ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ `ಆಳ್ವಾಸ್ ಚಕ್ರವ್ಯೂಹ 2015’ರ ಎರಡನೇ ದಿನವಾದ ಭಾನುವಾರ ಹಳೆ ನೆನಪು, ಹೊಸ ದುಬಾರಿ ಹೊಳಪಿನ ಬೈಕ್, ಕಾರುಗಳ ಪ್ರದರ್ಶನ ಹಾಗೂ ಮೈನವಿರೇಳಿಸುವ ಸಾಹಸ ಪ್ರದರ್ಶನಗಳು ನಡೆಯಿತು.
ಚಕ್ರವ್ಯೂಹದ ವಿಶೇಷ ಆಕರ್ಷನೆಯಾದ 3ನೇ ವರ್ಷದ ಮೊಟೊರಿಗ್ -3 ಭಾನುವಾರ ಬೆಳಿಗ್ಗೆ ಉದ್ಘಾಟಿಸಲಾಯಿತು. ವಾಹನ ಪ್ರರ್ದಶನದಲ್ಲಿ ತುಂಬಾ ಹಳೆಯ ಮತ್ತು ನವ ನವೀನ ಮಾದರಿಯ ದ್ವಿಚಕ್ರ ಮತ್ತು ಕಾರುಗಳ ಪ್ರರ್ದಶನ ಏರ್ಪಡಿಸಾಲಾಗಿತ್ತು. ಈ ಪ್ರದರ್ಶನದಲ್ಲಿ ಸುಮಾರು 100 ಕ್ಕೂ ಅಧಿಕ ವಾಹನಗಳು ಪ್ರದರ್ಶನಗೊಂಡವು. ಹಳೆಮಾದರಿಯ, ನವನವೀನ ಮಾದರಿಯ ಅತ್ಯುತ್ತಮ ಶ್ರೇಣಿಯ ಕಾರುಗಳು ,ಅತ್ತ್ಯುತ್ತಮ ಶ್ರೇಣಿಯ ವಿವಿಧ ದ್ವಿಚಕ್ರ ವಾಹನಗಳು ,ವಿಂಡೆಜ್ ಕಾರುಗಳು, ಹಾಗೂ ಸ್ವವಿನ್ಯಾಸದ(ಕಸ್ಟಮೈಸ್ಡ) ವಾಹನಗಳು ಹಾಗೂ ಫೋರ್ಮುಲ ನಂ. 1 ಕಾರುಗಳು ಬಂದಿದ್ದವು. ಆಟೊಮೊಭೈಲ್ ರಸ ಪ್ರಶ್ನೆಯನ್ನು ಏರ್ಪಡಿಸಲಾಗಿತ್ತು. ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ವಿಶೇಷವಾಗಿ ವೃತ್ತಿಪರ ಸಾಪ್ಟವೇರ್ ತಂತ್ರಜÐರಿಗೊಸ್ಕರ `ಸಿ-ಕೋಡಿಗ್’ ಸ್ಪರ್ಧೆಯನ್ನು ಎರ್ಪಡಿಸಿಲಾಗಿತ್ತು. ವಿವಿಧ ಕಂಪನಿಯಲ್ಲಿ ಕೆಲಸದಲ್ಲಿರುವ ವೃತ್ತಿಪರರು ಪಾಲ್ಗೊಂಡರು.
ಇನ್- ಫೇಮಸ್ ಹಾಸ್ಯಾಗೋಷ್ಠಿ ಏರ್ಪಡಿಸಿದ್ದು ಅದರಲ್ಲಿ ರಾಜ್ಯದ ಹೆಸಾರಾಂತ ಹಾಸ್ಯಾ ಕಲಾವಿದರಾದ ಶ್ರೀ ಕೊಟ್ಟ್ರಶ್ ಪ್ರೇಕóಕರನ್ನು ರಂಜಿಸಿದರು. ಆಹಾರೋತ್ಸವದಲ್ಲಿ ಹ್ಯಾಗತೋನ್ -ತಿನ್ನುವ ಸ್ಪರ್ರ್ಧೆ ಏರ್ಪಡಿಸಲಾಗಿತ್ತು.

ಚಕ್ರವ್ಯೂಹದಲ್ಲಿ ಸಾಂಪ್ರದಾಯಿಕ ಸ್ಫರ್ದೆಗಳಾದ ನಾಟಕ ಪ್ರಕಾರ(ಏಕಪಾತ್ರಾಭಿನಯ, ಮನಸಲ್ಲಿ ಪದಗಳ ಊಹನೆ), ಸಾಹಿತ್ಯಿಕ ಪ್ರಕಾರ(ಉಚ್ಚಾರಣೆ ಸ್ಪರ್ಧೆ, ಸೃಜನಾತ್ಮಕ ಬರಹ,ಚಿತ್ರ ವಿವರಣೆ,), ನೃತ್ಯ ಪ್ರಕಾರ(ಬೀದಿನಾಟಕ, ಯುಗಳಗೀತೆ) , ಹಾಡುಪ್ರಕಾರ( ಯುಗಳಗೀತೆ), ವರ್ಣಚಿತ್ರಪ್ರಕಾರ(ಸ್ಥಳದಲ್ಲಿ ಚಿತ್ರ ರಚನೆ, ಫೆಸ್ ಪೈಂಟಿಂಗ್), ಅನೌಪಚಾರಿಕ ಪ್ರಕಾರ( ಕಿರಿಯ ವರದಿಗಾರ, ಬೆಂಕಿಇಲ್ಲದೆ ಆಹಾರ ತಯಾರಿ), ಸಾಮಾನ್ಯ ರಸ ಪ್ರಶ್ನೆ, ಸುಡೂಕು, ಪಧಬಂಧ, ಕಂಪ್ಯೂಟರ್ ಪ್ರಕಾರ ಆಟಗಳು, ಲೇಸರ್ ಟ್ಯಾಗ್ ,ಸಾಹಸ ಕ್ರೀಡೆಗಳು, ತರಂಗ್(ಬ್ಯಾಟಲ್ ಆಫ್ ಬ್ಯಾಂಡ್) ಮೊದಲಾದ ಸ್ಪರ್ಧೆ ನಡೆಯಿತು.
ಮುಂಬೈಶಂಕರ್ ಟಕ್ಕರ್ ರವರ ಶ್ರುತಿ ಬಾಕ್ಸ್ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಎರ್ಪಡಿಸಲಾಗಿತ್ತು.













