.ಕಡಿಮೆ ಅಂಕ ಪಡೆದರೂ ಮಕ್ಕಳನ್ನು ಮಕ್ಕಳಾಗಿಯೇ ಸ್ವೀಕರಿಸಿ
ಮಕ್ಕಳು ಪರೀಕ್ಷೆಯಲ್ಲಿ ಪಾಸಾದರೆ ದೈವದೇವರಿಗೆ ನಾನಾ ರೂಪದಲ್ಲಿ ಹರಕೆ ಸಲ್ಲಿಸುವ ಕಾಲವೊಂದಿತ್ತು. ಈಗಲೂ ಕೆಲವೆಡೆ ಇದೆ. ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಪಲಿತಾಂಶದ ನಂತರದ ಒಂದು ದಿನ ಶ್ರೀ ಕ್ಷೇತ್ರ ಪನೋಲಿಬೈಲಿನಲ್ಲಿ ದಾಖಲೆಯ ಸಂಖ್ಯೆಯಲ್ಲಿ ಅಗೇಲು ಸೇವೆ ನಡೆದಿತ್ತು. ಕಾರಣ ಕೇಳಿದರೆ ತಮ್ಮ ಮಕ್ಕಳು ಎಸ್.ಎಸ್.ಎಲ್.ಸಿಯಲ್ಲಿ ಪಾಸಾದರೆ ಅಗೇಲು ಸೇವೆ ಸಲ್ಲಿಸುವುದಾಗಿ ಬಹಳಷ್ಟು ಪೋಷಕರು ಅಲ್ಲಿಗೆ ಹರಕೆ ಹೇಳಿದ್ದರು ಎಂಬ ಮಾತು ಕೇಳಿ ಬರುತ್ತಿತ್ತು. ಹೀಗೆ ಮಕ್ಕಳ ಹೆಸರಿನಲ್ಲಿ, ಪರೀಕ್ಷೆ-ಪಲಿತಾಂಶದ ನೆಪದಲ್ಲಿಯೂ ದೊಡ್ಡವರು ದೈವದೇವರಿಗೆ ಲಂಚ ಕೊಡಲು ಮುಂದಾಗಿರುವ ದಡ್ಡತನಕ್ಕೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ.

images (4)
ಮಕ್ಕಳು ಓದಲು, ಪರೀಕ್ಷೆ ಬರೆಯಲು, ಪಾಸಾಗಲು ಪೂರಕ ವಾತಾವರಣ ಕಲ್ಪಿಸಬೇಕಾದ ಪೋಷಕರೇ ಅದನ್ನೆಲ್ಲಾ ಬದಿಗಿಟ್ಟು ದೈವದೇವರಿಗೆ ಹರಕೆ ಹೇಳುತ್ತಾ ಪರೀಕ್ಷೆಯನ್ನು ಮಕ್ಕಳ ಎದುರಲ್ಲಿ ಮತ್ತಷ್ಟು ರಾಕ್ಷಸನಾಗಿ ಚಿತ್ರಿಸಿದರೆ ಪಾಪ ಮಕ್ಕಳ ಪಾಡೇನು? ಮಕ್ಕಳು ಓದದಿದ್ದರೂ, ಬರೆಯದಿದ್ದರೂ ಸರಿ ದೈವದೇವರು ಮಕ್ಕಳನ್ನು ಉತ್ತೀರ್ಣ ಮಾಡುತ್ತಾರೆ ಎಂಬ ಭ್ರಮೆಯನ್ನು ಮಕ್ಕಳಲ್ಲಿ ಹುಟ್ಟಿಸಿದರೆ ಮಕ್ಕಳಲ್ಲಿ ವೈಚಾರಿಕ -ವೈಜ್ನಾನಿಕ ಭಾವನೆ ಬೆಳೆಯುವುದಾದರೂ ಹೇಗೆ?
