ಬಂಟ್ವಾಳ: ಅಕ್ರಮ ಮರಳುಗಾರಿಕೆಯನ್ನು ಸಕ್ರಮಗೊಳಿಸಬೇಕು.ಗಣಿ ಇಲಾಖೆ ಪರವಾನಿಗೆಯನ್ನು ನೀಡಿ ಕಾನೂನು ಬದ್ದಗೊಳಿಸಬೇಕೆಂದು ಬಂಟ್ವಾಳ ತಾಲೂಕು ಮರಳು ಗಣಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
ಶುಕ್ರವಾರ ಬಿ ಸಿ ರೋಡ್ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಭರತ್ ಶೆಟ್ಟಿಮಾಣಿ ಮಾತನಾಡಿ ದೊಡ್ಡ ದೊಡ್ಡಮರಳು ಗುತ್ತಿಗೆ ವಹಿಸಕೊಳ್ಳುವ ಮರಳು ಮಾರಾಟದ ಕುಳಗಳು ಗ್ರಾಮೀಣ ಭಾಗದ ಬಡ ಮರಳು ಗುತ್ತಿಗೆದಾರ ಮೇಲೆ ಸವಾರಿ ಮಾಡುತ್ತಿದೆ. ಗಣಿಗಾರಿಕೆ ಅಧಿಕಾರಗಳು ಕೂಡ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂವೆಯ ದಾಗಿ ಗ್ರಾಮೀಣ ಭಾಗದಲ್ಲಿ ಮನೆ, ಕಟ್ಟಡ ನಿರ್ಮಿಸುವ ಜನರಿಗೂ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ಮಾಣಿ, ಬರಿಮಾರು ಮತ್ತು ಕಡೇಶಿವಾಲಯ ಮತ್ತತರ ಗ್ರಾಮೀಣ ಭಾಗಗಳಲ್ಲಿ ಮರಳುಗಾರಿಕೆಯನ್ನು ಅಕ್ರಮ ಎಂದು ಕ್ರಮ ಕೈಗೊಳ್ಳುವ ಅಧಿಕಾರಿಗಳು ಉಳ್ಳಾಲ, ಅಡ್ಯಾರು ಮತ್ತಿತರ ಭಾಗಗಳಲ್ಲಿ ಅವ್ಯಾಹತವಾಗಿ ಮರಳುಗಾರಿಕೆ ನಡೆಸುತ್ತಿದ್ದರೂ ಯಾಕೆ ಮನ ವಹಿಸಿದೆ ಎಂದು ಪ್ರಶ್ನಸಿದರು.
ಪಾಣೆಮಂಗಳೂರು ಸೇತುವೆಯ ಬಳಿಯಲ್ಲಿ ದೊಡ್ಡ ಮಟ್ಟದ ಮರಳು ಗುತ್ತಿಗೆದಾರರು ಮರಳುಗಾರಿಕೆ ಮಾಡುತ್ತಿರುವುದಕ್ಕೆ ಗಣಿ ಇಲಾಖೆ ಪರವಾನಗಿ ನೀಡಿದಿಯಾ ನೇತ್ರಾವತಿ ಒಂದೇ ನದಿ ದಡದಲ್ಲಿ ಮರಳುಗಾರಿಕೆಗೆ ತಾರತಮ್ಯ ಏಕೆ? ದೊಡ್ಡ ಮಟ್ಟದಲ್ಲಿ ಮರಳು ಗತ್ತಿಗೆದಾರರು ಮತ್ತು ಗಣಿ ಇಲಾಖೆಯವರು ಒಳ ಒಪ್ಪಂದ ಮಾಡಿಕೊಂಡು ಬಡ ಮರಳು ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ದೂರಿದರು. ಜಿಲ್ಲಾ ಟ್ಟದ ಮರಳು ಮಾಫಿಯಾ ದೂರದ ಬೆಂಗಳೂರಿಗೆ ಪ್ರ ತಿನಿತ್ಯ 500ರಿಂದ 600 ಲಾರಿಗಳಲ್ಲಿ ಮರಳು ಸಾಗಾಟ ನಡೆಸುತ್ತಿದೆ. ಮಿತಿಮೀರಿದ ಮರಳು ಹೇಗೆರುವುದರ ಜತೆಗೆ ಈ ಅಕ್ರಮ ಸಾಗಾಟದ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಎಂದ ಅವರು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಲಾರಿಗಳನ್ನು ಹೆದ್ದಾರಿಯಲ್ಲಿಯೇ ತಡೆದು ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಗದೀಶ್ ಮಾಣಿ, ನರಸಿಂಹ ಮಾಣಿ, ಸಿದ್ದಿಕ್ ಮಾಣಿ, ದಿನೇಶ್ ಉಪಸ್ಥಿತರಿದ್ದರು.
