ಬಂಟ್ವಾಳ:ನರಿಕೊಂಬು ವೀರಮಾರುತಿ ಮಹಿಳಾ ಮಂಡಳಿ ಇದರ 2015-16ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ದೇವಕಿ.ಕೆ ಮತ್ತು ಉಪಾಧ್ಯಕ್ಷೆಯಾಗಿ ಸಾವಿತ್ರಿ ಕೆ ಆಯ್ಕೆಯಾಗಿದ್ದಾರೆ.

ಇದರ ವಾರ್ಷಿಕ ಮಹಾಸಭೆಯು ಶ್ರೀಮತಿ ಗೀತಾ ಚಂದ್ರಹಾಸ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ 2014-15ನೇ ಸಾಲಿನ ಲೆಕ್ಕಪತ್ರವನ್ನು ಹಾಗೂ ಚಟುವಟಿಕೆ ವರದಿಯನ್ನು ಕಾರ್ಯದರ್ಶಿಯಾದ ಕುಮಾರಿ ಸಂಧ್ಯಾ ಮಂಡಿಸಿದರು.
ಕಾರ್ಯದರ್ಶಿಯಾಗಿ ಪ್ರೇಮ ವಿ, ಜೊತೆ ಕಾರ್ಯದರ್ಶಿಯಾಗಿ ಅನಿತಾ ಕೆ, ಕೋಶಾಧಿಕಾರಿಯಾಗಿ ಶುಭ ಶಶಿಧರ್, ಕ್ರೀಡಾಕಾರ್ಯದರ್ಶಿಯಾಗಿ ಸರಿತಾ, ಜೊತೆ ಕ್ರೀಡಕಾರ್ಯದರ್ಶಿಯಾಗಿ ಬಬಿತಾ, ಸಂಘಟನಾ ಕಾರ್ಯದರ್ಶಿಯಾಗಿ ವೇದಾವತಿ, ಭಜನಾ ಸಂಘಟನಾ ಕಾರ್ಯದರ್ಶಿಯಾಗಿ ಸಂಧ್ಯಾ ಹಾಗೂ ಕವಿತಾ ಕೆ ರವರು ಸರ್ವಾನುಮತದಿಂದ ಆಯ್ಕೆಗೊಂಡರು. ಅಲ್ಲದೆ 9 ಸದಸ್ಯೆಯರ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
