ಪೂಂಜಾಲ್ ಕಟ್ಟೆ : ನಮ್ಮಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ 1ಕೋಟಿ 21ಲಕ್ಷ ವೆಚ್ಚದ ಉಳಿ ಗ್ರಾಮದ ಹೆಗ್ಗಣಗುಳಿ-ಕಕ್ಯಪದವು ರಸ್ತೆ ಕಾಮಗಾರಿಗೆ ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.

ತಾ.ಪಂ.ಸದಸ್ಯ ಪದ್ಮಶೇಖರ ಜೈನ್ , ಸಂಪತ್ಕುಮಾರ್ ಶೆಟ್ಟಿ , ಎಫ್ರೆಂ ಸಿಕ್ವೇರಾ ,ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ , ಮಂಗಳೂರು ಯೋಜನಾ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯಾನಂದ ಪೂಜಾರಿ , ಸಹಾಯಕ ಇಂಜಿನಿಯರ್ ಸೂರ್ಯನಾರಾಯಣ ,ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಶಿವಪ್ರಸನ್ನ , ಭೂ ಬ್ಯಾಂಕ್ ನಿರ್ದೇಶಕ ಶಿವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
