ಮೂಡುಬಿದರೆ: ಬೆಂಗಳೂರಿನ ಗಾಂಧಿನಗರದಲ್ಲಿ ನಡೆದ ಅನ್ವೇಷಣ-15 ತಾಂತ್ರಿಕ ಮೇಳದಲ್ಲಿ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಚೇತನ್ ಪಿ.ಎಂ. ಹಾಗೂ ಉಮೇಶ್ ಸನದಿ ತಾಂತ್ರಿಕ ಮಾದರಿ ಪ್ರದರ್ಶನಗೊಂಡಿತು.
mbd_march3_7
300 ಮಾದರಿಗಳಲ್ಲಿ ಪೈಕಿ ಅಂತಿಮ ಹಂತದ ಸ್ಪರ್ಧೆಯಲ್ಲಿ ಆಯ್ಕೆಯಾಗಿ, 49 ಇತರ ಯೋಜನೆಗಳೊಂದಿಗೆ ಡಾ.ಎಂ.ವಿ ಶೆಟ್ಟಿ ಕಾಲೇಜಿನ ತಾಂತ್ರಿಕ ಮಾದರಿ ಪ್ರದರ್ಶನಗೊಂಡಿದೆ. ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಭರತೇಶ್ ಬಿ ಅವರ ಮಾರ್ಗದರ್ಶನದೊಂದಿಗೆ ರೂಪಿಸಲಾದ `ಭವಿಷ್ಯದ ಸೌರಶಕ್ತಿ ವರ್ಧಿತ ವ್ಯವಸ್ಥೆ’ ಯೋಜನೆಯಲ್ಲಿ ಮಿಜಾರಿನ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾದ ಮಹಮ್ಮದ್ ಸಿಯಾಬುದ್ದಿನ್ ಮತ್ತು ಮಹಮ್ಮದ್ ಶಪಿಕ್ ಭಾಗವಹಿಸಿದ್ದರು.
ಈ ಯೋಜನೆಯಲ್ಲಿ ಸೌರಫಲಕದ ಮೇಲೆ ವರ್ಧಿಸುವ ಗಾಜುಗಳನ್ನು ಅಳವಡಿಸಿ ಹಾಗೂ ಸೌರಶಕ್ತಿಯ ಜಾಢೀಕರಣದ (ಣಡಿಚಿಛಿಞiಟಿg) ಸಾಮಥ್ರ್ಯ ಹೊಂದಿರುವ ಸಮರ್ಥವಾದ ವಿಧಾನದಿಂದ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ.
ಮಾದರಿಯ ವಿಶೇಷತೆ:
ಸ್ವಯಂಚಾಲಿತ ವ್ಯವಸ್ಥೆಯು ಮೈಕ್ರೋಕಂಟ್ರೋಲರ್ ನಿಂದ ನಿಯಂತ್ರಿಸಲ್ಪಟ್ಟು ಐಆಖ ಸಂವೇದಕಗಳ ಮೂಲಕ ಆಕಾಶದಲ್ಲಿನ ಸೂರ್ಯನ ಚಲನೆಗೆ ತಕ್ಕಂತೆ ಸೌರಫಲಕವನ್ನು ಆ ದಿಕ್ಕಿಗೆ ಚಲಿಸುವಂತೆ ಮಾಡುತ್ತದೆ. ಇದರೊಂದಿಗೆ ವ್ಯವಸ್ಥೆಯ(ಯೋಜನೆಯ) ಸುರಕ್ಷತೆಯನ್ನು ಖಾತರಿ ಪಡಿಸುವುದಕ್ಕಾಗಿ ಮತ್ತು ಮುಖ್ಯ ಘಟಕದಲ್ಲಿ ಮಿತಿ ಮೀರುವ ತಾಪವನ್ನು ತಡೆಹಿಡಿಯುವುದಕ್ಕಾಗಿ, ಸಮರ್ಥವಾಗಿ ತಂಪಾಗಿಸುವ ಉಪವ್ಯವಸ್ಥೆಯನ್ನು ಮುಖ್ಯ ಘಟಕದಲ್ಲಿ ಅಳವಡಿಸಲಾಗಿದೆ. ಏಕಕಾಲದಲ್ಲಿಯೇ ಉತ್ಪತ್ತಿಯಾದ ವಿದ್ಯುತ್ ಶಕ್ತಿಯನ್ನು ಡಿ.ಸಿ. ಬ್ಯಾಟರಿ (ವಿದ್ಯುತ್ ಸಂಗ್ರಹ ಸಾಧನದಲ್ಲಿ) ಯಲ್ಲಿ ಸಂಗ್ರಹಿಸಿ ಮತ್ತು ರೈಲಿನ ಮಾದರಿಗೆ ಒದಗಿಸಿ (ಪೂರೈಸಿ) ಚಲಿಸುವಂತೆ ಮಾಡಲಾಗಿದೆ.
ಕಾಲೇಜಿನ ಮುಖ್ಯ ಕಾರ್ಯದರ್ಶಿ ಡಾ.ರಾಮ್‍ಗೋಪಾಲ್ ಶೆಟ್ಟಿ, ಪ್ರಾಂಶುಪಾಲ ಡಾ. ಸಂದೀಪ ಜೆ ನಾಯಕ್, ವಿಭಾಗದ ಮುಖ್ಯಸ್ಥ ಪ್ರೊ.ಗಂಗಾಧರ್ ಯೋಜನೆಯ ತಯಾರಿಯಲ್ಲಿ ಪ್ರೋತ್ಸಾಹಿಸಿದ್ದಾರೆ.

By Suddi9

Leave a Reply

Your email address will not be published. Required fields are marked *