A. P. J. Abdul-Kalama. 1 mangloor coming apj abdul kalam

ಸುದ್ದಿ9 ಮಂಗಳೂರು: ಮಾಜಿ ರಾಷ್ಟ್ರಪತಿ ದೇಶದ ಹೆಮ್ಮೆಯ ವಿಜ್ಞಾನಿ ಶ್ರೀ ಅಬ್ದುಲ್ ಕಲಾಂ ಅವರು ಏಪ್ರಿಲ್ 1ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಲಾಂ ಅವರು ನಗರಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

A. P. J. Abdul-Kalam
a. 1 mangloor coming apj abdul kalam

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ದೇಶದ ಮಾಜಿ ರಾಷ್ಟ್ರಪತಿ ಇದೇ ಮೊದಲ ಬಾರಿ ದಕ್ಷಿಣ ಕನ್ನಡ ಪಂಚಾಯತ್ ಸಂಭಾಂಗಣದಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತೀ ಕಾಲೇಜಿನಿಂದ ಇಬ್ಬರು ವಿದ್ಯಾಥರ್ಿಗಳು ಭಾಗವಹಿಸಬಹುದಾಗಿದೆ. ಭಾಗವಹಿಸಲು ಬಯಸುವ ವಿದ್ಯಾಥರ್ಿಗಳು ಕಡ್ಡಾಯವಾಗಿ ಕಾಲೇಜಿನ ದೃಢೀಕರಣ ಪತ್ರ ಮತ್ತು ಎಪಿಕ್ ಕಾಡರ್್ ತರಬೇಕು. ಪ್ರಥಮ ಬಾರಿ ಮತದಾನ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಆದ್ಯತೆ ನೀಡಲಾಗಿದ್ದು, ಉಳಿದ ವಿದ್ಯಾಥರ್ಿಗಳು ಇ ಕಾರ್ಯಕ್ರಮವನ್ನು ವೀಕ್ಷಿಸಬೇಕೆಂಬ ಉದ್ದೇಶದಿಂದ ಪ್ರತೀ ಕಾಲೇಜಿನಲ್ಲಿ ಟಿವಿ ಅಳವಡಿಸಿ ಕಾರ್ಯಕ್ರಮದ ನೇರ ಪ್ರಸಾರವನ್ನು ವಿದ್ಯಾಥರ್ಿಗಳಿಗೆ ನೋಡಲು ಅನುವು ಮಾಡಿಕೊಡುವಂತೆ ಕಾಲೇಜು ಆಡಳಿತ ವರ್ಗಕ್ಕೆ ಸುಚಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು

By suddi9

Leave a Reply

Your email address will not be published. Required fields are marked *