ಮೂಡುಬಿದರೆ: ಹ್ಯಾಪಿ ಕ್ಲಬ್ ಪುತ್ತಿಗೆಪದವು ಇದರ 5 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರಗೌಡ, ನಾಟಕಕಾರ ಜಿ.ಜಿ ಪುತ್ತಿಗೆ, ಸಮಾಜಸೇವಕ ವಸಂತ ಶೆಟ್ಟಿ ಪುತ್ತಿಗೆಗುತ್ತು, ಕರಾಟೆ ತರಬೇತುದಾರ ನದೀಂ ಅವರನ್ನು ಸನ್ಮಾನಿಸಿ, ಕಿರಿಯ ಕರಾಟೆಪಟು ಹರ್ಷಿತ ಕೋಟ್ಯಾನ್ ಗೆ ಧನಸಹಾಯ ಮಾಡಲಾಯಿತು.

ಸಚಿವ ಅಭಯಚಂದ್ರ ಜೈನ್, ಮೂಡುಬಿದರೆ ಪುರಸಭಾಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ, ತಾ.ಪಂ ಸದಸ್ಯ ಪ್ರಕಾಶ್ ಪಿ., ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಉಮಾನಾಥ ಕರ್ಕೇರಾ , ವಿವೇಕಾನಂದ ಕಾಮತ್, ರಂಜಿತ್ ಪೂಜಾರಿ, ಯಾದವ ಶೆಟ್ಟಿ, ಉದಯ ಗೌಡ, ಉಪಸ್ಥಿತರಿದ್ದರು.
