• ಮೂಡುಬಿದಿರೆ: ಡಾ.ವೀರೇಂದ್ರ ಹೆಗ್ಗಡೆ ಅಭಿನಂದನಾ ಸಮಾರಂಭಕ್ಕೆ ವಿದ್ಯಾಗಿರಿಯ ಆಳ್ವಾಸ್ ಪ್ಯಾಲೇಸ್ ಗ್ರೌಂಡ್ ಸಜ್ಜಾಗಿದೆ.
    ಶನಿವಾರ ಸಂಜೆಯೊಳಗಡೆ ಅಭಿನಂದನಾ ಸಮಾರಂಭ ಪೂರ್ಣಗೊಂಡಿದೆ. ಅವಿಭಜಿತ ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ 500 ಜನ ಗಣ್ಯರು ಬೃಹತ್ ವೇದಿಕೆಯಲ್ಲಿ ಕುಳಿತುಕೊಳ್ಳುವ ಅವಕಾಶ. 200 ಫೀಟ್ ಉದ್ದದ 32 ಫೀಟ್ ಅಗಲದ ಬೃಹತ್ ವೇದಿಕೆ ನಿಮರ್ಾಣವಾಗಿದೆ. ರಾಜ್ಯದ ವಿವಿಧಡೆಗಳಿಂದ ಬರುವ ಖಾವಂದರ ಅಭಿಮಾನಿಗಳಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಸ್ವಸಹಾಯ ಗುಂಪಿನ ಸದಸ್ಯರು, ವಿದ್ಯಾಥರ್ಿಗಳಿಗೆ ಸುಮಾರು 1 ಲಕ್ಷ ಆಸನಗಳನ್ನು ಬೃಹತ್ ವೇದಿಕೆಯ ಮುಂಭಾಗ ಜೋಡಿಸಲಾಗಿದೆ. ವೇದಿಕೆ ಹಾಗೂ ಪ್ಯಾಲೇಸ್ ಗ್ರೌಂಡ್ ಆಳ್ವಾಸ್ನ ಸಾಂಪ್ರಾದಾಯಿಕ ಶೈಲಿಯಲ್ಲಿ ಅಲಂಕಾರಗೊಳ್ಳುತ್ತಿದ್ದು, ಧರ್ಮಸ್ಥಳದ ಅಲಂಕಾರಿಕ ಪರಿಕರಗಳು ಮೈದಾನ ಸೌಂದರ್ಯ ಹೆಚ್ಚಿಸುತ್ತಿದೆ. ಬಟ್ಟೆಯಿಂದ ಮಾಡಲಾದ ತೋರಣ ಮಾದರಿಯ ಧ್ವಾರಗಳು, ಮೈದಾನಕ್ಕೆ ಬರುವಾಗ ಕಾಣಸಿಗುತ್ತದೆ. ಡಾ.ಹೆಗ್ಗಡೆಯವರು ಅಪರೂಪದ ಭಾವಚಿತ್ರಗಳು ಹಾಗೂ ಅವರು ವಿವಿಧ ವಿಚಾರಗಳಿಗೆ ಸಂಬಂಧಿಸಿದ ನುಡಿಮುತ್ತುಗಳನ್ನು `ಪತಾಕೆ’ ಮಾದರಿಯಲ್ಲಿ ಮೈದಾನದ ಅಲ್ಲಲ್ಲಿ ಅಳವಡಿಸಲಾಗಿದೆ.

mbd_april11_7 (2)

