ಮೂಡುಬಿದಿರೆ:ನಿವೃತ್ತ ಶಿಕ್ಷಕಿ, ಪ್ರಾಂತ್ಯ ಗ್ರಾಮದ ವಾಣಿ ವಿಲಾಸ ನಿವಾಸಿ ಲೂಸಿ ವಾಸ್(84)ಅವರು ಉಡುಪಿ ಕಲ್ಯಾಣಪುರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು.

ಅಶ್ವತ್ಥಪುರದ ವಾಣಿ ವಿಲಾಸ ಪ್ರಾಥಮಿಕ ಶಾಲೆಯಲ್ಲಿ ಸುಮಾರು 35 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಪ್ರಾಂತ್ಯ ಗ್ರಾಮದ ತಮ್ಮ ಸ್ವಗೃಹದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದರು. ಮೃತರ ಅಂತ್ಯ ಸಂಸ್ಕಾರ ಮಾರ್ಚ್. 8 ರಂದು ಭಾನುವಾರ ಮೂಡುಬಿದಿರೆ ಚರ್ಚ್ನ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬಿಕರು ತಿಳಿಸಿದ್ದಾರೆ.
