ಪುತ್ತೂರು:’ಬೃಹತ್ ಕೈಗಾರಿಕೆಗಳು ತುಳುನಾಡಿಗೆ ಪ್ರವೇಶಿಸಿ, ನಮ್ಮಹಲವುಪುಣ್ಯಕ್ಷೇತ್ರಗಳು ಸ್ಥಳಾಂತರವಾಗುತ್ತಿವೆ. ಪಾರಂಪರಿಕಮಹತ್ತ್ವವುಳ್ಳವಸ್ತುಗಳು, ಭೌತಿಕಸಾಮಾಗ್ರಿಗಳು ನಾಶವಾಗುತ್ತಿವೆ. ಜನಪದಸಾಹಿತ್ಯಕಣ್ಮರೆಯಾಗುತ್ತಿವೆ. ಇಂಥ ವಿಷಯ ಪರಿಸ್ಥಿತಿಯಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಸ್ಥಳ ಪುರಾಣ, ಐತಿಹ್ಯಗಳನ್ನು ಕಲೆ ಹಾಕಿ ವಿಶ್ಲೇಷಿಸುವ ಕೃತಿಗಳು ಅಧಿಕ ಸಂಖ್ಯೆಯಲ್ಲಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ’ಮರಕ್ಕೂರುಜನನದ ದೈವಗಳು ಕೃತಿ ರಚನೆಯ ಪ್ರಯತ್ನ ಶ್ಲಾಘನೀಯವೆಂದು ಉಪ್ಪಿನಂಗಡಿಯ ವೈದ್ಯಡಾ| ನಿರಂಜನರೈಅವರು ಹೇಳಿದರು.

ಶ್ರೀ ಕ್ಷೇತ್ರ ಮರಕ್ಕೂರಿನ ವಾರ್ಷಿಕ ಮಹೋತ್ಸವದಲ್ಲಿ ಡಾ| ನವೀನ್ ಕುಮಾರ್ ಮರಿಕೆ ಹಾಗೂ ಹರೀಶ್ ಮಂಜೊಟ್ಟಿ ಅವರು ರಚಿಸಿದ ‘ಮರಕ್ಕೂರುಜನನದ ದೈವಗಳು’ಕೃತಿಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಹಿರಿಯರಾದ ಮಾಯಿಲಪ್ಪ ಪೂಜಾರಿ ಕೃತಿ ಲೋಕಾರ್ಪಣೆಗೈದರು. ಉದ್ಯಮಿ, ಧಾರ್ಮಿಕ ನೇತಾರ ಜಯಂತ ನಡು ಬೈಲುಅಧ್ಯಕ್ಷತೆ ವಹಿಸಿದ್ದರು. ಹರೀಶ್ ಮಂಜೊಟ್ಟಿ ಸ್ವಾಗತಿಸಿ, ಪವಿತ್ರಾ ಪ್ರಸ್ತಾವನೆಗೈದರು. ಕ್ಷೇತ್ರದ ಪ್ರಮುಖರಾದ ವಸಂತ ಪೂಜಾರಿ, ಶ್ರೀಧರ ಪೂಜಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆನಂದ ಕಾರ್ಯಕ್ರಮ ನಿರೂಪಿಸಿದರು. ವಸಂತಕಲ್ಲರ್ಪೆ ವಂದಿಸಿರು.
