ಕಮ್ಮಾಜೆ:ನಾಗಶ್ರೀ ಮಿತ್ರವೃಂದದ ವತಿಯಿಂದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದಾಟವು ಮಾ.22ರಂದು ಭಾನುವಾರ ತೆಂಕಬೆಳ್ಳೂರು ಕಾವೇಶ್ವರ ದೇವಸ್ಥಾನದ ಚೆಂಡಿನ ಗದ್ದೆಯಲ್ಲಿ ನಡೆಯಲಿದೆ.

ಸೂಪರ್ ಸಿಕ್ಸ್ ಪಂದ್ಯಾಟದ ಪ್ರಥಮ ಬಹುಮಾನ 10,000 ನಗದು ಹಾಗೂ ನಾಗಶ್ರೀ ಟ್ರೋಫಿ
ದ್ವಿತೀಯ ಬಹುಮಾನ 5,000 ನಗದು ಹಾಗೂ ನಾಗಶ್ರೀ ಟ್ರೋಫಿ ಅಲ್ಲದೇ ಉತ್ತಮ ಎಸೆತಗಾರ, ಉತ್ತಮ ದಾಂಡಿಗ ಹಾಗೂ ಸವ್ಯಸಾಚಿ ಪ್ರಶಸ್ತಿ ನೀಡಲಾಗುವುದು ಎಂದು ನಾಗಶ್ರೀ ಮಿತ್ರವೃಂದದ ಪ್ರಕಟನೆ ತಿಳಿಸಿದೆ
