ಬಂಟ್ವಾಳ: ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರದಲ್ಲಿ ಕಳೆದ ಭಾನುವಾರ ವಶಪಡಿಸಿಕೊಂಡ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಬೋಟ್ಗಳಿಗೆ ರೂ 1.68 ಲಕ್ಷ ಹಾಗೂ ಕಡೇಶ್ವಾಲ್ಯ ಮತ್ತು ಬರಿಮಾರ್ನಲ್ಲಿ ವಶಪಡಿಸಿಕೊಂಡ ಅಕ್ರಮ ಮರಳು ದಾಸ್ತಾನಿಗೆ ಒಟ್ಟು ರೂ 45 ಸಾವಿರ ಹೀಗೆ ಒಟ್ಟು ರೂ 2.13ಲಕ್ಷ ದಂಡ ವಿಧಿಸಿರುವುದಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಅಕ್ರಮ ಮರಳು ಸಾಗಾಟದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ, ಸಜಿಪಮುನ್ನೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.
ಅಕ್ರಮ ಮರಳು ದಂಧೆಕೋರರು ತಹಶೀಲ್ದಾರರು ನೀಡಿದ ಎಚ್ಚರಿಕೆಯನ್ನು ತಿರಸ್ಕರಿಸಿ ಅಂದು ರಾತೋರಾತ್ರಿ ದಾಸ್ತಾನು ಇರಿಸಿದ್ದ ಅಕ್ರಮ ಮರಳನ್ನು ಸಾಗಿಸುವಲ್ಲಿ ಯಶಸ್ವಿಯಾಗಿದ್ದರು. ಇದರಿಂದಾಗಿ ಶುಕ್ರವಾರ ರಾತ್ರಿ ಮತ್ತೆ ಮರಳು ಅಡ್ಡೆಗೆ ಗಣಿ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಬೋಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಮರಳು ಸಾಗಾಟ ರಸ್ತೆಗೆ ಲಾರಿ ಪ್ರವೇಶಿಸದಂತೆ ತಡೆಬೇಲಿ ಹಾಕುವಂತೆ ಸಜಿಪಮುನ್ನೂರು ಗ್ರಾಮ ಪಂಚಾಯಿತಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಉಪವಿಭಾಗಾಧಿಕಾರಿ ಡಾ. ಡಿ.ಆರ್.ಅಶೋಕ್, ಎಎಸ್ಪಿ ರಾಹುಲ್ ಕುಮಾರ್ ನಿದರ್ೇಶನದಂತೆ ನಡೆಸಲಾದ ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮೂತರ್ಿ, ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ, ಪಿಎಸ್ಐ ನಂದಕುಮಾರ್, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಗ್ರಾಮಲೆಕ್ಕಾಧಿಕಾರಿ ತೌಸೀಫ್, ರಾಜ್ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.