ಮೂಡುಬಿದರೆ : ಸಾರ್ವಜನಿಕ ಶಿಕ್ಷಣ ಇಲಾಖೆಯ 2015-16ನೇ ಸಾಲಿನಲ್ಲಿ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಫ್ರೌಡಶಾಲೆಗಳಲ್ಲಿ ವಿದ್ಯಾರ್ಥಿ ಪ್ರವೇಶಾತಿಯನ್ನು ನಿಯಂತ್ರಿಸಲು ಸರಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು ಮೂಡುಬಿದರೆ ವಲಯದಲ್ಲಿ ಬೋಧನಾ ಮಾಧ್ಯಮವಾರು ಲಭ್ಯವಿರುವ ಸೀಟುಗಳು ಹಾಗೂ ಪ್ರವೇಶ ಪ್ರಕ್ರಿಯೆಯ ಪರಿಷ್ಕøತ ವೇಳಾ ಪಟ್ಟಿಯನ್ನು ಶಾಲಾ ಮುಖ್ಯಸ್ಥರು ಕಡ್ಡಾಯವಾಗಿ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲು ಸೂಚನೆ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕರಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಅರ್ಜಿ ವಿತರಣೆಯ ಕಾರ್ಯವು ಮಾ15 ರಿಂದ ಎಪ್ರಿಲ್ 30ರ ವರೆಗೆ ನಡೆಯಲಿದೆ. ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಮೇ 8ರ ವರೆಗೆ ಕಾಲಾವಕಾಶ ನೀಡಲಾಗಿದೆ. ಸೀಟು ಹಂಚಿಕೆಯಾದ ಶಾಲೆಗಳಲ್ಲಿ ಪ್ರವೇಶ ಪಡೆಯಲು ಮೇ 21 ಕೊನೆಯ ದಿನವಾಗಿದ್ದು ದ್ವಿತೀಯ ಆಯ್ಕೆ ಪಟ್ಟಿಯನ್ನು ಮೇ 25ರಂದು ಪ್ರಕಟಿಸಲಿದ್ದು ಈ ಪಟ್ಟಿಯಲ್ಲಿ ಆಯ್ಕೆಯಾದವರಿಗೆ ಮೇ 30ರವರೆಗೆ ಪ್ರವೇಶ ಪಡೆಯಲು ಅವಕಾಶವಿದೆ.
ಎಲ್.ಕೆ.ಜಿ ಅಥವಾ 1ನೇ ತರಗತಿ ಹೊರತುಪಡಿಸಿ ಇತರೆ ತರಗತಿಗಳಿಗೆ ಪ್ರವೇಶಾತಿ ನೀಡಲು ಹಿಂದಿನ ತರಗತಿಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನೇ ಅರ್ಹತೆಯಾಗಿ ಪರಿಗಣಿಸಬೇಕು. ಪ್ರವೇಶ ಪರೀಕ್ಷೆ ಅಥವಾ ಸಂದರ್ಶನವನ್ನು ನಡೆಸುವಂತಿಲ್ಲ. ಅನುದಾನರಹಿತ ಶಾಲೆಯೂ ಸಹ ನಿಯಮಾನುಸಾರ ನಿಗದಿ ಪಡಿಸಿದ ಬೋಧನಾ ಶುಲ್ಕದ ಮೊತ್ತವನ್ನು ಮೊದಲೆ ತಿಳಿಸಬೇಕು. ಮಾಹಿತಿ ಪುಸ್ತಕ ಯಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು. ಪ.ಜಾ, ಪ.ವರ್ಗ, ಗುಂಪು ಒಂದರಲ್ಲಿನ ಮಕ್ಕಳಿಂದ ಶುಲ್ಕ ವಸೂಲಿ ಮಾಡುವಂತಿಲ್ಲ. ಇತರ ವಿದ್ಯಾರ್ಥಿ/ಪೋಷಕರಿಂದ ನಿಗದಿಪಡಿಸಿದ ಶುಲ್ಕ ಹೊರತಾಗಿ ಯಾವುದೇ ವಂತಿಗೆ, ಕ್ಯಾಪಿಟೇಶನ್ ಫೀಸು ವಸೂಲಿ ಮಾಡಬಾರದು. ಅದೇ ರೀತಿ ಆರ್.ಟಿ.ಇ ಪ್ರಕಾರ ಪ್ರತಿಷ್ಠಿತ ಶಾಲೆಗಳಲ್ಲಿ ಶೇ. 25 ಸೀಟುಗಳನ್ನು ಭರ್ತಿಮಾಡಲು ಪ್ರತ್ಯೇಕ ಸೂಚನೆಗಳನ್ನೇ ಪಾಲಿಸಬೇಕು. ಉಳಿದ ಶೇ.75 ಪ್ರಮಾಣದ ಸೀಟುಗಳನ್ನು ಭರ್ತಿ ಮಾಡಲು ಪಾರದರ್ಶಕ ವಿಧಿವಿಧಾನಗಳನ್ನು ಆಡಳಿತ ಮಂಡಳಿ ತನ್ನ ಬೈಲಾದಲ್ಲಿ ನಿರ್ದಿಷ್ಟಪಡಿಸಿ ಸಾಮಾನ್ಯ ವರ್ಗದ ಸೀಟುಗಳನ್ನು ಪೋಷಕರ ಸಮ್ಮುಖದಲ್ಲಿ ಆಯ್ಕೆಮಾಡಬೇಕು. ಶೇಕಡಾ 25 ಆರ್.ಟಿ.ಇ ಸೀಟುಗಳನ್ನು ಹೊರತುಪಡಿಸಿ ಲಭ್ಯವಿರುವ ಉಳಿದ ಶೇಕಡಾ 75 ಸೀಟುಗಳಲ್ಲಿ ಶಾಲೆಗೆ ಈಗಾಗಲೇ ದಾಕಲಾಗಿರುವ ಒಡಹುಟ್ಟಿದವರಿಗೆ, ವಿಕಲ ಚೇತನರಿಗೆ, ಅನಾಥರಿಗೆ, ಪ.ಜಾ, ಪ.ವರ್ಗ ಹಿಂದುಳಿದವರ್ಗ ಮುಂತಾದ ಗುಂಪುಗಳಿಗೆ ಹಾಗೂ ಸಾಮಾನ್ಯ ವರ್ಗದವರಿಗೆ ಮೀಸಲಾತಿ ನೀಡುವುದು. ಮೀಸಲಿಟ್ಟಿರುವ ಸೀಟುಗಳ ಸಂಖ್ಯೆ, ಮಾಧ್ಯಮ, ತರಗತಿ, ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿ, ನಿಗದಿಪಡಿಸುವ ಬೋಧನಾ ಶುಲ್ಕ ಇತ್ಯಾದಿ ಮಾಹಿತಿಯನ್ನು ಶಾಲಾ ಮುಖ್ಯಸ್ಥರು ಪ್ರಕಟಣಾ ಫಲಕದಲ್ಲಿ ಪ್ರಕಟಿಸುವುದರ ಜೊತೆಗೆ ಸದರಿ ಮಾಹಿತಿಯನ್ನು ಮೂಡಬಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಬೇಕೆಂದು ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೂಡುಬಿದಿರೆ ಬಿ.ಇ.ಓ ಕಛೇರಿಯ ಸಹಾಯವಾಣಿ ಸಂಖ್ಯೆ : 08258-236461ನ್ನು ಸಂಪರ್ಕಿಸಬಹುದು.

By Suddi9

Leave a Reply

Your email address will not be published. Required fields are marked *