ಮಕ್ಕಳ ಹೆಸರಿನಲ್ಲಿ ನಡೆಯುವ ಈ ಲಂಚಾವಾತಾರ ಇಷ್ಟಕ್ಕೆ ಮುಗಿಯುವುದಿಲ್ಲ. ಮೊನ್ನೆ ಒಂದೆಡೆ ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಸಂದರ್ಭ ಪರೀಕ್ಷಾ ಪಲಿತಾಂಶದ ಬಗ್ಗೆ ಮಕ್ಕಳಿಂದ ವ್ಯಕ್ತವಾದ ಭಾವನೆಗಳು ನಿಜಕ್ಕೂ ಮನ ಕರಗುವಂತದ್ದು. ಅಲ್ಲಿದ್ದ ಮಕ್ಕಳ ಪೈಕಿ ಬಹುತೇಕ ಮಂದಿಗೆ ಪಲಿತಾಂಶದ ದಿನವೆಂದರೆ ಅದೊಂದು ಕರಾಳದ ದಿನ, ಮಕ್ಕಳ ಪಾಲಿಗೆ ಘೋರ ದುರಂತವೊಂದು ಎದುರಾಗುವ ದಿನ. ಕೆಲವು ಮಕ್ಕಳಿಗಷ್ಟೇ ಪಲಿತಾಂಶದ ದಿನವೆಂದರೆ ಅದೊಂದು ಹಬ್ಬ, ಸಂಭ್ರಮ. ಒಂದೇ ದಿನ ಕೆಲವು ಮಕ್ಕಳಿಗೆ ಹಬ್ಬ, ಮತ್ತೆ ಕೆಲವು ಮಕ್ಕಳಿಗೆ ಕಗ್ಗತ್ತಲ ದಿನ. ಯಾಕೆ ಹೀಗೆ? ಮಕ್ಕಳಿಗೆ ಹಬ್ಬವೋ ತಾವು ಹೆಚ್ಚು ಅಂಕ ಪಡೆಯುತ್ತೇವೆ ಎಂಬ ಕಾರಣಕ್ಕಲ್ಲ, ಬದಲಾಗಿ ಹೆಚ್ಚು ಅಂಕ ಪಡೆದರೆ ಮಾತ್ರ ಪೋಷಕರು ನಮಗೆ ನೀಡಿದ ಭರವಸೆಯನ್ನು ಈಡೇರಿಸುತ್ತಾರೆ ಎಂಬ ಕಾರಣಕ್ಕಾಗಿ. ಅದೇ ನಾವು ಕಡಿಮೆ ಅಂಕ ಪಡೆದರೆ, ಪೈಲ್ ಆದರೆ ತಮಗೇನೂ ಪೋಷಕರು ಕೊಡುವುದಿಲ್ಲ, ಅಲ್ಲದೇ ಬೈಯುತ್ತಾರೆ, ಹೊಡೆಯುತ್ತಾರೆ ಎಂಬ ಕಾರಣಕ್ಕಾಗಿ ಕೆಲವು ಮಕ್ಕಳಿಗೆ ಪರೀಕ್ಷಾ ಪಲಿತಾಂಶವೆಂದರೆ ಕೆಟ್ಟ ದಿನ. ಅಂದರೆ ಅಲ್ಲಿದ್ದ ಬಹುತೇಕ ಮಕ್ಕಳಿಗೆ ಪರೀಕ್ಷೆಯ ಪಾಸ್, ಪೈಲ್, ಕಡಿಮೆ, ಹೆಚ್ಚು ಅಂಕ..ಇದ್ಯಾವುದೂ ಮುಖ್ಯವಲ್ಲ. ಬದಲಾಗಿ ಪೋಷಕರ ನಿರೀಕ್ಷೆ, ಅಮಿಷ, ಸವಾಲಿನ ಭಯವಷ್ಟೇ. ಹೆಚ್ಚು ಪಡೆದರೆ ನಮಗೇನೋ ಸಿಗುತ್ತದೆ, ಕಡಿಮೆ ಪಡೆದರೆ ಏನು ಸಿಗಲ್ಲ ಎಂಬ ಕಾರಣಗಳಿಗಾಗಿಯೇ ಪಲಿತಾಂಶವೆಂದರೆ ಮಕ್ಕಳ ಪಾಲಿಗೆ ಅದೇನೋ ತಳಮಲ, ಎದೆಯಲ್ಲಿ ಬಡಬಡ.
