- ಮೂಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವು ಪವಿತ್ರ ಪಾವನ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರದಲ್ಲಿ ನೆಲೆಯಾದ ದುರ್ಗೆ ಬಪ್ಪಬ್ಯಾರಿ ಎಂಬ ಮುಸಲ್ಮಾನ ವ್ಯಾಪಾರಿಗೆ ಒಲಿದಿದ್ದು ಇದರಿಂದ ದುರ್ಗೆಗೆ ಬಪ್ಪಬ್ಯಾರಿ ದೇವಸ್ಥನವನ್ನು ಕಟ್ಟಿದ ಎಂಬುದು ಇಲ್ಲಿನ ತಲ ಪುರಾಣ ಮೀನಮಾಸದ ಶುದ್ಧ ಚತುರ್ಧಶಿಯಂದು ಧ್ವಜಾರೋಹಣವಾಗಿ ಏಳನೇ ದಿವಸದಂದು ಹಗಲು ರಥಾರೋಹಣವಾಗಿ ರಾತ್ರಿ ಶಯನೋತ್ಸವ ಅಲಂಕಾರದೊಂದಿಗೆ ಮಹಾಪೂಜೆ, ಮರುದಿನ ಎಂಟನೇ ದಿನದಂದು ಕವಾಟೋದ್ಘಾಟನೆ, ರಾತ್ರಿ ಬ್ರಹ್ಮರಥೋತ್ಸವ, ಅವಬೃತದೊಂದಿಗೆ ಜಾತ್ರಾ ಮಹೋತ್ಸವ ನಡೆಯುತ್ತದೆ.

- ಈ ಎಂಟು ದಿನಗಳ ದಾರ್ಮಿಕ ಕಾರ್ಯಕ್ರಮದಲ್ಲಿ ದುರ್ಗೆಯ ಶಯನೋತ್ಸವ ವಿಶೇಷವಾದುದು ಹಿಂದಿನ ಕಾಲದಿಂದಲೂ ಶಯನದ ಹೂ ಬಹಳ ಪ್ರಮುಖ್ಯವನ್ನು ಪಡೆದಿದೆ. ಭಕ್ತರು ಅರ್ಪಿಸುವ ಮಲ್ಲಿಗೆಯನ್ನು ದೇವಸ್ಥಾನದ ಪೌಳಿಯಲ್ಲಿ ಬಹಳ ಚಂದವಾಗಿ ಜೋಡಿಸುತ್ತಾರೆ. ನಂತರ ಎಲ್ಲಾ ಮಲ್ಲಿಗೆಯನ್ನು ಗರ್ಭಗುಡಿಯ ಒಳಗೆ ಜೋಡಿಸುತ್ತಾರೆ. ಇದರಿಂದ ದುರ್ಗೆಯು ತೃಪ್ತಿಯಾಗಿ ಭಕ್ತರು ಯಾವ ಉದ್ದೇಶದಿಂದ ಮಲ್ಲಿಗೆ ಸಲ್ಲಿಸುತ್ತಾರೋ ಆ ಉದ್ದೇಶವನ್ನು ಈಡೇರಿಸುತ್ತಾರೆ ಎಂಬುದು ಜನರ ನಂಬಿಕೆ. ಈ ವರ್ಷವು ಸುಮಾರು ೩೫ ಸಾವಿರದಷ್ಟು ಚೆಂಡು ಮಲ್ಲಿಗೆ ಶ್ರೀ ದೇವಿಗೆ ಸಮರ್ಪಣೆಯಾಗಿದೆ, ಬಾಳೆ ಗಿಡದ ಹಗ್ಗದಿಂದ ಕಟ್ಟಿದ ಮಲ್ಲಿಗೆಯನ್ನು ಮಾತ್ರ ದುರ್ಗೆಗೆ ಸಮರ್ಪಿಸುದು ಇಲ್ಲಿನ ವಿಶೇಷ ಮಲ್ಲಿಗೆ ಮಲ್ಲಿಗೆಯನ್ನು ದುರ್ಗೆಗೆ ಅರ್ಪಿಸುವುದರಿಂದ ಅರ್ಪಿಸಿದವರ ಮನದ ಕೋರಿಕೆ ನೇರವೇರುತ್ತದೆ ಎಂಬ ಪ್ರತೀತಿ ಇದೆ.
- ರಾತ್ರಿ ರಥೋತ್ಸವದ ದಿನ ಬೆಳಿಗ್ಗೆ ದೇವಸ್ಥಾನದ ಬಾಗಿಲು ತೆರೆದು ದುರ್ಗೆಗೆ ಮಹಾಪೂಜೆಯಾದ ನಂತರ ಗರ್ಭಗುಡಿಯಲ್ಲಿದ್ದ ಮಲ್ಲಿಗೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚುವ ಕ್ರಮ ಇದೆ. ಒಟ್ಟಿನಲ್ಲಿ ಇಷ್ಟೋಂದು ಮಲ್ಲಿಗೆ ಶ್ರೀ ದುರ್ಗೆಗೆ ಸಮರ್ಪಣೆಯಾಗುದು ವಿಶೇಷವೇ ಸರಿ.
ನಿಶಾಂತ್ ಕಿಲೆಂಜೂರು
