ಬಂಟ್ವಾಳ ; ಅಕ್ರಮವಾಗಿ ದನಸಾಗಾಟ ನಡೆಸುತ್ತಿದ್ದ ಈರ್ವರನ್ನು ಬಂಟ್ವಾಳ ನಗರ ಪೊಲೀಸರು ಭಾನುವಾರ ಜಕ್ರಿಬೆಟ್ಟು ಸಮೀಪ ಕಾರ್ಯ ಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಪುತ್ತೂರು ಮುಕ್ವೆ ನಿವಾಸಿ ಮಹಮ್ಮದ್ ಶರೀಫ್ ಹಾಗೂ ಕೆದಿಲ ನಿವಾಸಿ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬೆಳ್ತಂಗಡಿಯ ಮನೆಯೊಂದರ ಹಟ್ಟಿಯಿಂದ ಜರ್ಸಿ ದನಗಳನ್ನು ಕದ್ದು ಸಾಗಾಟ ನಡೆಸುತ್ತಿದ್ದರು. ಇದೇ ವೇಳೆ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ನಗರ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಆರೋಪಿಗಳನ್ನು ವಶಕ್ಕೆ ತೆಗದುಕೊಂಡಿದ್ದಾರೆ.