ಅಂದರೆ ಇಲ್ಲಿ ಮಕ್ಕಳು ಅವರಿಗೋಷ್ಕರ ಓದುವುದಲ್ಲ, ಪರೀಕ್ಷೆಗೂ ಬರೆಯುವುದಲ್ಲ. ಬದಲಾಗಿ ಪೋಷಕರ ಒತ್ತಾಯಕ್ಕಾಗಿ, ಒತ್ತಡಕ್ಕಾಗಿ, ಪ್ರತಿಷ್ಠೆಗಾಗಿ, ಇಲ್ಲವೇ ಶಿಕ್ಷಕರ ಸ್ವಾಭಿಮಾನಕ್ಕಾಗಿ, ಶಾಲೆಗಳ ಪ್ರಸಿದ್ದಿಗಾಗಿ. ಇವೆಲ್ಲವನ್ನೂ ಸಾಧಿಸಲು ಎಳೆ ಕಂದಮ್ಮಗಳು ಪರೀಕ್ಷೆ ಎಂಬ ನೆಪದಲ್ಲಿ ಇತ್ತ ಮನೆಯಲ್ಲಿಯೂ, ಅತ್ತ ಶಾಲೆಯಲ್ಲಿಯೂ ಬಲಿಪಶುಗಳು. ಇದರ ಬದಲಾಗಿ ಮಕ್ಕಳು ಮಕ್ಕಳಿಗೋಸ್ಕರವೇ ಬರೆಯುವ, ಪಾಸಾಗುವ, ಅಧಿಕ ಅಂಕ ಪಡೆಯುವ ಉದ್ದೇಶದೊಂದಿಗೆ ಪರೀಕ್ಷೆ ಎಂಬುದು ಪ್ರೀತಿಯ, ಆಕರ್ಷಣೆಯ ಪ್ರಕ್ರಿಯೆಯಾಗುವುದು ಇಂದಿನ ಅಗತ್ಯ.
ಪರೀಕ್ಷೆ ಎನ್ನುವುದು ಶಿಕ್ಷಣದ ಒಂದು ಭಾಗವಷ್ಟೇ, ಅದೇ ಭವಿಷ್ಯವಲ್ಲ. ಪರೀಕ್ಷೆಯಲ್ಲಿ ಪೈಲೋ, ಕಡಿಮೆ ಅಂಕವೋ ಎಂಬ ಮಾತ್ರಕ್ಕೆ ಯಾವ ಮಗುವೂ ಬದುಕಿನಲ್ಲಿ, ಭವಿಷ್ಯದಲ್ಲಿ ಕಡಿಮೆಯಾಗಬೇಕಿಲ್ಲ. ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಎಲ್ಲರೂ ಬದುಕಿನಲ್ಲಿ ಯಶಸ್ವಿಯಾಗಬೇಕೆಂದಿಲ್ಲ ಎಂಬ ವಾಸ್ತವತೆಯನ್ನು ಅರಿತು ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವಂತಾದಾಗ ಮಾತ್ರ ಪಲಿತಾಂಶದ ನಂತರ ನಡೆಯವ ಆತ್ಮಹತ್ಯೆ ಎಂಬ ಘೋರ ದುರಂತವನ್ನು ತಪ್ಪಿಸಬಹುದೇನೋ?
