ಬಂಟ್ವಾಳ : ನರಿಕೊಂಬು ಗ್ರಾ.ಪಂ. ವ್ಯಾಪ್ತಿಯ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ರಸ್ತೆಗೆ ಎ.ಎಮ್.ಆರ್ ಪ್ರಾಯೋಜತ ರೂ.10ಲಕ್ಷ ವೆಚ್ಚದ ರಸ್ತೆ ಡಾಮರೀಕರಣದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನೆರವೇರಿಸಿದರು .

ಜಿ.ಪಂ.ಸದಸ್ಯೆ ಮಮತಾ ಗಟ್ಟಿ , ತಾ.ಪಂ .ಸದಸ್ಯ ಆನಂದ ಶಂಭೂರು , ಎ.ಎಮ್.ಆರ್ ನ ಸಂಕಪ್ಪ ಶೆಟ್ಟಿ , ಪ್ರೇಮ್ ನಾಥ್ ಟಿ. , ನಾಗರಿಕ ಜಾಗೃತಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ , ಮಂಜುನಾಥ್ ಭಟ್ , ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ , ಗ್ರಾ.ಪಂ.ಅಧ್ಯಕ್ಷೆ ಸುಮತಿ ಸದಾನಂದ , ಕೆ.ಡಿ.ಪಿ.ಸದಸ್ಯ ಉಮೇಶ್ ಬೋಳಂತೂರು , ಅಲ್ಫೋನ್ಸ್ ಮೆನೆಜಸ್ , ಅಲ್ಬಟರ್್ ಮೆನೆಜಸ್ ಗ್ರಾ.ಪಂ.ಸದಸ್ಯರಾದ ಆನಂದ ಸಾಲಿಯಾನ್ , ರಾಜೇಶ್ ಶಾಂತಿಲ , ಜಾನಕಿ ಬೈಪಾಡಿ , ಕೃಷ್ಣಪ್ಪ ನಾಟಿ ಮತ್ತಿತರರು ಉಪಸ್ಥಿತರಿದ್ದರು.
