ಮೂಡುಬಿದರೆ: ಅಪ್ಪಾಜಿ ಸ್ಪೋಟ್ರ್ಸ್ ಕ್ಲಬ್ ಭದ್ರಾವತಿ ಇವರ ಆಶ್ರಯದಲ್ಲಿ ಎ.2 ರಿಂದ 5 ರವರೆಗೆ ಭದ್ರಾವತಿಯಲ್ಲಿ ನಡೆದ ರಾಷ್ಟ್ರಮಟ್ಟದ ಆಹ್ವಾನಿತ ಪುರುಷ ಮತ್ತು ಮಹಿಳೆಯರ `ಎ’ಗ್ರೇಡ್ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ತಂಡವು ವಿಜಯಿಯಾಗಿದೆ.
ಸೆಮಿ ಫೈನಲ್‍ನಲ್ಲಿ ಆಳ್ವಾಸ್ ದಿಲ್ಲಿಯ ಪಾಲಮ್ ತಂಡವನ್ನು 8-3 ರಿಂದ ಮತ್ತು ಬಾಬಾ ಹರಿದಾಸ್ ಹರಿಯಾಣ ತಂಡ ತಮಿಳುನಾಡಿನ ಎಸ್.ಎಂ.ಸಿ. ಒಟ್ವ ಚೆತ್ತಮ್ ತಂಡವನ್ನು 19-17 ರ ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದವು.
ಫೈನಲ್‍ನಲ್ಲಿ ಆಳ್ವಾಸ್ ಬಾಬಾ ಹರಿದಾಸ್ ತಂಡವನ್ನು 16-16 ರ ಅಂತರದಲ್ಲಿ ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಎಸ್.ಎಂ.ಸಿ. ತಂಡದ ಯೋಗಲಕ್ಷ್ಮೀ ಉತ್ತಮ ರೈಡರ್, ಬಾಬಾ ಹರಿದಾಸ್ ತಂಡದ ರವಿತಾ ಉತ್ತಮ ಕ್ಯಾಚರ್ ಹಾಗೂ ಆಳ್ವಾಸ್ ತಂಡದ ಮುತ್ತವ್ವ ನಿಡಾವಣಿ ಉತ್ತಮ ಆಲ್‍ರೌಂಡರ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.

mbd_april9_6

By Suddi9

Leave a Reply

Your email address will not be published. Required fields are marked *