ಹೌದು. ಕೆಲವರು ಮಕ್ಕಳು ಪಾಸ್ ಆಗುವುದಕ್ಕಾಗಿ, ಗ್ರೇಡ್-ರ್ಯಾಂಕ್ ಪಡೆಯವುದಕ್ಕಾಗಿ ದೇವರಿಗೆ ಹರಕೆ ಹೇಳಿದರೆ ಇನ್ನು ಕೆಲವು ಪೋಷಕರು ಮಕ್ಕಳಿಗೆ ನಾನಾ ರೂಪದ ಆಸೆ,ಅಮಿಷವನ್ನು ಒಡ್ಡುತ್ತಿರುವದು ಮತ್ತೊಂದು ದುರಂತ. ನೀನು ಎಲ್ಲಾ ವಿಷಯಗಳಲ್ಲಿ ನೂರರಲ್ಲಿ ನೂರು ಮಾಕರ್್ ತೆಗೆದರೆ ಮಾತ್ರ ನಿನಗೆ ಸೈಕಲ್, ಪಾಸಾದರೆ ಮಾತ್ರ ಕ್ಯಾರಂಬೋಡರ್ು, ಪಸ್ಟ್ ಕ್ಲಾಸ್ ಬಂದರೆ ಪಿಕ್ನಿಕ್ಗೆ ಹೋಗುವುದು, ರ್ಯಾಂಕ್ ಬಂದರೆ ಹೊಸ ಡ್ರೆಸ್, ದೊಡ್ಡ ಸಾಧನೆ ಮಾಡಿದರೆ ದೊಡ್ಡ ಗಿಫ್ಟ್ …..ಹೀಗೆ ಪೋಷಕರು ಮಕ್ಕಳಿಗೆ ನೀಡುವ ಅಮಿಷಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನೀನು ಇದನ್ನು ಮಾಡಿದರೆ ಮಾತ್ರ ನಾನು ಅದನ್ನು ಕೊಡುತ್ತೇನೆ ಎಂಬ ಹೆತ್ತವರು ಮತ್ತು ಮಕ್ಕಳ ನಡುವಿನ ಕೊಡು ಕೊಳ್ಳುವಿಕೆಯ ವ್ಯಾಪಾರ ಸಾರ್ವಜನಿಕ ವಲಯದಲ್ಲಿ ನಡೆಯುವ ಲಂಚಾವಾತಾರ, ಭ್ರಷ್ಟಚಾರದಷ್ಟೇ ಕೆಟ್ಟದ್ದು. ಈ ರೀತಿಯ ಸಂಸ್ಕೃತಿ ಮಕ್ಕಳ ಮುಂದಿನ ಬದುಕಿನ ಮೇಲೆ ಮಾರಕ ಪರಿಣಾಮ ಬೀರುವುದಲ್ಲದೆ ಅಮಿಷ, ಆಸೆಗೆ ಒಳಗಾಗಿ ಕಲಿಯುವ ಶಿಕ್ಷಣ ಯಾವತ್ತೂ ಸಹಜ ಕಲಿಕೆಯಲ್ಲ, ಮಗುವಿಗೆ ಆಸಕ್ತಿದಾಯಕವೂ ಅಲ್ಲ. ಸಹಜತೆ, ಆಸಕ್ತಿ ಇಲ್ಲದ ಕಲಿಕೆಯಿಂದ ಯಾವ ಮಗುವೂ ಏನನ್ನೂ ಸಾಧಿಸಿದಂತಾಗುವುದಿಲ್ಲ.
