ಮೈಸೂರು, ಮಾ.19 : ಪತ್ರಿಕೋದ್ಯಮದಿಂದ ಗಳಿಸಿರುವ ಜನಪ್ರಿಯತೆಯನ್ನು ಬೆನ್ನ ಹಿಂದೆ ಇಟ್ಟುಕೊಂಡು ‘ಅಬ್ ಕಿ ಬಾರ್ ಮೋದಿ ಸರ್ಕಾರ್’ ಎಂಬ ಮಂತ್ರದೊಡನೆ ಜನಪ್ರಿಯ ಅಂಕಣಕಾರ ಪ್ರತಾಪ್ ಸಿಂಹ ಅವರು ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು-ಕೊಡಗು ಕ್ಷೇತ್ರದಿಂದ ಲೋಕಸಭೆ ಚುನಾವಣೆ 2014ರಲ್ಲಿ ಸ್ಪರ್ಧೆಗಿಳಿದಿದ್ದಾರೆ.

ಪ್ರಥಮ ಬಾರಿಗೆ ಚುನಾವಣೆ ಕಣಕ್ಕಿಳಿದಿರುವ ಪ್ರತಾಪ್ ಸಿಂಹ ಅವರ ಎದುರಾಳಿಯಾಗಿ ಕಾಂಗ್ರೆಸ್ ನಿಂದ ಅನುಭವಿ ಎಚ್ ವಿಶ್ವನಾಥ್, ಜೆಡಿಎಸ್ ಅಭ್ಯರ್ಥಿ ಘೋಷಿಸಿಲ್ಲವಾದರೂ ಕಾಂಗ್ರೆಸ್ ನಾಯಕ ಸಿ.ಕೆ ಜಾಫರ್ ಷರೀಫ್ ಹೆಸರು ಕೇಳಿ ಬಂದಿದೆ. ಪ್ರತಾಪ್ ಸಿಂಹ ಅವರ ಹೆಸರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಕೇಳಿ ಬಂದಿದ್ದು ಆದರೆ ಕೊನೆ ಗಳಿಗೆಯಲ್ಲಿ ಸ್ಥಳೀಯ ಕಾರ್ಯಕರ್ತರ ವಿರೋಧದ ನಡುವೆಯೂ ಮೈಸೂರಿನ ಅಭ್ಯರ್ಥಿಯಾಗಿ ಬಿಸುರಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಾಪ್ ಸಿಂಹ ಅವರ ವೃತ್ತಿ ಬದುಕಿನ ಪ್ರಮುಖಾಂಶ ಇಲ್ಲಿದೆ:
ಪ್ರತಾಪ್ ಸಿಂಹ ಅವರ ಬದುಕಿನ ಮುಖ್ಯಾಂಶ * ಹೆಸರು : ಪ್ರತಾಪ್ ಸಿಂಹ * ವಯಸ್ಸು: 37 * ಹಾಸನ ಜಿಲ್ಲೆ ಮೂಲದ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. * ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. * ವಿವಾಹಿತ, ಒಂದು ಮಗುವಿನ ತಂದೆ
