ಸುದ್ದಿ9ಬಂಟ್ವಾಳ: ಆರೋಪಿಗಳ ಬಂಧನಕ್ಕೆ ಬಂಟ್ವಾಳ ತಾಲೂಕು ವಿಶ್ವ ಹಿಂದೂ ಪರಿಷತ್ ಮೂರು ದಿನಗಳ ಗಡುವು ನೀಡಿದ್ದು, ಇಂದು (ಮಾ.25)ಬಂದ್ಗೆ ಕರೆ ನೀಡಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಬಂದ್ನಿಂದ ಜನಸಾಮಾನ್ಯರಿಗೆ ಆಗುವ ತೊಂದರೆ ಮತ್ತು ಪೊಲೀಸ್ ಅಧಿಕಾರಿಗಳ ಕೋರಿಕೆಯಂತೆ ಇಂದಿನ ಬಂದ್ ಕರೆ ವಾಪಾಸ್ ಪಡೆದಿದ್ದರು.

ರಾಜೇಶ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು. ಹಾಗೂ ಪೊಲೀಸರ ಕಾಯರ್ಾಚರಣೆಗೆ ನೈತಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಇಂದು ಬೆಳಿಗ್ಗೆ (ಮಾ.25) ಬಂಟ್ವಾಳ ನಗರ ಠಾಣೆಯ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಹಿಂದೂ ಪರಿಷತ್ ನ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ, ಸಂಯೋಜಕ ಗುರುರಾಜ್, ಕಾರ್ಯದಶರ್ಿ ಸುರೇಶ್ ಬೆಂಜನಪದವು, ಪ್ರಮುಖರಾದ ಭಾಸ್ಕರ್ ಧರ್ಮಸ್ಥಳ, ವಿಜೇತ್ ತುಂಬೆ, ಭರತ್ ಕುಮ್ಡೇಲು, ಯಾದವ ಶೆಟ್ಟಿ ಸರಪಾಡಿ, ಸುರೇಶ್ ಕುಲಾಲ್, ಪುಷ್ಪರಾಜ್, ಶಿವಪ್ರಸಾದ್ ಬಂಟ್ವಾಳ ಉಪಸ್ಥಿತರಿದ್ದರು