  • mbd_april11_7 (7)
    1 ಲಕ್ಷಕ್ಕೂ ಅಧಿಕ ಜನರಿಗೆ ಸಂಜೆ ಉಪಹಾರ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. 3 ಕಡೆ ಆಹಾರದ ತಯಾರಿ, 4 ಕಡೆ ಉಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.
    ಪಾಕರ್ಿಂಗ್ ವ್ಯವಸ್ಥೆ: ಸುಳ್ಯ – ಪುತ್ತೂರು – ಬಿ.ಸಿ.ರೋಡ್ ಕಡೆಯಿಂದ ಬರುವ ಎಲ್ಲಾ ವಾಹನಗಳು ಮೂಡುಬಿದರೆ – ಬಂಟ್ವಾಳ ರಸ್ತೆಯ ಪೇಪರ್ ಮಿಲ್ ಬಳಿಯಲ್ಲಿ ಎಡಕ್ಕೆ ತಿರುಗಿ ಮಾಸ್ತಿಕಟ್ಟೆ ಬಳಿ ಪಾಕರ್ಿಂಗ್ ವ್ಯವಸ್ಥೆಯಿದೆ. ಧರ್ಮಸ್ಥಳ – ಬೆಳ್ತಂಗಡಿ – ವೇಣೂರು ಮತ್ತು ಕಾರ್ಕಳ ಕಡೆಯಿಂದ ಬರುವ ಎಲ್ಲಾ ಬಸ್ಸುಗಳು ಮೂಡುಬಿದರೆ ಸ್ವರಾಜ್ಯ ಮೈದಾನದಲ್ಲಿ ಪಾಕರ್ಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ಸು ಹೊರತು ಪಡಿಸಿ ಇತರ ಎಲ್ಲಾ ವಾಹನಗಳಿಗೆ ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಆವರಣದಲ್ಲಿ ಪಾಕರ್ಿಂಗ್ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು – ಮುಲ್ಕಿ – ಕಿನ್ನಿಗೋಳಿ ಕಡೆಯಿಂದ ಬರುವ ಎಲ್ಲಾ ಬಸ್ಸುಗಳಿಗೆ ಮಾಸ್ತಿಕಟ್ಟೆಯಲ್ಲಿ ಪಾಕರ್ಿಂಗ್ ವ್ಯವಸ್ಥೆ ಹಾಗೂ ಬಸ್ಸು ಹೊರತು ಪಡಿಸಿ ಉಳಿದ ಎಲ್ಲಾ ವಾಹನಗಳಿಗೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿ ಪಾಕರ್ಿಂಗ್ ವ್ಯವಸ್ಥೆಯಿದೆ.
    ಅಭಿನಂದನಾ ಸಮಾರಂಭ:
    ಭಾನುವಾರ ಸಂಜೆ 4.30ಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ
    ಉಡುಪಿ ಪೇಜಾವರ ಶ್ರೀ ಅಧೋಕ್ಷಜ ಮಠ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳ ಸ್ವಾಮೀಜಿ ಹಾಗೂ ಮೂಡುಬಿದರೆ ಜೈನಮಠದಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀವರ್ಚನ ನೀಡಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಅಭಿನಂದನಾ ಭಾಷಣ ಮಾಡಲಿದ್ದಾರೆ.
    ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೈಲಿ, ಸನ್ಮಾನ್ಯ ಸಂಸದರು , ಚಿಕ್ಕಬಳ್ಲಾಪುರ ಕ್ಷೇತ್ರ
    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ, ಸನ್ಮಾನ್ಯ ಮಾಜಿ ಕೇಂದ್ರ ಹಣಕಾಸು ಸಚಿವರು
    ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಯೆನಪೋಯ ವಿ.ವಿ ಕುಲಾಧಿಪತಿ ಅಬ್ದುಲ್ಲ ಕುಂಞ
    ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ , ಆರೋಗ್ಯ ಸಚಿವ ಯು.ಟಿ.ಖಾದರ್, ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮಂಗಳೂರು ನಳಿನ್ ಕುಮಾರ್ ಕಟೀಲ್, ಮಂಗಳೂರು ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲ ರೆ. ಫಾ. ಕ್ಸೇವಿಯರ್ ಗೋಮ್ಸ್, ಎನ್.ವಿನಯ್ ಹೆಗ್ಡೆ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರಕುಮಾರ್, ಆಳ್ವಾಸ್ ಸಂಸ್ಥೆ ಡಾ. ಎಂ.ಮೋಹನ್ ಆಳ್ವ ಮೊದಲಾದವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡದವರಿಂದ ವರ್ಣಮಯ ಶೋಭಾಯಾತ್ರೆ-ವಿದ್ಯಾಗಿರಿಯಿಂದ ವ್ಯವಸ್ಥೆಯಿದೆ.

By Suddi9

Leave a Reply

Your email address will not be published. Required fields are marked *