ಪೋಷಕರ ಈ ಲಂಚಾವತಾರ ದೊಡ್ಡ ಮಕ್ಕಳಿಗಷ್ಟೇ ಸೀಮಿತವಾಗಿಲ್ಲ, ಅದು ಎರಡು-ಮೂರನೇ ತರಗತಿಯ ಮಕ್ಕಳವರೆಗೂ ತಲುಪಿದೆ. ಪೋಷಕರ ನಿರೀಕ್ಷೆಗಿಂತ ಕಡಿಮೆ ಅಂಕ ತೆಗೆದ ಎಳೆ ಮಕ್ಕಳು ಪಲಿತಾಂಶದ ದಿನ ಪೆಚ್ಚು ಮೋರೆ ಹಾಕಿಕೊಂಡು ಮನೆಯೊಳಗೆ ಕಾಲಿಡುವ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುತ್ತದೆ. ಎರಡನೇ ತರಗತಿಯಲ್ಲಿ ಪಾಸಾದ ಮಗುವೊಂದು ಪೋಷಕರ ನಿರೀಕ್ಷೆಯಂತೆ 500 ಅಂಕದ ಬದಲು 475 ಅಂಕ ಪಡೆದು ತನ್ನ ಅತೀ ಆಸೆಯ ಆಟದ ಸಾಮಾಗ್ರಿಯೊಂದನ್ನು ಪಡೆಯುವ ಅವಕಾಶದಿಂದ ವಂಚಿತವಾಗಿದೆ. ಇದಕ್ಕಾಗಿ ಮಗು ತಂದೆ ತಾಯಿಯನ್ನು ಬೇಡುತ್ತಿದ್ದ ಕಾಡುತ್ತಿದ್ದ ದೃಶ್ಯ ನನ್ನ ಮನಃಪಟಲದಲ್ಲಿನ್ನೂ ಶಾಶ್ವತವಾಗಿದೆ. 25 ಅಂಕ ಕಡಿಮೆ ಪಡೆದಿದೆ ಎಂಬ ಕಾರಣಕ್ಕಾಗಿ ಮಗುವಿಗೆ ತಾವೇ ಆಸೆ ಹುಟ್ಟಿಸಿದ್ದ ಆಟದ ಸಾಮಾಗ್ರಿಯನ್ನು ಪಡೆಯುವ ಭಾಗ್ಯವಿಲ್ಲ. ಅಷ್ಟಾದರೆ ಪರವಾಗಿಲ್ಲ. ಮಾಕರ್್ ಕಡಿಮೆ ತೆಗೆದ ಕಾರಣಕ್ಕೆ ನಿತ್ಯ ಹೀಯಾಳಿಕೆ, ಟೀಕೆ, ಎಲ್ಲರ ಎದುರು ಅವಮಾನಿಸುವಿಕೆ, ಇತರ ಮಕ್ಕಳೊಡನೆ ಹೋಲಿಸುವಿಕೆ, ಏನಾದರೂ ಕೊಡುವಾಗಲೂ ಅವನಿಗೆ ಕಡಿಮೆ ಕೊಡಿ ಅವನು ಕಡಿಮೆ ಮಾಕರ್್ ತೆಗೆದಿದ್ದಾನೆ ಎಂಬ ನಿರ್ಲಕ್ಷ್ಯತನ…..ಮತ್ತೆ ಸ್ವಲ್ಪ ಮುಂದುವರಿದರೆ ಹೊಡೆತ, ಬಡಿತ ಕೂಡ. ಇದರಿಂದ ಎಳೆಮನಸ್ಸು ಅನುಭವಿಸುವ ಮಾನಸಿಕ, ದೈಹಿಕ ಯಾತನೆ ಎಷ್ಟೋ?. ಇದು ಒಂದೆರೆಡು ಮನೆಯ ಕತೆಯಲ್ಲ. ಬಹುತೇಕ ಮನೆಯಲ್ಲಿ ನಡೆಯುವಂತದ್ದೇ.
ಹಾಗೆಂದು 475 ಅಂಕವೇನೂ ಕಡಿಮೆಯಲ್ಲ. ಅದನ್ನೂ ಕಡಿಮೆ ಎಂದೂ ಪರಿಗಣಿಸುವ ಪೋಷಕರಾದರೂ ಅವರ ಕಾಲದಲ್ಲಿ ಅದರ ಅಷ್ಟಾದರೂ ಅಂಕ ಪಡೆದಿದ್ದಾರೋ ಗೊತ್ತಿಲ್ಲ. ಆದರೂ ತಮ್ಮ ಮಕ್ಕಳು ಮಾತ್ರ ಅತೀ ಹೆಚ್ಚು ಪಡೆಯಬೇಕೆಂಬ ಹುಚ್ಚು ಬಯಕೆ, ಅಂಕದಿಂದಲೇ ಮಕ್ಕಳ ಭವ್ಯ ಭವಿಷ್ಯ ಎಂಬ ಕೆಟ್ಟ ಯೋಚನೆ. ಇದಕ್ಕಾಗಿ ಮಕ್ಕಳಿಗೆ ನಿತ್ಯ ನರಕಯಾತೆನೆ, ವೇದನೆ.
