ಕಾರ್ಕಳ: ಬುಧವಾರ ಬೆಳಿಗ್ಗೆ ಕುಂಟಾಡಿ ಅಶೋಕ್ನಗರದಲ್ಲಿ ಮತ್ತಷ್ಟು ಪ್ರಮಾಣದ ಸ್ಫೋಟಕ ಕಚ್ಚವಸ್ತುವನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಬಿಜು ಥೋಮಸ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬುಧವಾರ ಬೆಳಿಗ್ಗೆ 11ರ ವೇಳೆಗೆ ಬಿಜು ಥೋಮಸ್ ಅಧೀನದಲ್ಲಿರುವ ಕುಂಟಾಡಿ ಅಶೋಕ್ನಗರದ ತೋಟವೊಂದಕ್ಕೆ ದಾಳಿ ನಡೆಸಿದ್ದಾರೆ. ಅಗಾಧ ಪ್ರಮಾಣದಲ್ಲಿ ಅಕ್ರಮವಾಗಿ ಶೇಖರಿಸಿಟ್ಟ ಸ್ಫೋಟಕ ಕಚ್ಚಾವಸ್ತುಗಳನ್ನು ಪತ್ತೆ ಹಚ್ಚಿ ವಶಪಡಿಸಲು ಪೊಲೀಸರು ಯಶಸ್ಸು ಆಗಿದ್ದಾರೆ. 500 ಜಿಲಿಟಿನ್ ಸ್ಟಿಕ್, 700 ಎಲೋಕ್ಟ್ರೋನಿಕ್ಸ್ ಡಿಟನೇಟರ್, ಸನ್ 90 ಎಕ್ಸ್ಕ್ಲೂಸ್ -500, ಸೇಫ್ಟಿ ಫ್ಯೂಸ್ 3 ಬಾಕ್ಸ್, ಅಮೋನಿಯಂ ನೈಟ್ರೇಟ್ 350 ಚೀಲ-175 ಕ್ವಿಂಟಾಲ್ನ್ನು ಘಟನಾ ಸ್ಥಳದಲ್ಲಿ ಪೊಲೀಸರು ವಶಪಡಿಸಿದ್ದಾರೆ.
