲ್ಗೇಟ್ ಉಧುಮಿ ಗೋಪಾಲ ಕೃಷ್ಣ ಮೇಲಾಂಟ, ರವೀಂದ್ರ ಶೆಟ್ಟಿ ಪುಣ್ಕೆಮಜಲು, ಶ್ರೀಕಾಂತ್ ಶೆಟ್ಟಿ, ಪುರುಷೋತ್ತಮ ಗಟ್ಟಿ, ಜಿತೇಂದ್ರ ಸಾಲಿಯಾನ್, ನವೀನ್ ಅಂಚನ್ ಪೆಲತ್ತಕಟ್ಟೆ, ಸಂಜೀವ ಪೂಜಾರಿ ವಿಶ್ವನಾಥ ಪೂಜಾರಿ, ಗಿರೀಶ್ ಪೂಜಾರಿ, ನೇಮಿರಾಜ ಶೇಟ್ಟಿ,ರೂಪೇಶ್ ಆಚಾರ್ಯ ,ವಿಶ್ವನಾಥ ಕೂಡೂರು,ಸುರೇಶ್ ಪೂಜಾರಿ, ಶಂಕರ ಆಳ್ವ,ಚೇತನ್ ಅರಸ, ಭುಜಂಗ ಸಾಲಿಯಾನ್ ಮತ್ತಿತರರು ಭಾಗವಹಿಸಲಿದ್ದಾರೆ.
ರಾತ್ರಿ 9.30ರಂದ ವಿಧಾತ್ರೀ ಕಲಾವಿದರು ಕೈಕಂಬ ಕುಡ್ಲ ಇವರಂದ ತುಳು ಹಾಸ್ಯಮಯ ನಾಟಕ “ಕಾಸ್ ಬೋಡಾ ” ಎಂಬ ತುಳು ನಾಟಕ ನಡೆಯಲಿದೆ. ಎಂದು ನೇತಾಜಿ ಯುವಕ ಸಂಘದ ಪ್ರಕಟನೆ ತಿಳಿಸಿದೆ.