ಪೋಷಕರೇ..ಅಂಕ ಹೆಚ್ಚು ಪಡೆದ ಮಗು ಶ್ರೇಷ್ಠ, ಕಡಿಮೆ ಪಡೆದ ಮಗು ಕನಿಷ್ಠ ಎಂಬ ಧೋರಣೆ ಸರ್ವತ್ರ ಸರಿಯಲ್ಲ. ಅಂಕವೊಂದೇ ಮಗುವಿನ ಶ್ರೇಷ್ಠತೆಯ ಮಾನದಂಡವಲ್ಲ. ಅಂಕವೂ ಒಂದು ಭಾಗವಷ್ಟೇ ವಿನಃ ಅದೇ ಸರ್ವಸ್ವವಲ್ಲ. ಹೆಚ್ಚು ಅಂಕ ಪಡೆದ ಎಲ್ಲರೂ ಬದುಕಿನಲ್ಲಿ ಹೆಚ್ಚು ಸಾಧಿಸಿಲ್ಲ, ಕಡಿಮೆ ಅಂಕ ಪಡೆದ ಎಲ್ಲರೂ ಬದುಕಿನಲ್ಲಿ ಸೋತಿಲ್ಲ. ವಿದ್ಯಾಥರ್ಿ ಜೀವನದ ಅಂಕಗಳು ಮುಂದಿನ ತರಗತಿಗೆ ತೇರ್ಗಡೆ, ಇಲ್ಲವೇ ಉದ್ಯೋಗ ಪಡೆಯಲು ಕೆಲವೊಮ್ಮೆ ಪೂರಕವಾಗಬಹುದೇ ವಿನಃ ಬದುಕನ್ನು ಎದುರಿಸಲು ಅವೆಂದೂ ಸಹಕಾರಿಯಾಗುವುದಿಲ್ಲ. ಹೆಚ್ಚು ಓದಿ ಹೆಚ್ಚು ಅಂಕ ಪಡೆದು ಯಾವುದೇ ಶಬ್ಧವಿಲ್ಲದೇ ಮಂಕು ಕವಿದಂತಾಗಿ ಮೌನಿಯಾಗಿ, ನಿಜರ್ೀವಿಯಂತಿರುವ ಮಕ್ಕಳಿಗಿಂತ ಕಡಿಮೆ ಓದಿದರೂ ಕಡಿಮೆ ಅಂಕ ಪಡೆದರೂ ಸದಾ ಲವಲವಿಕೆಯಿಂದ ಕ್ರಿಯಾಶೀಲವಾಗಿರುವ ಮಕ್ಕಳೇ ಮನೆಯ, ಶಾಲೆಯ, ಸಮಾಜದ ನಿಜವಾದ ಸಂಪತ್ತು.
ಅಮಿಷ ಹುಟ್ಟಿಸಿ ಮಗುವಿನ ಕ್ರಿಯಾಶೀಲತೆ, ಸೃಜನಾಶೀಲತೆಯನ್ನು ಕೊಲ್ಲದಿರಿ. ಮಗು ಹೇಗೆಯೇ ಇರಲಿ. ಎಷ್ಟೇ ಅಂಕಗಳನ್ನು ಪಡೆಯಲಿ. ಏನೇ ಆಗಲಿ. ಮಕ್ಕಳನ್ನು ಮಕ್ಕಳ ಹಾಗೆ ಸ್ವೀಕರಿಸಿರಿ. ಅದೇ ನಿಮ್ಮ ದೊಡ್ಡತನ, ಇಲ್ಲದಿದ್ದರೆ ದೊಡ್ಡವರೆನಿಸಿಕೊಂಡವರ ದಡ್ಡತನವೇ ಮಕ್ಕಳನ್ನು ಹೆಡ್ಡರನ್ನಾಗಿಸಿತು, ಬದುಕಿಗೆ ಮುಳುವಾದೀತು ಜೋಕೆ……

ಗೋಪಾಲ ಅಂಚನ್

By suddi9

Leave a Reply

Your email address will not be published. Required fields are marked *