ಬಂಟ್ವಾಳ: ಜಿಲ್ಲೆಯಲ್ಲಿ ಪೊಲೀಸ್ ಸಿಬಂದಿ ಕೊರತೆ ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಹೊಸ ನೇಮಕಾತಿಯಲ್ಲಿ ಜಿಲ್ಲೆಗೆ ಹೆಚ್ಚಿನ ಸಿಬ್ಬಂದಿ ದೊರಕಿಸಿಕೊಡಲು ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ವಿನಂತಿಸಿಕೊಳ್ಳಲಾಗಿದೆ. ಆ ಮೂಲಕ ಕೋಮು ಸೂಕ್ಷ್ಮ ಜಿಲ್ಲೆ ಹಣೆಪಟ್ಟಿಗೆ ಬದಲಾಗಿ ಸಾಮರಸ್ಯದ ಜಿಲ್ಲೆಯಾಗಿ ಪರಿವರ್ತಿಸಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಶುಕ್ರವಾರ ಬೆಳಿಗ್ಗೆ ಆರಂಭಗೊಂಡ ಟ್ರಾಫಿಕ್ ಪೊಲೀಸ್ ಠಾಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪದೇ ಪದೇ ಪೋಲೀಸ್ ಠಾಣೆಗಳಿಗೆ ಮುತ್ತಿಗೆ ಹಾಕುವ ಪ್ರಕ್ರಿಯೆ ಕೆಟ್ಟ ಸಂಸ್ಕೃತಿಯಾಗಿದ್ದು, ನ್ಯಾಯಕ್ಕಾಗಿ ಹೋರಾಟ ಮಾಡಲು ಸಾಕಷ್ಟು ವಿಧಾನಗಳಿವೆ. ಇದಕ್ಕೆ ಬದಲಾಗಿ ನ್ಯಾಯ ದೊರಕಿಸಿಕೊಡಬೇಕಾದ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸಲ್ಲದು. ಪೊಲೀಸರು ಕೂಡಾ ಎಲ್ಲರೊಂದಿಗೂ ಪರಸ್ಪರ ಸೌಹಾರ್ದತೆ ಮತ್ತು ಜನಸ್ನೇಹಿಯಾಗಿ ವರ್ತಿಸಬೇಕು ಎಂದು ಅವರು ತಿಳಿಸಿದರು.
ಪೊಲೀಸ್ ಸಿಬಂದಿ ಕೊರತೆ ನೀಗಿಸಲು ಕ್ರಮ: ಸಚಿವ ರೈ
ಗ್ರಾಮೀಣ ಪ್ರದೇಶ ಸೇರಿದಂತೆ ನಗರದಲ್ಲಿ ಶಾಶ್ವತ ಕುಡಿಯುವ ನೀರು ಪೂರಕೆ, ಬಿ.ಸಿ.ರೋಡ್ನಲ್ಲಿ ಹೈಟೆಕ್ ಬಸ್ ನಿಲ್ದಾಣ, ತುಂಬೆ ಎರಡನೇ ಅಣೆಕಟ್ಟೆ, ಮಿನಿ ವಿಧಾನಸೌಧ ನಿಮರ್ಾಣ ಮತ್ತಿತರ ಯೋಜನೆಗಳು ತ್ವರಿತವಾಗಿ ಅನುಷ್ಠಾನಗೊಳ್ಳಲಿದೆ ಎಂದು ಅವರು ವಿವರಿಸಿದರು.
ಬಂಟ್ವಾಳ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಯಶವಂತ ದೇರಾಜೆ, ಮಂಗಳೂರು ಪಶ್ಚಿಮ ವಲಯ ಪೋಲೀಸ್ ಮಹಾನಿರೀಕ್ಷಕ ಅಮ್ರಿತ್ಪಾಲ್ ಶುಭ ಹಾರೈಸಿದರು.
ಎಎಸ್ಪಿ ರಾಹುಲ್ ಕುಮಾರ್, ಬಂಟ್ವಾಳ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ಕಾರಿಂಜ ಕ್ಷೇತ್ರದ ಮಾಜಿ ಆಡಳಿತ ಧರ್ಮದಶರ್ಿ ಪಿ.ಜಿನರಾಜ ಅರಿಗ ಮತ್ತಿತರರು ಇದ್ದರು.
ಎಸ್ಪಿ ಡಾ. ಶರಣಪ್ಪ ಎಸ್.ಡಿ. ಪ್ರಾಸ್ತಾವಿಕ ಮಾತನಾಡಿದರು. ಹೆಚ್ಚುವರಿ ಎಸ್ಪಿ ಎಂ.ಶೇಖರಪ್ಪ ಸ್ವಾಗತಿಸಿ, ಪುತ್ತೂರು ಪ್ರಭಾರ ಡಿವೈಎಸ್ಪಿ ಭಾಸ್ಕರ ರೈ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.